ಕ್ಯಾರೆಟ್ ಗೊಜ್ಜು / Carrot Gojju

Click here for English version.

ಊಟದೊಡನೆ ಇಂಥದ್ದೊಂದು ಗೊಜ್ಜು ಇದ್ದರೆ ತುತ್ತು ಹೊಟ್ಟೆಗಿಳಿದದ್ದೇ ಗೊತ್ತಾಗುವುದಿಲ್ಲ! 


ಬೇಕಾಗುವ ಸಾಮಗ್ರಿ:
ಮಧ್ಯಮ ಗಾತ್ರದ ಕ್ಯಾರೆಟ್ - 1 
ಹುಣಸೆಹಣ್ಣು - ನೆಲ್ಲಿಕಾಯಿ ಗಾತ್ರದಷ್ಟು
ಒಣಮೆಣಸು - 1
ಉದ್ದಿನಬೇಳೆ - 1 / 2 ಚಮಚ
ಸಾಸಿವೆ - 1 / 4 ಚಮಚ
ಇಂಗು - ಚಿಟಿಕೆ
ಅರಿಶಿನ - 1 / 4 ಚಮಚ 
ಹಸಿಮೆಣಸು - 3
ತೆಂಗಿನತುರಿ - 1 / 2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ - 2 ಚಮಚ

ವಿಧಾನ
ಕ್ಯಾರೆಟ್ ನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ 1 ಚಮಚ ಎಣ್ಣೆ ಕಾಯಿಸಿ, ಒಣಮೆಣಸು, ಉದ್ದಿನಬೇಳೆ, ಸ್ವಲ್ಪ ಸಾಸಿವೆ, ಚಿಟಿಕೆ ಇಂಗು, ಅರಿಶಿನ, ಹಸಿಮೆಣಸು ಹಾಕಿ ಒಗ್ಗರಣೆ ಮಾಡಿಕೊಂಡು, ಕ್ಯಾರೆಟ್ ಹೋಳುಗಳನ್ನು ಸೇರಿಸಿ, ಸ್ವಲ್ಪ ನೀರು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. ನಂತರ ಇದನ್ನು ತೆಂಗಿನತುರಿ, ಉಪ್ಪು, ಹುಣಸೆ ಹಣ್ಣಿನೊಂದಿಗೆ ಮಿಕ್ಸಿಯಲ್ಲಿ ಸ್ವಲ್ಪ ತರಿಯಾಗಿ ರುಬ್ಬಿಕೊಳ್ಳಿ. ಮಿಶ್ರಣ ಸ್ವಲ್ಪ ಮಂದವಾಗಿರಲಿ, ಜಾಸ್ತಿ ನೀರು ಸೇರಿಸಬೇಡಿ. ನಂತರ ಇದಕ್ಕೆ ಎಣ್ಣೆ, ಸಾಸಿವೆಯ ಒಗ್ಗರಣೆ ಕೊಡಿ.
ಇದು ಅನ್ನದೊಡನೆ ಕಲೆಸಿಕೊಳ್ಳಲು ಚೆನ್ನಾಗಿರುತ್ತದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)