Click here to read this recipe in English.
ಇದು ವಾಹ್ ಚೆಫ್ ರವರ ವೆಬ್ ಸೈಟ್ ನಿಂದ ಕಲಿತ ರೆಸಿಪಿ. ವಾಹ್ ಚೆಫ್ ರವರ ವಿಡಿಯೋ ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಸಾಮಗ್ರಿ
ಇದು ವಾಹ್ ಚೆಫ್ ರವರ ವೆಬ್ ಸೈಟ್ ನಿಂದ ಕಲಿತ ರೆಸಿಪಿ. ವಾಹ್ ಚೆಫ್ ರವರ ವಿಡಿಯೋ ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಸಾಮಗ್ರಿ
ಮೈದಾಹಿಟ್ಟು - 3 ಕಪ್
ಡ್ರೈ ಯೀಸ್ಟ್ - 1 ಟೀ ಸ್ಪೂನ್
ಹಾಲು/ಮೊಸರು (ಬೇಕಿದ್ದರೆ) - 1 ಕಪ್
ಎಣ್ಣೆ
ಉಪ್ಪು - ರುಚಿಗೆ ತಕ್ಕಷ್ಟು
ಸಕ್ಕರೆ - 1 / 2 ಟೀ ಸ್ಪೂನ್
ನೀರು - (ಅಂದಾಜು) 50 ಮಿ.ಲೀ.
ವಿಧಾನ
ಮೈದಾಹಿಟ್ಟನ್ನು ಜರಡಿಯಾಡಿಕೊಳ್ಳಿ.
1 ಕಪ್ ನಷ್ಟು ಬೆಚ್ಚಗಿನ ನೀರನ್ನು ಯೀಸ್ಟ್ ಗೆ ಸೇರಿಸಿ. ಇದಕ್ಕೆ ಸಕ್ಕರೆ, ಉಪ್ಪು, ಎಣ್ಣೆ ಸೇರಿಸಿ ಕಲಕಿ. ಬೇಕಿದ್ದರೆ ಹಾಲು ಅಥವಾ ಮೊಸರನ್ನು ಸೇರಿಸಬಹುದು. ಈ ಮಿಶ್ರಣವನ್ನು ಮೈದಾಹಿಟ್ಟಿಗೆ ಸೇರಿಸಿ ಕಲಸಿ. ಮಿಶ್ರಣ ತೀರಾ ಮೆತ್ತಗೆ ಕೈಗಂಟುವಂತೆ ಇರಲಿ. ಇದಕ್ಕೆ 2 - 3 ಚಮಚ ಎಣ್ಣೆ ಸೇರಿಸಿ 15 - 20 ನಿಮಿಷ ಮುಚ್ಚಿಡಿ.
ನಂತರ ಕೈಗಳನ್ನು ಒಣ ಹಿಟ್ಟಿನಲ್ಲಿ ಅದ್ದಿಕೊಳ್ಳುತ್ತ ಕಲಸಿಟ್ಟ ಹಿಟ್ಟಿನ ಉಂಡೆಗಳನ್ನು ಮಾಡಿಕೊಳ್ಳಿ. ಇವನ್ನು ಒಂದು ಬಟ್ಟೆಯಿಂದ ಮುಚ್ಚಿಡಿ. ಒಂದೊಂದೇ ಉಂಡೆಯನ್ನು ಎರಡೂ ಕೈಗಳ ನಡುವೆ ಇಟ್ಟು ನಿಧಾನವಾಗಿ ಒಂದು ಕೈಯಿಂದ ಇನ್ನೊಂದು ಕೈಮೇಲೆ ತಟ್ಟುತ್ತ ರೊಟ್ಟಿಯಂತೆ ಮಾಡಿ.
ಇದನ್ನು ಜಿಡ್ಡು ಸವರಿದ ತಟ್ಟೆಯಲ್ಲಿಟ್ಟು ಓವನ್ ನಲ್ಲಿ 450 ಡಿಗ್ರಿ ಅಥವಾ ಹೆಚ್ಚು ಉಷ್ಣತೆಯಲ್ಲಿ 2 ನಿಮಿಷ ಇಡಿ. ಹೊರತೆಗೆದು ನಾನ್ ನ್ನು ತಿರುವಿಹಾಕಿ ೩೦ ಸೆಕೆಂಡ್ ಕಾಲ ಬೇಯಿಸಿ ಹೊರತೆಗೆದು, ಬೆಣ್ಣೆ ಸವರಿ.
ಗಾರ್ಲಿಕ್ ನಾನ್ ಮಾಡಬೇಕೆಂದರೆ, ಉಂಡೆಗಳನ್ನು ಕೈಯಿಂದ ಸ್ವಲ್ಪ ಅಗಲಕ್ಕೆ ತಟ್ಟಿದನಂತರ ಬೆಳ್ಳುಳ್ಳಿ ಚೂರುಗಳನ್ನು ಅದರಮೇಲೆ ಹರಡಿ, ಕೈಯಿಂದ ಸ್ವಲ್ಪ ಪ್ರೆಸ್ ಮಾಡಿ. ನಾನ್ ಮಾಡಿ ಬೇಯಿಸಿ ಬೆಣ್ಣೆ ಸವರಿ. ಇದರಮೇಲೆ ಸ್ವಲ್ಪ ಚಾಟ್ ಮಸಾಲಾ ಉದುರಿಸಿಕೊಂಡು ತಿಂದುನೋಡಿ.
ಓವನ್ ಇಲ್ಲದಿದ್ದರೆ, ತಯಾರಿಸಿಕೊಂಡ ನಾನ್ ನ್ನು ಒಂದು ಜಾಳಿಗೆಯಮೇಲೆ ಇಟ್ಟು, ಅದನ್ನು ಒಲೆಯ ಉರಿಗಿಂತ ಸ್ವಲ್ಪ ಎತ್ತರದಲ್ಲಿ ಹಿಡಿದು, ಎಲ್ಲ ಕಡೆಗೂ ಸಮನಾಗಿ ಶಾಖ ತಗಲುವಂತೆ ಕೈಯಿಂದ ಜಾಳಿಗೆಯನ್ನು ಆಚೀಚೆ ತಿರುಗಿಸುತ್ತ ಎರಡೂ ಕಡೆ ಬೇಯಿಸಿ, ಬಿಸಿ ಇರುವಾಗಲೇ ಬೆಣ್ಣೆ ಸವರಿ ತಿನ್ನಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)