Click here for English version.
ನಮ್ಮೂರ ಕಡೆ ಹುಣಸೆ ಕಾಯಿ ಬೆಳೆಯುವ ಸೀಜನ್ ನಲ್ಲಿ ಸಾಮಾನ್ಯವಾಗಿ ಇಂಥ ತೊಕ್ಕನ್ನು ಮಾಡುತ್ತಾರೆ. ಇದನ್ನು ನೀರು ಹಾಕದೆ ರುಬ್ಬುವುದರಿಂದ ತಿಂಗಳುಗಟ್ಟಲೆ ಇಟ್ಟುಕೊಂಡು ಬಳಸಬಹುದು. ನಮ್ಮ ಮನೆಯಲ್ಲಿ ಊರಿಂದ ಬರುವಾಗ ತಂದ ಹುಣಸೆಕಾಯಿ ಸ್ವಲ್ಪ ಇತ್ತು. ಅಮ್ಮನ ಬಳಿ ತೊಕ್ಕು ಮಾಡುವ ವಿಧಾನವನ್ನು ಕೇಳಿಕೊಂಡು ತೊಕ್ಕು ತಯಾರಿಸಿದೆ! ನಮ್ಮವರಿಗಂತೂ ಇದು ತುಂಬ ಇಷ್ಟವಾಯಿತು. ಸ್ವಲ್ಪವೇ ಮಾಡಿದ್ದರಿಂದ ನಾಲ್ಕೈದು ದಿನದಲ್ಲೇ ತೊಕ್ಕು ಖಾಲಿ!! ಮತ್ತೆ ಹುಣಸೆಕಾಯಿ ಸಿಕ್ಕರೆ ಇಂಥದೇ ತೊಕ್ಕು ತಯಾರಿಸಬೇಕೆಂದು ಈಗಲೇ ಹೇಳಿಬಿಟ್ಟಿದ್ದಾರೆ ನಮ್ಮೆಜಮಾನರು! :D
ತಯಾರಿಸಲು ಬೇಕಾಗುವ ಸಮಯ: 40 - 45 ನಿಮಿಷಗಳು
ಸರ್ವಿಂಗ್ಸ್: 2 ಜನರಿಗಾದರೆ ಒಂದು ವಾರ ಸಾಕಾಗುತ್ತದೆ
ಬೇಕಾಗುವ ಸಾಮಗ್ರಿಗಳು:
ಹುಣಸೆಕಾಯಿ 5 - 6
ಖಾರ ಇರುವ ಹಸಿಮೆಣಸು - 3 (ಖಾರಕ್ಕೆ ತಕ್ಕಂತೆ)
ಮೆಂತ್ಯ - 1/2 ಚಮಚ
ಜೀರಿಗೆ - 1 ಚಮಚ
ಇಂಗು - ದೊಡ್ಡ ಚಿಟಿಕೆ
ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಹುಣಸೆ ಕಾಯಿಯ ಬೀಜ, ಸಿಪ್ಪೆ ಮತ್ತು ನಾರನ್ನು ತೆಗೆದುಬಿಡಿ. ಈ ಕೆಲಸಕ್ಕೆ ಕನಿಷ್ಠ ಅರ್ಧ ಘಂಟೆಯನ್ನಾದರೂ ವ್ಯಯಿಸಿದ್ದೇನೆ ನಾನು!
ಸ್ವಚ್ಛಗೊಳಿಸಿದ ಹುಣಸೆ ಚೂರುಗಳನ್ನು ಉಳಿದೆಲ್ಲ ಸಾಮಗ್ರಿಗಳೊಡನೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ.
ರುಬ್ಬುವಾಗ ನೀರು ಸೇರಿಸಬೇಡಿ. ನಾನು ಸ್ವಲ್ಪವೇ ತೊಕ್ಕು ಮಾಡಿದ್ದರಿಂದ ಮಿಕ್ಸಿಯಲ್ಲಿ ತಿರುವುವಾಗ 1 ಚಮಚದಷ್ಟು ನೀರು ಸೇರಿಸಿದ್ದೇನೆ. ಫ್ರಿಜ್ ನಲ್ಲಿಡುವುದಾದರೆ ನೀರು ಸೇರಿಸಿ ರುಬ್ಬಿದರೆ ತೊಂದರೆಯಿಲ್ಲ.
