Click here for English version.
ಸಾಮಾನ್ಯವಾಗಿ ಯಾವಾಗಲೂ ಮಾಡುವ ಕ್ಯಾಬೇಜ್ ಪಲ್ಯಕ್ಕೆ ನೆನೆಸಿದ ಹೆಸರುಕಾಳನ್ನು ಸೇರಿಸಿ ಮಾಡಿದಾಗ ಸಿದ್ಧವಾದದ್ದು ಈ ಪಲ್ಯ. ಇದಕ್ಕೆ ಮೊಳಕೆ ಬಂದ ಹೆಸರು ಕಾಳನ್ನು ಹಾಕಿದರೂ ಚೆನ್ನಾಗಿರುತ್ತದೆ, ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.

ಸರ್ವಿಂಗ್: 3 ಜನರಿಗೆ ಆಗುತ್ತದೆ
ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು
ಬೇಕಾಗುವ ಸಾಮಗ್ರಿ:
ಸಣ್ಣಗೆ ಹೆಚ್ಚಿದ ಕ್ಯಾಬೇಜ್ - 2 ಕಪ್
ಹೆಸರುಕಾಳು - 1 / 2 ಕಪ್ (7 - 8 ಘಂಟೆಕಾಲ ನೀರಲ್ಲಿ ನೆನೆಸಿಕೊಳ್ಳಿ )
ಚಿಕ್ಕ ಈರುಳ್ಳಿ - 1
ಹಸಿಮೆಣಸು - 2 ರಿಂದ 3
ಕರಿಬೇವು - ಸ್ವಲ್ಪ
ನಿಂಬೆರಸ - ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ: ಎಣ್ಣೆ - 4 ಚಮಚ, ಉದ್ದಿನ ಬೇಳೆ - 1 / 2 ಚಮಚ, ಸಾಸಿವೆ - 1 / 4 ಚಮಚ , ಅರಿಶಿನ - 1 / 4 ಚಮಚ
ಮಾಡುವ ವಿಧಾನ:
ಈರುಳ್ಳಿ, ಹಸಿಮೆಣಸನ್ನು ಹೆಚ್ಚಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಉದ್ದಿನಬೇಳೆ, ಸಾಸಿವೆ, ಅರಿಶಿನ, ಹಸಿಮೆಣಸು, ಕರಿಬೇವು ಸೇರಿಸಿ ಚಟಗುಟ್ಟಿದಮೇಲೆ ಹೆಚ್ಚಿದ ಕ್ಯಾಬೇಜ್ ಸೇರಿಸಿ ಕೈಯಾಡಿಸಿ ಒಂದು ಪ್ಲೇಟ್ ಮುಚ್ಚಿ 2 - 3 ನಿಮಿಷ ಬೇಯಿಸಿ.
ನಂತರ ನೆನೆಸಿದ ಹೆಸರುಕಾಳು, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಬೇಯಿಸಿ. ಬೇಕಿದ್ದರೆ ಸ್ವಲ್ಪ ಸಕ್ಕರೆಯನ್ನೂ ಸೇರಿಸಿ. ಆಗಾಗ ಪ್ಲೇಟ್ ತೆಗೆದು ಪಲ್ಯವನ್ನು ಕೈಯಾಡಿಸುತ್ತಿರಿ.
ಪಲ್ಯದ ಮಿಶ್ರಣ ಮುಕ್ಕಾಲು ಭಾಗ ಬೆಂದಾಗ ಅದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ 3 - 4 ನಿಮಿಷ ಬೇಯಿಸಿ ಕೆಳಗಿಳಿಸಿ. ನಂತರ ಇದಕ್ಕೆ ನಿಂಬೆರಸ ಸೇರಿಸಿ ಕೈಯಾಡಿಸಿ.
ಇದು ಅನ್ನ, ರೊಟ್ಟಿ, ಚಪಾತಿ ಹಾಗೂ ದೋಸೆಯೊಡನೆ ಹಾಕಿಕೊಳ್ಳಲು ಚೆನ್ನಾಗಿರುತ್ತದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)