ಪಾಲಕ್ ಸೊಪ್ಪು - 1 ಕಟ್ಟು
ಹಸಿಮೆಣಸು - 2
ತೆಂಗಿನತುರಿ - 4 ಟೀ ಚಮಚ
ಒಗ್ಗರಣೆಗೆ - ಉದ್ದಿನಬೇಳೆ, ಜೀರಿಗೆ, ಎಣ್ಣೆ, 1 ಒಣಮೆಣಸು
ಈರುಳ್ಳಿ - 1 ಹೆಚ್ಚಿದ್ದು
ಸಕ್ಕರೆ - 1 / 4 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ನಿಂಬೆರಸ - ಸ್ವಲ್ಪ
ನಿಂಬೆರಸ - ಸ್ವಲ್ಪ
ವಿಧಾನ
ಪಾಲಕ್ ಸೊಪ್ಪನ್ನು ತೊಳೆದು ಹೆಚ್ಚಿಕೊಳ್ಳಿ. ಒಗ್ಗರಣೆಗೆ ಎಣ್ಣೆ, ಉದ್ದಿನಬೇಳೆ, ಒಣಮೆಣಸು, ಜೀರಿಗೆ ಹಾಕಿ ಚಟಗುಟ್ಟಿದನಂತರ ಹಸಿಮೆಣಸು ಸೇರಿಸಿ. ನಂತರ ಈರುಳ್ಳಿ ಸೇರಿಸಿ ಸ್ವಲ್ಪ ಹುರಿಯಿರಿ. ನಂತರ ಹೆಚ್ಚಿದ ಪಾಲಕ್ ಸೊಪ್ಪು ಸೇರಿಸಿ 7 - 8 ನಿಮಿಷ ಬೇಯಿಸಿ. ಇದಕ್ಕೆ ನೀರು ಸೇರಿಸಬೇಕಿಲ್ಲ. ಪಾಲಕ್ ಅರ್ಧ ಬೆಂದಾಗ ಅದಕ್ಕೆ ಉಪ್ಪು, ಸಕ್ಕರೆ ಸೇರಿಸಿ. ಉರಿಯಿಂದ ಇಳಿಸುವಾಗ ತೆಂಗಿನತುರಿ ಸೇರಿಸಿ ಕೆಳಗಿಳಿಸಿ. ನಂತರ ನಿಂಬೆರಸ ಸೇರಿಸಿ ಕೈಯಾಡಿಸಿ. ಇದು ಅನ್ನ ಹಾಗೂ ಚಪಾತಿಯೊಡನೆ ತಿನ್ನಲು ಚೆನ್ನಾಗಿರುತ್ತದೆ.
ಇಂದು ಪಾಲಕ್ ಸೊಪ್ಪಿನ ಪಲ್ಯ ಮಾಡಿದ್ದೆ. ಇದು ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ಮಾಡಲು ಸಾಧ್ಯವಾಯಿತು. ರುಚಿ ತುಂಬಾ ಚೆನ್ನಾಗಿದೆ. ಮೊದಲ ಸಲ ಲಿಂಬೆರಸದೊಂದಿಗೆ ರುಚಿ ಚೆನ್ನಾಗಿತ್ತು. ಆದರೆ ಮುಂದಿನ ಸಲ ಒಗ್ಗರಣೆಯೊಂದಿಗೆ ಬೇವಿನ ಎಲೆ ಹಾಕಿದ್ದೆ ಮತ್ತು ಲಿಂಬೆರಸ ಇಲ್ಲದೇ ಸಕ್ಕರೆ ಬದಲಿಗೆ ಸ್ವಲ್ಪ ಬೆಲ್ಲ ಸೇರಿಸಿದೆ. ರುಚಿಯಾಗಿತ್ತು. ಇಂತಹ ಉತ್ತಮ ಅಡುಗೆ ಪರಿಚಯಿಸಿದುದಕ್ಕಾಗಿ ಧನ್ಯವಾದಗಳು-ಅರ್ಶದ್, ದುಬೈ.
ಪ್ರತ್ಯುತ್ತರಅಳಿಸಿನಿಮ್ಮ ಕಾಮೆಂಟ್ಸ್ ನೋಡಿ ತುಂಬಾ ಖುಷಿಯಾಯಿತು ಅರ್ಶದ್ ರವರೆ. Thank you :)
ಅಳಿಸಿ