Click here for English version.
ಇತ್ತೀಚಿಗೆ ಊರಿನ ಓಡಾಟ ಮತ್ತು ಟ್ರಿಪ್ ಗಳ ನಡುವೆ ಓವನ್ ನಲ್ಲಿ ತಿಂಡಿಗಳನ್ನು ಮಾಡದೆ ಬಹಳ ದಿನಗಳಾಗಿಬಿಟ್ಟಿತ್ತು. ಏನಾದರೂ ಹೊಸ ಬಗೆಯ ಕೇಕ್ ಮಾಡಬೇಕೆಂದು ಹುಡುಕುತ್ತಿದ್ದಾಗ ಬ್ಲ್ಯಾಕ್ ಫಾರೆಸ್ಟ್ ಕೇಕ್ ಮಾಡೋಣವೆನಿಸಿತು. ಅದೂ ಅಲ್ಲದೆ ನನ್ನ ತಂಗಿ ಮನೆಗೆ ಬರುವವಳಿದ್ದಳು; ಅವಳ ಬರ್ತ್ ಡೇ ಕೂಡ ಇತ್ತು! ಮನೆಯಲ್ಲೇ ತಯಾರಿಸಿದ ಕೇಕ್ ನ್ನು ಅವಳ ಜೊತೆ ಸವಿದು ಆನಂದಿಸಿದೆವು :)
ವಿಕಿಪೀಡಿಯಾದಲ್ಲಿ ಹೇಳುವಂತೆ, ಬ್ಲಾಕ್ ಫಾರೆಸ್ಟ್ ಕೇಕ್ ನ ಮೂಲ ಜರ್ಮನಿ. ಜರ್ಮನಿಯ ಬ್ಲಾಕ್ ಫಾರೆಸ್ಟ್ ಪರ್ವತ ಶ್ರೇಣಿಯಲ್ಲಿ ಚೆರ್ರಿ ಹಣ್ಣಿನಿಂದ ತಯಾರಿಸುವ ಒಂದು ಬಗೆಯ ಮದ್ಯವನ್ನು ಈ ಕೇಕ್ ತಯಾರಿಕೆಗೆ ಬಳಸುವುದರಿಂದ ಕೇಕ್ ಗೆ ಈ ಹೆಸರು ಬಂದಿದೆ. ಈ ಚಾಕೊಲೇಟ್ ಕೇಕ್ ನ ಪದರುಗಳ ನಡುವೆ ಕಡೆದ ಫ್ರೆಶ್ ಕ್ರೀಂ ಮತ್ತು ಚೆರ್ರಿ ಹಣ್ಣಿನ ಚೂರುಗಳನ್ನು ಧಾರಾಳವಾಗಿ ಬಳಸುತ್ತಾರೆ. ನಾನು ಐಸಿಂಗ್ ಗೆ ಫ್ರೆಶ್ ಕ್ರೀಂ ಬಳಸಿರುವುದು ಇದೇ ಮೊದಲು. ಬೆಣ್ಣೆಯ ಐಸಿಂಗ್ ಗಿಂತ ಈ ಐಸಿಂಗ್ ಕೇಕ್ ಗೆ ಅಮೋಘ ರುಚಿಯನ್ನು ಕೊಡುತ್ತದೆ.
