Click here for English version.
ನಾನು ಬಹಳ ಇಷ್ಟಪಡುವ ದೋಸೆ ಇದು. ಮನೆಗೆ ಯಾರಾದರೂ ನೆಂಟರು ಬರುತ್ತಾರೆಂದರೆ ಬೆಳಗಿನ ತಿಂಡಿಗೆ ಏನು ಮಾಡಲಿ? ಎನ್ನುವುದೇ ದೊಡ್ಡ ಯೋಚನೆಯಾಗಿರುತ್ತದೆ(!) ಅದಕ್ಕೇ, ಹೆಚ್ಚಿನ ಸಂದರ್ಭಗಳಲ್ಲಿ ನಾನು ಆಯ್ಕೆ ಮಾಡಿಕೊಳ್ಳುವುದು ಈ ಸೆಟ್ ದೋಸೆಯನ್ನೇ.. ಏಕೆಂದರೆ ದೋಸೆ ಹೇಗೂ ಚೆನ್ನಾಗಿ ಬಂದೇ ಬರುತ್ತದೆ, ಕೆಟ್ಟು ಹೋಗಬಹುದೆನ್ನುವ ಭಯವಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ರಿಸ್ಕ್ ಬಹಳ ಕಡಿಮೆ!

ಈ ದೋಸೆಗೆ ಮುಖ್ಯವಾಗಿ ಹಿಟ್ಟು ಫರ್ಮೆಂಟ್ ಆಗಲು ಸ್ವಲ್ಪ ಬೆಚ್ಚಗಿನ ವಾತಾವರಣ ಬೇಕು. ಚಳಿಗಾಲದಲ್ಲಿ ಹಿಟ್ಟು ಹುದುಗು ಬರುವುದು ಸ್ವಲ್ಪ ಕಷ್ಟವೇ.. ನಾನು ಅದಕ್ಕೆ ಕಂಡುಕೊಂಡ ಪರಿಹಾರವೇನೆಂದರೆ, ಹಿಟ್ಟನ್ನು ಹಾಕಿಟ್ಟ ಪಾತ್ರೆಗೆ ಅದಕ್ಕಿಂತ ದೊಡ್ಡದಾದ ಇನ್ನೊಂದು ಪಾತ್ರೆಯನ್ನು ಬೋರಲು ಹಾಕಿಟ್ಟುಬಿಡುವುದು.
ಇನ್ನೊಂದು ಟಿಪ್ಸ್ ಏನೆಂದರೆ, ದೋಸೆಗೆ ಅಕ್ಕಿ ಇತ್ಯಾದಿಗಳನ್ನು ಐದಾರು ಘಂಟೆ ನೆನೆಹಾಕಲು ಸಮಯವಿಲ್ಲದಿದ್ದರೆ, ಅವನ್ನು ಬಿಸಿನೀರಿನಲ್ಲಿ ಸುಮಾರು 3 ಘಂಟೆಕಾಲ ನೆನೆಸಿದರೂ ಆಗುತ್ತದೆ.
ದೋಸೆ ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು
ಹಿಟ್ಟು ಹುದುಗುಬರಲು ಬೇಕಾಗುವ ಸಮಯ: 7 - 8 ಘಂಟೆ
ಅಕ್ಕಿ ನೆನೆಸಲು ಬೇಕಾಗುವ ಸಮಯ: 5 - 6 ಘಂಟೆ
ಸರ್ವಿಂಗ್ಸ್: 3 - 4 ಜನರಿಗೆ ಆಗುತ್ತದೆ
ಸೆಟ್ ದೋಸೆಗೆ ಬೇಕಾಗುವ ಸಾಮಗ್ರಿಗಳು:
ಅಕ್ಕಿ - 3 ಲೋಟ
ಉದ್ದಿನಬೇಳೆ - 1 ಲೋಟ
ಮೆಂತ್ಯ - 1 ಟೀ ಚಮಚ
ಪೇಪರ್ ಅವಲಕ್ಕಿ ಅಥವಾ ಅನ್ನ - ಕಾಲು ಲೋಟಕ್ಕಿಂತ ಸ್ವಲ್ಪ ಕಡಿಮೆ
ಉಪ್ಪು - ರುಚಿಗೆ ತಕ್ಕಷ್ಟು
ಸಕ್ಕರೆ - 1 ಟೀ ಚಮಚ
ಎಣ್ಣೆ
ಎಣ್ಣೆ
ಮಾಡುವ ವಿಧಾನ:
ಅಕ್ಕಿ, ಮೆಂತ್ಯ ಮತ್ತು ಉದ್ದಿನಬೇಳೆಯನ್ನು 5 - 6 ಘಂಟೆಕಾಲ ನೀರಿನಲ್ಲಿ ನೆನೆಸಿಕೊಳ್ಳಿ.
ನಂತರ ಇದನ್ನು ಅವಲಕ್ಕಿ ಅಥವಾ ಅನ್ನದೊಂದಿಗೆ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿಕೊಳ್ಳಿ.
ಹಿಟ್ಟನ್ನು 7 - 8 ಘಂಟೆಕಾಲ ಬೆಚ್ಚಗಿನ ಜಾಗದಲ್ಲಿ ಹುದುಗುಬರಲು ಬಿಡಿ.
ನಂತರ ಹಿಟ್ಟಿಗೆ ಸಕ್ಕರೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕಲಸಿಕೊಂಡು ಕಾದ ಕಾವಲಿಯಮೇಲೆ ಸ್ವಲ್ಪ ದಪ್ಪಗೆ ದೋಸೆ ಹಾಕಿ, ಎಣ್ಣೆ ಅಥವಾ ತುಪ್ಪ ಹಾಕಿ ಬೇಯಿಸಿ.
ದೋಸೆ ಬಿಸಿ ಇರುವಾಗಲೇ ನಿಮ್ಮಿಷ್ಟದ ಯಾವುದೇ ಬಗೆಯ ಚಟ್ನಿಯೊಡನೆ ತಿನ್ನಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)