Click here for English version.
ನಾನು ಮನೆಯಲ್ಲಿ ತಿಂಡಿಗೆ ಉಪ್ಪಿಟ್ಟು ಮಾಡುವುದು ಬಹಳ ಅಪರೂಪ. ಹಾಸ್ಟೆಲ್ ಜೀವನ ಮುಗಿಸಿ ಬಂದವರಾದ್ದರಿಂದ ನಮಗಿಬ್ಬರಿಗೂ ಉಪ್ಪಿಟ್ಟು ಎಂದರೆ ಸ್ವಲ್ಪ ದೂರವೇ! :D ಆದರೆ ತರಕಾರಿ ಹಾಕದೆ ಬರೀ ಟೊಮೆಟೋ ಮತ್ತು ಈರುಳ್ಳಿ ಬಳಸಿ ನಮ್ಮೂರ ಕಡೆ ತಯಾರಿಸುವ ಉಪ್ಪಿಟ್ಟನ್ನು ಯಾವಾಗಲಾದರೊಮ್ಮೆ ತಯಾರಿಸುತ್ತೇನೆ. ಬೆಳಗಿನ ತಿಂಡಿ ಅಥವಾ ಸಂಜೆಯ ಸ್ನ್ಯಾಕ್ಸ್ ಟೈಮ್ ಗೆ ಈ ಉಪ್ಪಿಟ್ಟು ಚೆನ್ನಾಗಿರುತ್ತದೆ.
ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು
ಸರ್ವಿಂಗ್ಸ್: ಇಬ್ಬರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
ಸೂಜಿ ರವಾ - 1 1/2 ಕಪ್
ಟೊಮೆಟೋ - 2
ಹಸಿಮೆಣಸು - 2 (ಖಾರಕ್ಕೆ ತಕ್ಕಂತೆ)
ಈರುಳ್ಳಿ - 1
1 ನಿಂಬೆಹಣ್ಣು
ಸಕ್ಕರೆ 2 - 3 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ತೆಂಗಿನತುರಿ (ಬೇಕಿದ್ದರೆ) - 1/2 ಕಪ್
ಒಗ್ಗರಣೆಗೆ: ಎಣ್ಣೆ - 6 ಚಮಚ, ಉದ್ದಿನಬೇಳೆ - 1 ಚಮಚ, ಸಾಸಿವೆ - 1 ಚಮಚ, ಅರಿಶಿನ - 1/4 ಚಮಚ, ಕರಿಬೇವು 8 - 10 ಎಲೆಗಳು
ಮಾಡುವ ವಿಧಾನ:
ಟೊಮೆಟೋ, ಈರುಳ್ಳಿ ಮತ್ತು ಹಸಿಮೆಣಸನ್ನು ಹೆಚ್ಚಿಟ್ಟುಕೊಳ್ಳಿ.
4 ಕಪ್ ನಷ್ಟು ನೀರನ್ನು ಒಂದು ಪಾತ್ರೆಯಲ್ಲಿ ಕುದಿಯಲಿಡಿ.
ಒಂದು ದಪ್ಪ ತಳದ ಬಾಣಲೆಯಲ್ಲಿ ರವೆಯನ್ನು ಬಿಸಿಗಿಟ್ಟು, ನಸುಗಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಇದನ್ನು ಒಲೆಯಿಂದ ಇಳಿಸಿ ತಣ್ಣಗಾಗಲು ಬಿಡಿ.
ರವೆಯನ್ನು ಒಂದು ಬೌಲ್ ಗೆ ಹಾಕಿಟ್ಟು, ಪುನಃ ಬಾಣಲೆಯನ್ನು ಬಿಸಿಗಿಡಿ. ಕಾದ ಬಾಣಲೆಗೆ ಎಣ್ಣೆ, ಉದ್ದಿನಬೇಳೆ, ಸಾಸಿವೆ, ಅರಿಶಿನ, ಕರಿಬೇವು ಹಾಕಿ ಒಗ್ಗರಣೆ ಮಾಡಿ.
ಇದಕ್ಕೆ ಹೆಚ್ಚಿದ ಹಸಿಮೆಣಸು ಹಾಕಿ ಸ್ವಲ್ಪ ಹುರಿದುಕೊಂಡು ಹುರಿದ ರವೆ, ಹೆಚ್ಚಿದ ಟೊಮೆಟೋ ಮತ್ತು ಈರುಳ್ಳಿ ಸೇರಿಸಿ 3 - 4 ನಿಮಿಷ ಕೈಯಾಡಿಸಿ.
ನಂತರ ಇದಕ್ಕೆ 3 1/4 ಕಪ್ ನಷ್ಟು ಬಿಸಿನೀರನ್ನು ಸೇರಿಸಿ ಕೈಯಾಡಿಸಿ ಒಂದು ಪ್ಲೇಟ್ ಮುಚ್ಚಿ ಬೇಯಲು ಬಿಡಿ.
2 ನಿಮಿಷದ ನಂತರ ಪ್ಲೇಟ್ ತೆರೆದು ಉಪ್ಪಿಟ್ಟು ಮಿಶ್ರಣವನ್ನು ಚೆನ್ನಾಗಿ ಕೈಯಾಡಿಸಿ. ಉಪ್ಪು, ಸಕ್ಕರೆ, ನಿಂಬೆರಸ, ತೆಂಗಿನತುರಿ ಸೇರಿಸಿ, ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ 2 - 3 ನಿಮಿಷ ಬೇಯಿಸಿ. ಫ್ಲೇವರ್ ಗೆ ಬೇಕಿದ್ದರೆ 1 ಚಮಚ ತುಪ್ಪ ಸೇರಿಸಿ.
same here..even i never like uppittu ..and i too prepares in the same way...looking good...
ಪ್ರತ್ಯುತ್ತರಅಳಿಸಿThanks Chitra..
ಪ್ರತ್ಯುತ್ತರಅಳಿಸಿ