ತಯಾರಿಸಿದ ತೊಕ್ಕನ್ನು ಪ್ಲಾಸ್ಟಿಕ್ ಅಥವಾ ಗಾಜಿನ ಬಾಟಲಿಯಲ್ಲಿ ತುಂಬಿಟ್ಟು ಬಳಸಿ.
ಈ ತೊಕ್ಕು ಹೊರಗಡೆ ಇಟ್ಟರೆ 15 ವಾದರೂ ಚೆನ್ನಾಗಿರುತ್ತದೆ. ಫ್ರಿಜ್ ನಲ್ಲಿ ಇಡುವುದಾದರೆ 2 - 3 ತಿಂಗಳು ಇಟ್ಟುಕೊಂಡು ಬಳಸಬಹುದು.
ತೊಕ್ಕನ್ನು ಊಟದ ಜೊತೆ ಉಪ್ಪಿನಕಾಯಿಯಂತೆಯೂ ಬಳಸಬಹುದು ಅಥವಾ ಅನ್ನ ಮತ್ತು ಕೆಲವು ಹನಿ ಕೊಬ್ಬರಿ ಎಣ್ಣೆ (ಬೇಕಿದ್ದರೆ) ಹಾಕಿ ಕಲಸಿಕೊಂಡು ಬಳಸಬಹುದು. ಒಮ್ಮೆ ತಿಂದವರು ಇದರ ರುಚಿಯನ್ನು ಮರೆಯುವಂತೆಯೇ ಇಲ್ಲ!
ಟಿಪ್ಸ್:
ಈ ತೊಕ್ಕು ಹೊರಗಡೆ ಇಟ್ಟರೆ 15 ವಾದರೂ ಚೆನ್ನಾಗಿರುತ್ತದೆ. ಫ್ರಿಜ್ ನಲ್ಲಿ ಇಡುವುದಾದರೆ 2 - 3 ತಿಂಗಳು ಇಟ್ಟುಕೊಂಡು ಬಳಸಬಹುದು.
ತೊಕ್ಕನ್ನು ಊಟದ ಜೊತೆ ಉಪ್ಪಿನಕಾಯಿಯಂತೆಯೂ ಬಳಸಬಹುದು ಅಥವಾ ಅನ್ನ ಮತ್ತು ಕೆಲವು ಹನಿ ಕೊಬ್ಬರಿ ಎಣ್ಣೆ (ಬೇಕಿದ್ದರೆ) ಹಾಕಿ ಕಲಸಿಕೊಂಡು ಬಳಸಬಹುದು. ಒಮ್ಮೆ ತಿಂದವರು ಇದರ ರುಚಿಯನ್ನು ಮರೆಯುವಂತೆಯೇ ಇಲ್ಲ!
- ಖಾರಕ್ಕೆ ಹಸಿಮೆಣಸಿನ ಬದಲು ಒಣಮೆಣಸನ್ನೂ ಬಳಸಬಹುದು. ಹಳ್ಳಿಗಳ ಕಡೆ ಸಿಗುವ ಚೂರುಮೆಣಸು ಬಳಸಿದರೆ ಇನ್ನೂ ಒಳ್ಳೆಯದು.
ummmm...bayalli neeru barte...nammaneyalli yavaglu irtu.nange rashi ishta..
ಪ್ರತ್ಯುತ್ತರಅಳಿಸಿThank you Rashmi..
ಅಳಿಸಿAanoo madidne Vani.. monnitlagi hinge nin blog nodta iddiddi.. idanna nodkyandu bayalli neer bandittu. Achanak aagi last week Indian store ge hodaga hunasebattu siktu.. tandu chutney maddi.. nenapu madkottiddakke thanx! :)
ಪ್ರತ್ಯುತ್ತರಅಳಿಸಿAlloo hunsebattu sikkittane Pratimakka?? Gud to hear that! Heenge feedback kodta iru :)
ಅಳಿಸಿಚೆನ್ನಾಗಿದೆ
ಪ್ರತ್ಯುತ್ತರಅಳಿಸಿ