ಬೆಣ್ಣೆ ಬಿಸ್ಕಿಟ್ / Butter Biscuits

Click here to read in English..

ಸಾಮಗ್ರಿ:
ಬೆಣ್ಣೆ (ರೂಂ ಟೆಂಪರೇಚರ್'ನಲ್ಲಿ)  - 1 ಕಪ್
ಸಕ್ಕರೆಪುಡಿ - 1 ಕಪ್ (ಸುಮಾರು 3 / 4 ಕಪ್ ಸಕ್ಕರೆಯಿಂದ 1 ಕಪ್ ಸಕ್ಕರೆಪುಡಿ ಆಗುತ್ತದೆ)
ಏಲಕ್ಕಿ 4 - 5 
ಮೈದಾಹಿಟ್ಟು - ಎರಡೂವರೆಯಿಂದ 3 ಕಪ್

ವಿಧಾನ:
ಸಕ್ಕರೆ, ಏಲಕ್ಕಿಯನ್ನು ಒಟ್ಟಿಗೆ ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ. ಬೆಣ್ಣೆಯನ್ನು ಚೆನ್ನಾಗಿ ಗಂಟಿಲ್ಲದಂತೆ ಬೀಟ್ ಮಾಡಿ. ಅದಕ್ಕೆ ಸ್ವಲ್ಪ ಸ್ವಲ್ಪವೇ ಸಕ್ಕರೆಪುಡಿ ಸೇರಿಸಿ ಬೀಟ್ ಮಾಡುತ್ತ ಕ್ರೀಮ್ ನಂತೆ ಮಾಡಿ. ನಂತರ ಅದಕ್ಕೆ ಹಿಡಿಸುವಷ್ಟು ಮೈದಾಹಿಟ್ಟು ಸೇರಿಸಿ ಚೆನ್ನಾಗಿ ನಾದಿ. ಹಿಟ್ಟು ಸ್ವಲ್ಪ ಮೆತ್ತಗಿರಲಿ. ಇದರಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಂಡು ತಟ್ಟಿ ಬಿಸ್ಕಿಟ್ ಆಕಾರಕ್ಕೆ ತನ್ನಿ. ಇದನ್ನು ಜಿಡ್ಡು ಸವರಿದ ಬೇಕಿಂಗ್ ಟ್ರೇಯಲ್ಲಿಟ್ಟು 200 ಡಿಗ್ರಿ ಸೆಂಟಿಗ್ರೇಡ್ ನಲ್ಲಿ ಪ್ರೀಹೀಟ್ ಮಾಡಿದ ಓವನ್ ನಲ್ಲಿ 20 - 25 ನಿಮಿಷ ಬೇಯಿಸಿ. ನಸುಗಂದುಬಣ್ಣಕ್ಕೆ ಬಂದಾಗ ತೆಗೆಯಿರಿ. ಬಿಸ್ಕಿಟ್ ಗಳನ್ನು ಟ್ರೇಯಿಂದ ಹೊರತೆಗೆದು ಆರಲುಬಿಟ್ಟು, ನಂತರ ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ.

ಕಾಮೆಂಟ್‌ಗಳು