Click here for English version.
ತಯಾರಿಸಲು ತುಂಬ ಸಿಂಪಲ್ ಮತ್ತು ತಿನ್ನಲು ಬಹಳ ಸೂಪರ್ಬ್ ಆಗಿರುವ ಚಕ್ಕುಲಿ ಇದು. ತಿನ್ನಲು ಶುರು ಮಾಡಿದರೆ ಸಾಕು ಎನ್ನಿಸುವುದೇ ಇಲ್ಲ! ಟೀಯೊಡನೆ ಅಥವಾ ಪ್ರವಾಸ, ಪಿಕ್ನಿಕ್ ಗಳಿಗೆ ಹೋಗುವಾಗ ಒಯ್ಯಲು ಚೆನ್ನಾಗಿರುತ್ತದೆ. ಕೆಂಪಗೆ ಗರಿಗರಿಯಾಗಿರುವ ಚಕ್ಕುಲಿಗಳು ಬಹಳ ರುಚಿ ಕೂಡ. ತಯಾರಿಸಲು ಹೆಚ್ಚು ಶ್ರಮವೇನೂ ಇಲ್ಲ.. ನೀವೂ ಟ್ರೈ ಮಾಡಿ ನೋಡಿ!

ತಯಾರಿಸುವ ಸಮಯ: 1 ಘಂಟೆ
ಈ ಅಳತೆಯಿಂದ ಸುಮಾರು 25 - 30 ಚಕ್ಕುಲಿಗಳನ್ನು ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು:
ಉದ್ದಿನಬೇಳೆ - 3 / 4 ಕಪ್
ಅಕ್ಕಿ ಹಿಟ್ಟು - ಎರಡೂವರೆಯಿಂದ ಮೂರು ಕಪ್
ಮೆಣಸಿನಪುಡಿ - 2 ಟೀ ಚಮಚ
ಓಮ, ಜೀರಿಗೆ - 1 ಟೀ ಚಮಚ
ಕರಿಯಲು ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಉದ್ದಿನಬೇಳೆಯನ್ನು ನೀರು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿಕೊಂಡು, ತಣ್ಣಗಾದನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ಬೇಯಿಸುವಾಗ ಜಾಸ್ತಿ ನೀರನ್ನು ಸೇರಿಸಿದ್ದರೆ ರುಬ್ಬುವಾಗ ಹೆಚ್ಚಿನ ನೀರನ್ನು ತೆಗೆದುಬಿಡಿ. ತಯಾರಿಸಿದ ಹಿಟ್ಟು ದೋಸೆ ಹಿಟ್ಟಿನ ಹದದಲ್ಲಿರಲಿ.
ರುಬ್ಬಿಕೊಂಡ ಉದ್ದಿನ ಹಿಟ್ಟಿಗೆ ಉಪ್ಪು, ಮೆಣಸಿನಪುಡಿ, ಓಮ, ಜೀರಿಗೆ, ಅಕ್ಕಿಹಿಟ್ಟು ಸೇರಿಸಿ ಚಪಾತಿ ಹಿಟ್ಟಿನಂತೆ ಕಲಸಿಕೊಳ್ಳಿ.
ಕಲಸಿಕೊಂಡ ಹಿಟ್ಟನ್ನು ಚಕ್ಕುಲಿ ಒರಳಿನಲ್ಲಿ ಒತ್ತಿ, ಚಕ್ಕುಲಿಗಳನ್ನು ತಯಾರಿಸಿ ಕಾದ ಎಣ್ಣೆಯಲ್ಲಿ ಗರಿಯಾಗಿ ಕರಿದು ತೆಗೆಯಿರಿ.
ಟಿಪ್ಸ್:
- ಚಕ್ಕುಲಿ ಒರಳಿಗೆ ಎಣ್ಣೆ ಸವರಿಕೊಂಡು ನಂತರ ಹಿಟ್ಟನ್ನು ಹಾಕಿ. ಇದರಿಂದ ಹಿಟ್ಟು ಚಕ್ಕುಲಿ ಒರಳಿಗೆ ಹೆಚ್ಚು ಅಂಟಿಕೊಳ್ಳುವುದಿಲ್ಲ. ಇದರಿಂದ ಚಕ್ಕುಲಿ ಒರಳನ್ನು ತೊಳೆಯುವುದಕ್ಕೂ ಸುಲಭವಾಗುತ್ತದೆ.
Wow,,,,e vidhana tumba sulabhavagide......Perfect for Ganesh chaturthi....I will defenatly try this out,,,Thanks for sharing.....
ಪ್ರತ್ಯುತ್ತರಅಳಿಸಿMam..Benne use madbeka?
ಪ್ರತ್ಯುತ್ತರಅಳಿಸಿBenne hakbekilla ee chakli ge
ಅಳಿಸಿ