Paladya / ಪಳದ್ಯ

Click here for English version.

ಇದು ಮಜ್ಜಿಗೆ ಉಪಯೋಗಿಸಿ ಮಾಡುವ ಮಲೆನಾಡ ಕಡೆಯ ಅಡಿಗೆ. ದಿನವೂ ಅನ್ನ, ಸಾರು ಊಟ ಮಾಡಿ ಬೇಜಾರಾದಾಗ ಇದು ನಾಲಿಗೆಗೆ ಹೆಚ್ಚು ಹಿತವೆನಿಸುತ್ತದೆ.. 

ಬೇಕಾಗುವ ಸಾಮಗ್ರಿ:
ಬೆಂಡೆಕಾಯಿ 5 - 6 (ಬೆಂಡೆಕಾಯಿಯ ಬದಲು ಸೌತೆಕಾಯಿ, ಆಲೂಗಡ್ಡೆ ಇತ್ಯಾದಿ ತರಕಾರಿಗಳನ್ನೂ ಬಳಸಬಹುದು)
ತೆಂಗಿನ ತುರಿ - 1 ಕಪ್
ಒಣಮೆಣಸು - 1 
ಹಸಿಮೆಣಸು - 2 
ಕೊತ್ತಂಬರಿ ಬೀಜ - ಒಂದೂವರೆ ಚಮಚ
ಸಾಸಿವೆ - ಅರ್ಧ ಚಮಚ
ಅರಿಶಿನ - ಕಾಲು ಚಮಚ
ಕರಿಬೇವಿನ ಎಲೆಗಳು - ಸ್ವಲ್ಪ 
ನಿಂಬೆಹಣ್ಣು - ಅರ್ಧ
ರುಚಿಗೆ ತಕ್ಕಷ್ಟು ಉಪ್ಪು 
ಮಜ್ಜಿಗೆ - ಸ್ವಲ್ಪ 
ಒಗ್ಗರಣೆಗೆ: ಎಣ್ಣೆ - 1 / 2 ಚಮಚ, ಉದ್ದಿನ ಬೇಳೆ - 1 / 2 ಚಮಚ, ಚಿಟಿಕೆ ಇಂಗು, ಸಾಸಿವೆ - 1 / 4 ಚಮಚ

ವಿಧಾನ:
ಬೆಂಡೆಕಾಯಿಯನ್ನು  ತೊಳೆದು, ಸ್ವಲ್ಪ ದೊಡ್ಡ ಹೋಳುಗಳಾಗಿ ಹೆಚ್ಚಿಕೊಳ್ಳಿ. ಒಂದು ಪಾತ್ರೆಯಲ್ಲಿ 2 ಕಪ್ ನೀರನ್ನು ಕುದಿಯಲಿಡಿ. ನೀರು ಹದವಾಗಿ ಬಿಸಿಯಾದಾಗ ಅದಕ್ಕೆ ಉಪ್ಪು, ನಿಂಬೆರಸ ಸೇರಿಸಿ, ಹೆಚ್ಚಿಕೊಂಡ ತರಕಾರಿಯನ್ನು ಸೇರಿಸಿ, ಬೇಯಿಸಿ. ತೆಂಗಿನತುರಿ ಮತ್ತು ಇತರ ಸಾಮಗ್ರಿಗಳನ್ನು ನುಣ್ಣಗೆ ರುಬ್ಬಿಕೊಂಡು, ಬೆಂದ ತರಕಾರಿಗೆ ಸೇರಿಸಿ, ಕರಿಬೇವಿನ ಎಸಳುಗಳನ್ನು ಹಾಕಿ 2 - 3 ನಿಮಿಷ ಕುದಿಸಿ, ಇಳಿಸಿ ಒಗ್ಗರಣೆ ಕೊಡಿ. ಬಿಸಿ ಸ್ವಲ್ಪ ತಣಿದನಂತರ ಇದಕ್ಕೆ ಮಜ್ಜಿಗೆ ಸೇರಿಸಿ, ಅನ್ನದೊಡನೆ ಊಟ ಮಾಡಿ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)