Click here for English version.
ಇದು ನಾನು ಅಮ್ಮನಿಂದ ಕಲಿತ ಮಲೆನಾಡಿನ ಒಂದು ಸಾಂಪ್ರದಾಯಿಕ ಅಡುಗೆ. ಕಿತ್ತಳೆ ಸಿಪ್ಪೆಯನ್ನು ಫೇಸ್ ಪ್ಯಾಕ್ ಗೆ ಬಳಸುವುದು ನಮಗೆಲ್ಲ ಗೊತ್ತೇ ಇದೆ. ಆದರೆ ಇದರಿಂದ ಗೊಜ್ಜನ್ನೂ ಮಾಡಬಹುದೆಂದರೆ ವಿಚಿತ್ರವೆನ್ನಿಸುವುದಲ್ಲವೇ? ಕಿತ್ತಳೆ ಸಿಪ್ಪೆಯ ನಾನಾ ಉಪಯೋಗಗಳಲ್ಲಿ ಈ ಗೊಜ್ಜೂ ಒಂದು. ಕಿತ್ತಳೆ ಹಣ್ಣಿನ ಪರಿಮಳದೊಂದಿಗೆ ಸಿಹಿ, ಹುಳಿ, ಖಾರಮಿಶ್ರಿತವಾದ ಈ ಗೊಜ್ಜು ಅನ್ನದೊಡನೆ ಕಲಸಿಕೊಳ್ಳಲು, ಇಲ್ಲವೇ ಹಾಗೇ ನೆಂಜಿಕೊಳ್ಳಲೂ ಚೆನ್ನಾಗಿರುತ್ತದೆ.
ಕಿತ್ತಳೆ ಸಿಪ್ಪೆ - 1 ಮಧ್ಯಮ ಗಾತ್ರದ ಕಿತ್ತಳೆ ಹಣ್ಣಿನ ಸಿಪ್ಪೆಯ ಕಾಲು ಭಾಗದಷ್ಟು
ತೆಂಗಿನತುರಿ - ಮುಕ್ಕಾಲು ಕಪ್
ಒಣಮೆಣಸು - 3
ಉದ್ದಿನ ಬೇಳೆ - 1 ಚಮಚ
ಸಾಸಿವೆ - 1 / 4 ಚಮಚ
ಎಳ್ಳು - 1 ಚಮಚ
ಚಿಟಿಕೆ ಇಂಗು
ಎಣ್ಣೆ - 2 ಚಮಚ
ಎಣ್ಣೆ - 2 ಚಮಚ
ಹುಣಸೆ ಹಣ್ಣು - ದೊಡ್ಡ ಗೋಲಿಗಾತ್ರದಷ್ಟು
ಬೆಲ್ಲ - 3 ಟೇಬಲ್ ಚಮಚ ಅಥವಾ ಜಾಸ್ತಿ
ನೀರು
ನೀರು
ಮಾಡುವ ವಿಧಾನ:
ಕಿತ್ತಳೆ ಸಿಪ್ಪೆಯನ್ನು 1 ಲೋಟದಷ್ಟು ಬಿಸಿನೀರಿನಲ್ಲಿ 5 ನಿಮಿಷ ಬೇಯಿಸಿಕೊಂಡು, ನೀರಿನಂಶವನ್ನು ಹಿಂಡಿ ತೆಗೆಯಿರಿ.
ಎಣ್ಣೆ ಕಾಯಿಸಿ ಅದಕ್ಕೆ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಎಳ್ಳು, ಇಂಗು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಇದರೊಡನೆ ಬೇಯಿಸಿದ ಕಿತ್ತಳೆ ಸಿಪ್ಪೆ, ತೆಂಗಿನತುರಿ, ಹುಣಸೆಹಣ್ಣು ಸೇರಿಸಿ, ಮಿಕ್ಸಿಯಲ್ಲಿ ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಿ.
ನಂತರ ರುಬ್ಬಿಕೊಂಡ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಸಿಹಿಯಾಗುವಷ್ಟು ಬೆಲ್ಲ ಸೇರಿಸಿ ಐದು ನಿಮಿಷ ಚೆನ್ನಾಗಿ ಕುದಿಸಿ ಇಳಿಸಿ.
ಈ ಗೊಜ್ಜು ಹಾಗೆಯೇ ಇಟ್ಟರೂ 2 ದಿನ ಕೆಡದೆ ಚೆನ್ನಾಗಿರುತ್ತದೆ. ಫ್ರಿಜ್ ನಲ್ಲಿಟ್ಟುಕೊಂಡರೆ ಒಂದು ವಾರದವರೆಗೂ ಉಪಯೋಗಿಸಬಹುದು.

very nice click dear!!!!
ಪ್ರತ್ಯುತ್ತರಅಳಿಸಿThank you Prabha:)
ಪ್ರತ್ಯುತ್ತರಅಳಿಸಿ