ಆಲೂ ಟಿಕ್ಕಿ / Aloo Tikki

Click here for English version.

ಆಲೂ ಟಿಕ್ಕಿ, ಉತ್ತರ ಭಾರತದ ಫೇಮಸ್ ಸ್ನ್ಯಾಕ್ ಐಟಂ. ಸಂಜೆಯ ಹೊತ್ತಿನಲ್ಲಿ ಚಾಟ್ ಅಂಗಡಿಗೆ ಹೋಗಿ ಇಂಥ ತಿಂಡಿಗಳನ್ನು ತಿನ್ನುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಆಲೂ ಟಿಕ್ಕಿಯನ್ನು ಕಡಿಮೆ ಸಮಯದಲ್ಲಿ ಮನೆಯಲ್ಲೇ ತಯಾರಿಸಬಹುದು. ನಮ್ಮ ರುಚಿಗೆ ತಕ್ಕಂತೆ ಸಾಮಗ್ರಿಗಳನ್ನು ಬಳಸಿಕೊಂಡರಾಯಿತು, ರುಚಿಯಾದ ಆಲೂ ಟಿಕ್ಕಿ ತಿನ್ನಲು ಸಿದ್ಧ! ಸಂಜೆಯ ಟೀ ಟೈಮ್ ಗೆ ಇದು ಚೆನ್ನಾಗಿರುತ್ತದೆ.


ತಯಾರಿಸಲು ಬೇಕಾಗುವ ಸಮಯ: 35 - 40 ನಿಮಿಷಗಳು 
ಸರ್ವಿಂಗ್ಸ್: ಇಬ್ಬರಿಗೆ ಆಗುತ್ತದೆ.
 
ಬೇಕಾಗುವ ಸಾಮಗ್ರಿಗಳು:
2 ಮೀಡಿಯಂ ಸೈಜ್ ಆಲೂಗಡ್ಡೆ 
ಬ್ರೆಡ್ ಕ್ರಂಬ್ಸ್ - ಸ್ವಲ್ಪ
ಚಾಟ್ ಮಸಾಲಾ - ರುಚಿಗೆ ತಕ್ಕಷ್ಟು 
ಗರಂ ಮಸಾಲಾ - 1 / 4 ಚಮಚ
ಮೆಣಸಿನ ಪುಡಿ - ಸ್ವಲ್ಪ 
ಹಸಿಮೆಣಸು 2 - 3 
ಹೆಚ್ಚಿದ ಕೊತ್ತಂಬರಿ ಸೊಪ್ಪು - 3 ಚಮಚ  
ರುಚಿಗೆ ತಕ್ಕಷ್ಟು ಉಪ್ಪು
ಬೇಯಿಸಲು ಎಣ್ಣೆ 

ಮಾಡುವ ವಿಧಾನ: 
ಆಲೂಗಡ್ಡೆಯನ್ನು ಮೆತ್ತಗೆ ಬೇಯಿಸಿಕೊಂಡು ಸಿಪ್ಪೆ ತೆಗೆದು, ನುಣ್ಣಗೆ ಪುಡಿಮಾಡಿಕೊಳ್ಳಿ. ನೀರಿನಂಶ ಕಡಿಮೆ ಇದ್ದಷ್ಟೂ ಒಳ್ಳೆಯದು.
ಎಣ್ಣೆ, ಬ್ರೆಡ್ ಕ್ರಂಬ್ಸ್ ಹೊರತಾಗಿ ಉಳಿದೆಲ್ಲ ಸಾಮಗ್ರಿಗಳನ್ನೂ ಆಲೂಗಡ್ಡೆಯೊಡನೆ ಸೇರಿಸಿ ಕಲಸಿ. ಇದಕ್ಕೆ ಸ್ವಲ್ಪ ಬ್ರೆಡ್ ಕ್ರಂಬ್ಸ್ ಸೇರಿಸಿ ಮೆತ್ತಗೆ ಚಪಾತಿ ಹಿಟ್ಟಿನಂತೆ ಕಲಸಿಕೊಳ್ಳಿ.
ಮಿಶ್ರಣದಿಂದ ಚಿಕ್ಕ ನಿಂಬೆಗಾತ್ರದ ಉಂಡೆಗಳನ್ನು ಮಾಡಿಕೊಂಡು ಕೈಯಿಂದ ಒತ್ತಿ ಚಪ್ಪಟೆ ಮಾಡಿ.


ಇವನ್ನು ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿಕೊಂಡು, ದೋಸೆ ಕಾವಲಿಯಮೇಲೆ ಚೆನ್ನಾಗಿ ಎಣ್ಣೆ ಹಾಕಿ ಎರಡೂ ಕಡೆ ಕೆಂಪಗೆ ಬೇಯಿಸಿ.
ಆಲೂ ಟಿಕ್ಕಿ ಬಿಸಿ ಇರುವಾಗಲೇ ಕೆಂಪು ಚಟ್ನಿ ಇಲ್ಲವೇ ಟೊಮೆಟೋ ಸಾಸ್ ನೊಡನೆ ತಿನ್ನಿ.

ಟಿಪ್ಸ್:
  • ಮನೆಯಲ್ಲೇ ಬ್ರೆಡ್ ಕ್ರಂಬ್ಸ್ ತಯಾರಿಸಲು ಸುಲಭದ ಉಪಾಯ: ಬ್ರೆಡ್ ಪೀಸ್ ಗಳನ್ನು ಸ್ವಲ್ಪ ಒಣಗಿಸಿಕೊಳ್ಳಿ. ಮೈಕ್ರೋವೇವ್ ಓವನ್ ನಲ್ಲಿ ಬಿಸಿಮಾಡಿಯೂ ಒಣಗಿಸಬಹುದು. ಒಣಗಿದ ಬ್ರೆಡ್ ನ್ನು ಚೂರು ಮಾಡಿಕೊಂಡು ಮಿಕ್ಸಿಯಲ್ಲಿ ತರಿಯಾಗಿ ಪುಡಿಮಾಡಿದರೆ ಆಯಿತು, ಬ್ರೆಡ್ ಕ್ರಂಬ್ಸ್ ಸಿದ್ಧ!

ಕಾಮೆಂಟ್‌ಗಳು