ರವಾ ರೊಟ್ಟಿ / Rava (Semolina) Rotti

Click here for English Version

ತರಕಾರಿಗಳನ್ನು ಹಾಕಿ ತಯಾರಿಸುವ ಈ ರೊಟ್ಟಿ, ಬೆಳಗಿನ ಉಪಾಹಾರ, ಸಂಜೆಯ ಸ್ನ್ಯಾಕ್ಸ್, ಟಿಫಿನ್ ಬಾಕ್ಸ್ ಎಲ್ಲಕ್ಕೂ ಚೆನ್ನಾಗಿರುತ್ತದೆ. ಮಲೆನಾಡಿನ ಶಿರಸಿ, ಸಾಗರ ಕಡೆಗಳಲ್ಲಿ ಇದನ್ನು ಹೆಚ್ಚಾಗಿ ತಯಾರಿಸುತ್ತಾರೆ.
 
ಸಾಮಗ್ರಿ
ಸೂಜಿ ರವಾ - ಅಂದಾಜು 3 ಕಪ್
ಈರುಳ್ಳಿ - 2 
ಹಸಿಮೆಣಸು 6 - 7 
ತೆಂಗಿನತುರಿ - 1 ಕಪ್
ಸಣ್ಣಗೆ ಹೆಚ್ಚಿದ ಕರಿಬೇವು - 1 ಟೀ ಸ್ಪೂನ್
ಮೊಸರು ಅಥವಾ ಮಜ್ಜಿಗೆ - ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಕ್ಯಾರೆಟ್, ಹಾಲುಗುಂಬಳ, ಬದನೆ ಅಥವಾ  ನಿಮ್ಮಿಷ್ಟದ ಯಾವುದೇ ತರಕಾರಿಗಳ ತುರಿ - ಒಂದರಿಂದ ಒಂದೂವರೆ ಕಪ್ 

ವಿಧಾನ 
ರವೆ, ತರಕಾರಿ ತುರಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಕರಿಬೇವು, ತೆಂಗಿನತುರಿ, ಉಪ್ಪು, ಎಲ್ಲವನ್ನೂ ಸೇರಿಸಿ ಕಲಸಿಕೊಳ್ಳಿ. ಹಿಟ್ಟು ತುಂಬಾ ಗಟ್ಟಿ ಎನಿಸಿದರೆ ಸ್ವಲ್ಪ ಮೊಸರು / ಮಜ್ಜಿಗೆ ಸೇರಿಸಿ ಕಲಸಿ, 20 ನಿಮಿಷ ಇಡಿ. ನಂತರ ಇದರಿಂದ ರೊಟ್ಟಿಗಳನ್ನು ತಟ್ಟಿ, ಕಾದ ತವೆಯ ಮೇಲೆ ಎಣ್ಣೆ ಹಾಕಿ ಬೇಯಿಸಿ. ಬಿಸಿ ಇರುವಾಗಲೇ ಬೆಣ್ಣೆಯೊಡನೆ ತಿನ್ನಿ.

    

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)