Click here for English version.
ಇದು ತರಕಾರಿ, ಖಾರ ಇತ್ಯಾದಿ ಏನನ್ನೂ ಬಳಸದೆ ಬರೀ ಹಿಟ್ಟಿನಿಂದ ಮಾಡುವ ರೊಟ್ಟಿ. ಇದನ್ನು ಮಾಡುವಾಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಹಿಟ್ಟನ್ನು ಕಲಸಿದ ಸ್ವಲ್ಪ ಸಮಯದಲ್ಲೇ ರೊಟ್ಟಿಗಳನ್ನು ಮಾಡಿಬಿಡಬೇಕು. ಕಲಸಿದ ಹಿಟ್ಟನ್ನು ಜಾಸ್ತಿ ಹೊತ್ತು ಹಾಗೇ ಇಟ್ಟರೆ ಹಿಟ್ಟು ಒಣಗಿದಂತಾಗಿ, ರೊಟ್ಟಿಗಳನ್ನು ಲಟ್ಟಿಸಲು ಕಷ್ಟವಾಗುತ್ತದೆ.

ಬೇಕಾಗುವ ಸಮಯ: 40 ನಿಮಿಷಗಳು
ಈ ಅಳತೆಯಿಂದ ಸುಮಾರು 5 ರೊಟ್ಟಿಗಳನ್ನು ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು:
ಅಕ್ಕಿಹಿಟ್ಟು - 1 ಲೋಟ
ಮೈದಾಹಿಟ್ಟು - 1 / 4 ಲೋಟ
ನೀರು - 2 ಲೋಟ
ಎಣ್ಣೆ - 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಅಕ್ಕಿಹಿಟ್ಟು, ಮೈದಾಹಿಟ್ಟು, ಉಪ್ಪನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಒಲೆಯಮೇಲೆ ಕಾಯಲು ಇಡಿ.
ನೀರು ಕುದಿಯತೊಡಗಿದಾಗ ಅದಕ್ಕೆ ಹಿಟ್ಟಿನ ಮಿಶ್ರಣವನ್ನು ಗೋಪುರಾಕಾರದಲ್ಲಿ ಹಾಕಿ. ಹಿಟ್ಟನ್ನು ನೀರಿನೊಡನೆ ಕಲಸಬೇಡಿ.
ಪಾತ್ರೆಗೆ ಒಂದು ಬಟ್ಟಲನ್ನು ಅರೆಬರೆ ಮುಚ್ಚಿ, 15 ನಿಮಿಷ ಹಿಟ್ಟನ್ನು ಬೇಯಿಸಿ.
ನಂತರ ಸೌಟಿನಿಂದ ಹಿಟ್ಟನ್ನು ಕಲಕಿ, ನೀರು ಮತ್ತು ಹಿಟ್ಟನ್ನು ಸರಿಯಾಗಿ ಕಲಸಿ.
ಮಿಶ್ರಣವು ಚಪಾತಿ ಹಿಟ್ಟಿನ ಹದಕ್ಕೆ ಬಂದಿಲ್ಲವಾದರೆ ಒಲೆಯಮೇಲೆ ಪಾತ್ರೆಯನ್ನು ಹಾಗೇ ಇಟ್ಟು ಹಿಟ್ಟನ್ನು ತಳ ಹಿಡಿಯದಂತೆ ಕೈಯಾಡಿಸುತ್ತಿದ್ದು, ಚಪಾತಿ ಹಿಟ್ಟಿನ ಹದಕ್ಕೆ ಬಂದಾಗ ಉರಿಯಿಂದ ಇಳಿಸಿ, ತಣಿಯಲು ಬಿಡಿ.

ಹಿಟ್ಟಿನಿಂದ ನಿಂಬೆಗಾತ್ರದ ಉಂಡೆಗಳನ್ನು ಮಾಡಿ, ಅಕ್ಕಿಹಿಟ್ಟು ಅಥವಾ ಮೈದಾಹಿಟ್ಟಿನಲ್ಲಿ ಹೊರಳಿಸಿಕೊಂಡು ರೊಟ್ಟಿಗಳನ್ನು ಲಟ್ಟಿಸಿ, ಕಾವಲಿಯಮೇಲೆ ಹಾಕಿ ಬೇಯಿಸಿ.
ಕೆಂಡದ ಒಲೆಯಮೇಲೆ ಹಾಕಿ ಬೇಯಿಸಿದರೆ ಈ ರೊಟ್ಟಿ ಇನ್ನೂ ಚೆನ್ನಾಗಿರುತ್ತದೆ.
ಬಿಸಿಯಾಗಿರುವಾಗಲೇ ತೆಂಗಿನತುರಿ ಚಟ್ನಿ, ಉಪ್ಪಿನಕಾಯಿ ಅಥವಾ ಖಾರದ ಪುಡಿಯೊಡನೆ ತಿನ್ನಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)