ಈ ರೆಸಿಪಿ ಗೆ ಮೂಲ ಪ್ರೇರಣೆ ವಾಹ್ ಶೆಫ್! ಯಾವುದೇ ಅಡಿಗೆಗಾದರೂ ಅವರ ವಿಡಿಯೋ ರೆಸಿಪಿ ಯನ್ನು ನೋಡಿದರೆ ಸಾಕು, ಮಾಡುವುದು ಎಷ್ಟು ಸುಲಭ ಎನ್ನಿಸಿಬಿಡುತ್ತದೆ! ಇದೊಂದೇ ಅಲ್ಲದೆ ಈಸಿ ಕುಕಿಂಗ್, ಪ್ಯಾಶನೇಟ್ ಅಬೌಟ್ ಬೇಕಿಂಗ್, ಪರಿತಾ'ಸ್ ವರ್ಲ್ಡ್, ಮುಂತಾದ ಕಡೆಗಳಲ್ಲಿರುವ ಕೇಕ್ ವಿಧಾನಗಳನ್ನು ನೋಡಿ, ಕೊನೆಯಲ್ಲಿ ನನ್ನದೇ ಒಂದು ರೆಸಿಪಿ ರೆಡಿಮಾಡಿಕೊಂಡೆ :) ಕೇಕ್ ತಯಾರಿಕೆಗೆ ಸ್ವಲ್ಪ ಜಾಸ್ತಿ ಸಮಯ ಬೇಕು; ಆದರೆ ನಾವೇ ಮನೆಯಲ್ಲಿ ತಯಾರಿಸಿದ ಕೇಕ್ ಸವಿಯುವಾಗಿನ ಆನಂದವೇ ಬೇರೆ!
ತಯಾರಿಸಲು ಬೇಕಾಗುವ ಸಮಯ: 1 ಘಂಟೆ
ಬೇಕಿಂಗ್ ಟೈಮ್: 60 - 70 ನಿಮಿಷಗಳು (ಒಂದು ಕೇಕ್ ಗೆ 30 - 35 ನಿಮಿಷ) (ಕೆಳಗಿರುವ ಟಿಪ್ಸ್ ನೋಡಿ)
ಸರ್ವಿಂಗ್ಸ್: 10 - 12 ಜನರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
- ಕೇಕ್ ಗೆ:
- ಕೇಕ್ ಗೆ:
- ಮೈದಾಹಿಟ್ಟು - 225 ಗ್ರಾಂ
- ಕೊಕೋವಾ ಪೌಡರ್ - 25 ಗ್ರಾಂ
- ಕಂಡೆನ್ಸ್ದ್ ಮಿಲ್ಕ್ - 400 ಗ್ರಾಂ (1 ಟಿನ್)
- ಬೇಕಿಂಗ್ ಪೌಡರ್ - 1 ಟೀ ಸ್ಪೂನ್
- ಬೇಕಿಂಗ್ ಸೋಡಾ - 1 ಟೀ ಸ್ಪೂನ್
- ಬೆಣ್ಣೆ - 125 ಗ್ರಾಂ
- ಕೋಕ್ ಅಥವಾ ಪೆಪ್ಸಿ - 200 ml
- ಐಸಿಂಗ್ ಗೆ:
- 1 ಕಪ್ ಹೆವಿ ವ್ಹಿಪ್ಪಿಂಗ್ ಕ್ರೀಂ (ಕೆಳಗಿರುವ ಟಿಪ್ಸ್ ನೋಡಿ)
- ಡಾರ್ಕ್ ಚಾಕೊಲೇಟ್ - 60 ಗ್ರಾಂ
- ಚೆರ್ರಿ ಹಣ್ಣುಗಳು - 100 ಗ್ರಾಂ
- ಸಕ್ಕರೆ ನೀರಿಗೆ:
- ನೀರು - 1/2 ಕಪ್
- ಸಕ್ಕರೆ 4 - 5 ಟೀ ಸ್ಪೂನ್
ಮಾಡುವ ವಿಧಾನ:
ಮೈದಾ, ಕೊಕೋವಾ ಪೌಡರ್, ಬೇಕಿಂಗ್ ಪೌಡರ್ ಮತ್ತು ಬೇಕಿಂಗ್ ಸೋಡಾ ಇಷ್ಟನ್ನೂ ಸೇರಿಸಿ ಜರಡಿಯಾಡಿಕೊಳ್ಳಿ.
ಬೆಣ್ಣೆಯನ್ನು ಕರಗಿಸಿಕೊಂಡು, ಪೂರ್ತಿ ತಣ್ಣಗಾಗಲು ಬಿಡಿ. ಇದಕ್ಕೆ ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಚೆನ್ನಾಗಿ ಮಿಕ್ಸ್ ಆಗುವವರೆಗೆ ಬೀಟ್ ಮಾಡಿ.
