ತೆಂಗಿನತುರಿ ಚಟ್ನಿ / Coconut chutney (Less cholesterol)

Click here for English version. 
 

ಸಾಮಗ್ರಿ
ತೆಂಗಿನತುರಿ - 3 / 4 ಕಪ್
ಹಸಿಮೆಣಸು 4 - 5 
ಕರಿಬೇವು 10 - 12 ಎಲೆಗಳು
ಚಿಕ್ಕ ಚೂರು ಶುಂಠಿ 
ಕೊತ್ತಂಬರಿ ಸೊಪ್ಪು 2 - 3 ದಂಟಿನದು
ಉಪ್ಪು
ಚಿಕ್ಕ ಚೂರು ಹುಣಸೆಹಣ್ಣು 
ಎಣ್ಣೆ, ಸಾಸಿವೆ

ವಿಧಾನ
ಬಾಣಲೆಯಲ್ಲಿ 1 ಚಮಚ ಎಣ್ಣೆ ಕಾಯಿಸಿ, ಹಸಿಮೆಣಸನ್ನು ಇಡಿಯಾಗಿ ಹುರಿದು, ಜೊತೆಗೆ ಶುಂಠಿ, ಕೊತ್ತಂಬರಿ ಸೊಪ್ಪು, ಕರಿಬೇವನ್ನು ಸೇರಿಸಿ ಸ್ವಲ್ಪ ಬಿಸಿಮಾಡಿ ಇಳಿಸಿ. ಇದನ್ನು ಹುಣಸೆಹಣ್ಣು, ತೆಂಗಿನತುರಿ, ಉಪ್ಪಿನೊಂದಿಗೆ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಂಡು, ಸಾಸಿವೆಯ ಒಗ್ಗರಣೆ ಕೊಡಿ.
ತೆಂಗಿನತುರಿ ಕಡಿಮೆ ಬಳಸಬೇಕೆಂದರೆ ಅರ್ಧ ಕಪ್ ನಷ್ಟು ತೆಂಗಿನತುರಿಯನ್ನು ಮಾತ್ರ ಬಳಸಿ, 2 ಚಮಚದಷ್ಟು ಪುಟಾಣಿ ಬೇಳೆಯನ್ನು ಹಸಿಮೆಣಸಿನೊಡನೆ ಹುರಿದು ರುಬ್ಬುವಾಗ ಸೇರಿಸಿ.

ಕಾಮೆಂಟ್‌ಗಳು