ಶೇಂಗಾ(ನೆಲಗಡಲೆ) ಹಲ್ವಾ / Groundnut Burfi

Click here for English version.

ಇದು ನನ್ನ ಅಮ್ಮ ಮಾಡುವ ಸ್ಪೆಷಲ್ ತಿಂಡಿಗಳಲ್ಲಿ ಒಂದು. ನಮ್ಮ ಮನೆಯಲ್ಲಂತೂ ಈ ತಿಂಡಿಯನ್ನು ಮಾಡಿಟ್ಟರೆ ಒಂದೇ ದಿನದಲ್ಲಿ ಖಾಲಿಯಾಗಿಬಿಡುತ್ತದೆ! ತಿನ್ನಲು ಬಹಳ ರುಚಿಕರವಾದ ಈ 'ತ್ರೀ ಕಪ್' ಹಲ್ವಾವನ್ನು ನೀವೂ ಮಾಡಿನೋಡಿ.


ಬೇಕಾಗುವ ಸಾಮಗ್ರಿಗಳು:
ಶೇಂಗಾ (ನೆಲಗಡಲೆ) - 1 ಕಪ್
ಸಕ್ಕರೆ - 1 ಕಪ್
ಹಾಲು - 1 ಕಪ್

ಮಾಡುವ ವಿಧಾನ:
ಶೇಂಗಾ ಹುರಿದು, ಸಿಪ್ಪೆಯನ್ನೆಲ್ಲ ಬೇರ್ಪಡಿಸಿಕೊಳ್ಳಿ.
ಸಿಪ್ಪೆ ತೆಗೆದ ಶೇಂಗಾವನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ.
ಒಂದು ಬಾಣಲೆ ಅಥವಾ ದಪ್ಪ ತಳದ ಪಾತ್ರೆಯಲ್ಲಿ ಹಾಲು, ಸಕ್ಕರೆ ಸೇರಿಸಿ ಕುದಿಯಲಿಡಿ.
ಸಕ್ಕರೆ ಕರಗಿದ ನಂತರ ಅದಕ್ಕೆ ಪುಡಿಮಾಡಿದ ಶೇಂಗಾ ಸೇರಿಸಿ ಹದವಾದ ಉರಿಯಲ್ಲಿ ಕೈಯಾಡಿಸುತ್ತಿರಿ.
ಮಿಶ್ರಣ ತಳ ಬಿಡತೊಡಗಿ ಗಟ್ಟಿಯಾಗಿ ಹಲ್ವಾದ ಹದಕ್ಕೆ ಬಂದಾಗ ಅದನ್ನು ಜಿಡ್ಡು ಸವರಿದ ಬಟ್ಟಲಿಗೆ ಸುರಿದು, ಲಟ್ಟಣಿಗೆಯಿಂದ ಒತ್ತಿ ಒಂದೇ ಸಮನಾಗಿ ಹರವಿ. ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.

ಟಿಪ್ಸ್: 
  • ಹಲ್ವಾ ಮಿಶ್ರಣವನ್ನು ಉರಿಯಿಂದ ಇಳಿಸುವ ಹದ ಗೊತ್ತಾಗದಿದ್ದರೆ, ಮಿಶ್ರಣ ಸ್ವಲ್ಪ ಗಟ್ಟಿಯಾಗತೊಡಗಿದನಂತರ ಒಂದು ಚಿಕ್ಕ ಹನಿಯಷ್ಟನ್ನು ಬಟ್ಟಲಿಗೆ ಹಾಕಿ, ಆರುತ್ತಿದ್ದಂತೆ ಗಟ್ಟಿಯಾಗುವುದೇ ಎಂದು ಪರೀಕ್ಷಿಸಿಕೊಳ್ಳಿ.

ಕಾಮೆಂಟ್‌ಗಳು