ನಂತರ ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ಹಿಟ್ಟು ಸೇರಿಸುತ್ತ ಕಲಸಿ. ಈ ಹಿಟ್ಟನ್ನು ಸರಿಯಾಗಿ ಎರಡು ಭಾಗ ಮಾಡಿಕೊಂಡು, ಒಂದು ಭಾಗ ಹಿಟ್ಟನ್ನು ಎತ್ತಿಡಿ. ಒಂದು ಭಾಗ ಹಿಟ್ಟಿಗೆ 100 ml ನಷ್ಟು ಕೋಕ್ ನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ, ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ಬೇಕಿಂಗ್ ಪ್ಯಾನ್ ಗೆ ಎಣ್ಣೆ ಅಥವಾ ಬೆಣ್ಣೆ ಸವರಿಕೊಳ್ಳಿ. ಪ್ಯಾನ್ ನ ಬುಡಕ್ಕೆ ವೃತ್ತಾಕಾರದಲ್ಲಿ ಕತ್ತರಿಸಿದ ಬಟರ್ ಪೇಪರ್ ಹಾಕಿಕೊಂಡರೆ ಕೇಕ್ ನ್ನು ತೆಗೆಯುವುದು ಸುಲಭವಾಗುತ್ತದೆ.
ತಯಾರಿಸಿದ ಹಿಟ್ಟನ್ನು ಬೇಕಿಂಗ್ ಪ್ಯಾನ್ ಗೆ ಹಾಕಿ, 170°C ಗೆ ಪ್ರೀಹೀಟ್ ಮಾಡಿಕೊಂಡ ಓವನ್ ನಲ್ಲಿ 30 - 35 ನಿಮಿಷ ಬೇಯಿಸಿ. ಕೇಕ್ ಬೆಂದಿದೆಯೇ ಎಂದು ನೋಡಲು ಒಂದು ಕಡ್ಡಿ ಅಥವಾ ಚಾಕುವನ್ನು ಕೇಕ್ ನ ಒಳಗೆ ತೂರಿಸಿ ನೋಡಿ; ಹಿಟ್ಟು ಚಾಕುವಿಗೆ ಅಂಟದಿದ್ದರೆ ಕೇಕ್ ಬೆಂದಿದೆ ಎಂದರ್ಥ.
ಬೆಂದ ಕೇಕ್ ನ್ನು ಸ್ವಲ್ಪ ತಣ್ಣಗಾದ ನಂತರ ಬೇಕಿಂಗ್ ಪಾತ್ರೆಯಿಂದ ಹೊರತೆಗೆದು ಪೂರ್ತಿ ತಣ್ಣಗಾಗಲು ಬಿಡಿ.
ಈಗ ಉಳಿದ ಇನ್ನೊಂದು ಭಾಗ ಹಿಟ್ಟಿಗೆ 100 ml ಕೋಕ್ ಸೇರಿಸಿ ಕಲಸಿಕೊಂಡು ಬೇಕಿಂಗ್ ಪಾತ್ರೆಗೆ ಹಾಕಿ 170°C ಗೆ ಪ್ರೀಹೀಟ್ ಮಾಡಿಕೊಂಡ ಓವನ್ ನಲ್ಲಿ 30 - 35 ನಿಮಿಷ ಬೇಯಿಸಿ.
ಎರಡೂ ಕೇಕ್ ಗಳು ಪೂರ್ತಿ ತಣ್ಣಗಾದ ಐಸಿಂಗ್ ನಿಂದ ಅಲಂಕರಿಸಿ.
ಸಕ್ಕರೆ ನೀರಿಗೆ ಮೇಲೆ ಹೇಳಿದಷ್ಟು ಸಕ್ಕರೆ ಮತ್ತು ನೀರನ್ನು ಒಂದು ಪಾತ್ರೆಯಲ್ಲಿ ಬಿಸಿಗಿಡಿ. ಸಕ್ಕರೆ ಪೂರ್ತಿಯಾಗಿ ಕರಗಿದ ನಂತರ ಉರಿಯನ್ನು ಆಫ್ ಮಾಡಿ.
