ಮೈಕ್ರೋವೇವ್ ಪೇಡಾ / Microwave Peda

Click here for English version.


ಸಾಮಗ್ರಿ
ಮಿಲ್ಕ್ ಪೌಡರ್ - 2 ಕಪ್ (150 ಗ್ರಾಂ)
ಕಂಡೆನ್ಸಡ್ ಮಿಲ್ಕ್ - 1 ಟಿನ್ ( 400 ಗ್ರಾಂ)
ಬೆಣ್ಣೆ - 40 oz (113 ಗ್ರಾಂ)

ವಿಧಾನ
ಬೆಣ್ಣೆಯನ್ನು ಓವನ್ ನಲ್ಲಿ 1 - 2 ನಿಮಿಷ ಇಟ್ಟು ಕರಗಿಸಿಕೊಳ್ಳಿ. ಇದಕ್ಕೆ ಮಿಲ್ಕ್ ಪೌಡರ್ ಮತ್ತು ಕಂಡೆನ್ಸಡ್ ಮಿಲ್ಕ್ ಸೇರಿಸಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿಕೊಳ್ಳಿ. ಇದನ್ನು ಮೈಕ್ರೋವೇವ್ ನಲ್ಲಿ 1 ನಿಮಿಷ ಬಿಸಿಗಿಟ್ಟು ಹೊರತೆಗೆದು, ಚೆನ್ನಾಗಿ ಕಲಸಿ ಪುನಃ 1 ನಿಮಿಷ ಮೈಕ್ರೋವೇವ್ ನಲ್ಲಿ ಬಿಸಿಗಿಡಿ. ಇದೇ ರೀತಿ 3 - 4 ಬಾರಿ ಬಿಸಿಮಾಡಿ, ಪೇಡೆ ಕಟ್ಟುವ ಹದ ಬಂದಾಗ ಹೊರತೆಗೆದು 15 - 20 ನಿಮಿಷ ತಣ್ಣಗಾಗಲು ಬಿಡಿ. ನಂತರ ಪೇಡೆಗಳನ್ನು ಮಾಡಿ, ಚೆನ್ನಾಗಿ ಸೆಟ್ ಆಗಲು 10 ನಿಮಿಷ ಫ್ರಿಜ್ ನಲ್ಲಿಟ್ಟು ಹೊರತೆಗೆಯಿರಿ.
 

 

ಕಾಮೆಂಟ್‌ಗಳು