ಅಲಸಂದೆ ಕಾಳಿನ ಪಲ್ಯ / Black-eyed peas palya

Click here for English version.

ಯಾವುದೇ ಬಗೆಯ ರೊಟ್ಟಿಯೊಡನೆ ಈ ಪಲ್ಯ ಚೆನ್ನಾಗಿರುತ್ತದೆ. ಜೊತೆಗೆ ಕಾಳಿನ ಪಲ್ಯ ಆರೋಗ್ಯಕ್ಕೂ ಬಹಳ ಒಳ್ಳೆಯದು.


ಬೇಕಾಗುವ ಸಾಮಗ್ರಿಗಳು:
ಅಲಸಂದೆ ಕಾಳು - 2 ಕಪ್ (ನಾಲ್ಕೈದು ಘಂಟೆ ನೀರಿನಲ್ಲಿ ನೆನೆಸಿಕೊಂಡಿರಿ)
ಉದ್ದಿನಬೇಳೆ - 1 ಚಮಚ 
ಸಾಸಿವೆ - 1 / 4 ಚಮಚ 
ಇಂಗು - ಚಿಟಿಕೆ
ಹೆಚ್ಚಿದ ಹಸಿಮೆಣಸು - 2 
ಕರಿಬೇವಿನ ಎಲೆಗಳು - 10 ರಿಂದ 12 
ಈರುಳ್ಳಿ ಹೆಚ್ಚಿದ್ದು - 1
ಸಾರಿನ ಪುಡಿ - ಒಂದೂವರೆ ಚಮಚ (ಖಾರಕ್ಕೆ ತಕ್ಕಂತೆ)
ರುಚಿಗೆ ತಕ್ಕಷ್ಟು ಉಪ್ಪು 
ಆಮ್ ಚೂರ್ ಪುಡಿ ಅಥವಾ ಹುಳಿಪುಡಿ -  1 / 2 ಚಮಚ 
ಸಕ್ಕರೆ - 1 ಚಮಚದಷ್ಟು 
ಎಣ್ಣೆ - 3 ಚಮಚ (ಒಗ್ಗರಣೆಗೆ)

ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಅದಕ್ಕೆ ಉದ್ದಿನಬೇಳೆ, ಸಾಸಿವೆ, ಇಂಗು ಹಾಕಿ ಚಟಗುಟ್ಟಿದ ನಂತರ ಕರಿಬೇವು, ಹೆಚ್ಚಿದ ಹಸಿಮೆಣಸನ್ನು ಸೇರಿಸಿ ಸ್ವಲ್ಪ ಹುರಿಯಿರಿ.
ನಂತರ ಇದಕ್ಕೆ ನೀರಿನಲ್ಲಿ ನೆನೆಸಿದ ಅಲಸಂದೆ ಕಾಳು, ರುಚಿಗೆ ತಕ್ಕಷ್ಟು ಉಪ್ಪು, ಸಾರಿನ ಪುಡಿ, ಆಮ್ ಚೂರ್ ಪುಡಿ, ಸಕ್ಕರೆ ಸೇರಿಸಿ, ಪಲ್ಯದ ಮಿಶ್ರಣ ಮುಳುಗುವಷ್ಟು ನೀರು ಸೇರಿಸಿ, ಒಂದು ಪ್ಲೇಟ್ ಮುಚ್ಚಿ ಹದವಾದ ಉರಿಯಲ್ಲಿ ಬೇಯಿಸಿ.
ಆಗಾಗ ಕೈಯಾಡಿಸುತ್ತಿದ್ದು, ನೀರು ಕಡಿಮೆಯಾದರೆ ಸೇರಿಸಿ. ಮಿಶ್ರಣ ಮುಕ್ಕಾಲು ಭಾಗ ಬೆಂದಾಗ ಹೆಚ್ಚಿದ ಈರುಳ್ಳಿ ಸೇರಿಸಿ.
ನೀರಿನಂಶವೆಲ್ಲ ಇಂಗಿ, ಕಾಳುಗಳು ಮೆತ್ತಗೆ ಬೆಂದಂತಾದಾಗ ಪಲ್ಯದ ಮಿಶ್ರಣವನ್ನು ಕೆಳಗಿಳಿಸಿ. ಬೇಕಿದ್ದರೆ ಕೊನೆಯಲ್ಲಿ ಸ್ವಲ್ಪ ತೆಂಗಿನತುರಿ ಸೇರಿಸಿ.
ದೋಸೆ, ರೊಟ್ಟಿ ಅಥವಾ ಚಪಾತಿಯೊಡನೆ ಇದು ಚೆನ್ನಾಗಿರುತ್ತದೆ.

ಕಾಮೆಂಟ್‌ಗಳು