ಬಾಳೆಹಣ್ಣಿನ ರೊಟ್ಟಿ ಮಾಡಿದಾಗಲೆಲ್ಲ ನೆನಪಾಗುತ್ತಿತ್ತು, ಬ್ಲಾಗ್ ನಲ್ಲಿ ಹಾಕಬೇಕೆಂದು. ಆದರೆ ಅಳತೆ ಪ್ರಕಾರ ಮಾಡುವುದಕ್ಕಿಂತ ಅಂದಾಜಿಗೆ ಮಾಡುವುದೇ ಜಾಸ್ತಿ :) ಹೀಗಾಗಿ ಕಳೆದ ಸಲ ರೊಟ್ಟಿ ಮಾಡಿದಾಗ ಅಳತೆಗಳನ್ನು ಬರೆದುಕೊಳ್ಳುತ್ತ ಮಾಡಿದೆ! ಮನೆಯಲ್ಲಿ ಚೆನ್ನಾಗಿ ಕಳಿತ ಬಾಳೆಹಣ್ಣು ಇದ್ದರೆ ಈ ರೊಟ್ಟಿ ಮಾಡಿನೋಡಿ. ತಿನ್ನಲು ತುಂಬ ರುಚಿ ಮತ್ತು ಮಾಡುವುದೂ ತುಂಬ ಸುಲಭ! ಮೆತ್ತಗೆ, ಸಿಹಿಯಾಗಿ, ಹೋಳಿಗೆಯಂತೆಯೇ ಇರುತ್ತದೆ. ಈ ರೊಟ್ಟಿ ಬೆಳಗಿನ ತಿಂಡಿ ಅಥವಾ ಟಿಫಿನ್ ಬಾಕ್ಸ್ ಗೆ ಒಯ್ಯಲು ಚೆನ್ನಾಗಿರುತ್ತದೆ.
ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು
ಸರ್ವಿಂಗ್ಸ್: 3
ಬೇಕಾಗುವ ಸಾಮಗ್ರಿಗಳು:
ದೊಡ್ಡ ಬಾಳೆಹಣ್ಣು - 1 1/2
ಅಕ್ಕಿಹಿಟ್ಟು - 2 ಕಪ್
ಗೋಧಿಹಿಟ್ಟು - 1/2 ಕಪ್
ನೀರು - 1 ಕಪ್
ಉಪ್ಪು - 1 1/4 ಚಮಚ ಅಥವಾ ರುಚಿಗೆ ತಕ್ಕಷ್ಟು
ಸಕ್ಕರೆ - 4 ಚಮಚ
ಬೆಲ್ಲ - 2 ಚಮಚ
ಮಾಡುವ ವಿಧಾನ:
ಬಾಳೆಹಣ್ಣಿನ ಸಿಪ್ಪೆ ತೆಗೆದು ಹಣ್ಣನ್ನು ಮಧ್ಯಮಗಾತ್ರದ ಹೋಳುಗಳಾಗಿ ಹೆಚ್ಚಿಕೊಳ್ಳಿ. ಇವನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗಿನ ಪೇಸ್ಟ್ ತಯಾರಿಸಿಕೊಳ್ಳಿ.
ಬಾಳೆಹಣ್ಣಿನ ಪೇಸ್ಟ್ ಗೆ ಉಪ್ಪು, ಸಕ್ಕರೆ, ಬೆಲ್ಲ ಮತ್ತು ನೀರು ಸೇರಿಸಿ 2 ನಿಮಿಷ ಕುದಿಸಿ.
ನಂತರ ಇದಕ್ಕೆ ಅಕ್ಕಿಹಿಟ್ಟು ಮತ್ತು ಗೋಧಿಹಿಟ್ಟನ್ನು ಸೇರಿಸಿ ಎರಡು ನಿಮಿಷ ಕೈಯಾಡಿಸಿ. ಹೀಗೆ ಮಾಡುವುದರಿಂದ ಹಿಟ್ಟು ಬೆಂದು, ಚೆನ್ನಾಗಿ ಕೂಡಿಬರುತ್ತದೆ.
ಹಿಟ್ಟು ಉಂಡೆ ಕಟ್ಟುವ ಹದಕ್ಕೆ ಬಂದಾಗ ಒಲೆಯನ್ನು ಆರಿಸಿ, ಹಿಟ್ಟಿಗೆ ಒಂದು ಪ್ಲೇಟ್ ಮುಚ್ಚಿ ತಣಿಯಲು ಬಿಡಿ.
ಹಿಟ್ಟು ತಣ್ಣಗಾದ ನಂತರ ನಿಂಬೆಗಾತ್ರದ ಉಂಡೆಗಳನ್ನು ಮಾಡಿಕೊಂಡು ಒಣ ಹಿಟ್ಟಿನಲ್ಲಿ ಅದ್ದಿಕೊಂಡು ತೆಳ್ಳಗೆ ಲಟ್ಟಿಸಿ.
ರೊಟ್ಟಿಯನ್ನು ಕಾದ ತವಾದ ಮೇಲೆ ಬೇಯಿಸಿ, ತುಪ್ಪ ಹಾಕಿಕೊಂಡು ತಿನ್ನಿ.
ರೊಟ್ಟಿಯನ್ನು ತವಾದಿಂದ ತೆಗೆಯುವ ಮೊದಲು ಅದರಮೇಲೆ ಸ್ವಲ್ಪ ತುಪ್ಪ ಹಾಕಿ ಮಗುಚಿ ತೆಗೆದರೆ ಒಳ್ಳೆಯ ಪರಿಮಳದೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.
ಟಿಪ್ಸ್:
- ಬೆಳಗಿನ ತಿಂಡಿಗೆ ಈ ರೊಟ್ಟಿಯನ್ನು ಮಾಡುವುದಾದರೆ ರಾತ್ರಿಯೇ ಹಿಟ್ಟನ್ನು ಕಲಸಿಟ್ಟುಕೊಳ್ಳಬಹುದು.
wow..this is one of my fav rooti..I often prepare this....the rooti looks fab...even i have posted in my blog..
ಪ್ರತ್ಯುತ್ತರಅಳಿಸಿ