ಕೇಕ್ ನ್ನು ಅಲಂಕರಿಸುವ ವಿಧಾನ:
ಪ್ರತಿ ಕೇಕ್ ನ್ನೂ ಒಂದೇ ಅಳತೆಯ ಎರಡು ಸ್ಲೈಸ್ ಗಳಾಗಿ ಕತ್ತರಿಸಿ. ಇದರಿಂದ 4 ಪದರುಗಳ ಕೇಕ್ ತಯಾರಿಸಿಬಹುದು. ಅಥವಾ ಒಂದೇ ಕೇಕ್ ತಯಾರಿಸಿದ್ದರೆ ಅದನ್ನು 2 ಅಥವಾ 3 ಪದರುಗಳಾಗಿ ಕತ್ತರಿಸಿಕೊಳ್ಳಿ.
ಕೇಕ್ ನ ಒಂದು ಪದರನ್ನು ಒಂದು ಪ್ಲೇಟ್ ಅಥವಾ ಕೇಕ್ ಬೇಸ್ ನ ಮೇಲೆ ಜೋಡಿಸಿಕೊಳ್ಳಿ. ಅದರಮೇಲೆ 3 - 4 ಟೀ ಸ್ಪೂನ್ ನಷ್ಟು ಸಕ್ಕರೆ ನೀರನ್ನು ಚಿಮುಕಿಸಿ. ಒಂದು ಪದರು ವ್ಹಿಪ್ಪಿಂಗ್ ಕ್ರೀಮ್ ಸವರಿಕೊಂಡು, ಮೇಲಿನಿಂದ ಚಿಕ್ಕದಾಗಿ ಕತ್ತರಿಸಿದ ಚೆರ್ರಿ ಚೂರುಗಳನ್ನು ಉದುರಿಸಿ.
ಇದರಮೇಲೆ ಕೇಕ್ ನ ಎರಡನೇ ಪದರನ್ನು ಇಟ್ಟು, ಸಕ್ಕರೆ ನೀರು ಚಿಮುಕಿಸಿ, ವ್ಹಿಪ್ಪಿಂಗ್ ಕ್ರೀಮ್ ಮತ್ತು ಚೆರ್ರಿ ಚೂರುಗಳಿಂದ ಅಲಂಕರಿಸಿ, ಮೇಲೆ ಇನ್ನೊಂದು ಪದರು ಕೇಕ್ ಜೋಡಿಸಿ.
ಎಲ್ಲ ಪದರುಗಳಿಗೂ ಹೀಗೇ ಮಾಡಿ, ಕೊನೆಯ ಪದರು ಕೇಕ್ ಜೋಡಿಸಿದ ನಂತರ ಕೇಕ್ ನ ಮೇಲ್ಭಾಗ ಮತ್ತು ಪಕ್ಕವನ್ನು ವ್ಹಿಪ್ಪಿಂಗ್ ಕ್ರೀಮ್ ನಿಂದ ಕವರ್ ಮಾಡಿ.
ಕೇಕ್ ನ ಮೇಲ್ಭಾಗ ಮತ್ತು ಪಕ್ಕಗಳನ್ನು ನಿಮ್ಮಿಷ್ಟದಂತೆ ಚಾಕೋಲೇಟ್ ಶೇವಿಂಗ್ಸ್, ಚೆರ್ರಿ ಹಣ್ಣುಗಳಿಂದ ಅಲಂಕಾರ ಮಾಡಿ.
ನಾನು ಈ ಕೇಕ್ ಗೆ ತುರಿದ ಚಾಕೋಲೇಟ್ ಮತ್ತು ಅರ್ಧಕ್ಕೆ ಕತ್ತರಿಸಿದ ಚೆರ್ರಿ ಹಣ್ಣುಗಳನ್ನು ಬಳಸಿದ್ದೇನೆ. ಸ್ಟ್ರಾಬೆರಿ ಅಥವಾ ಇನ್ಯಾವುದೇ ಬೆರ್ರಿ ಹಣ್ಣುಗಳನ್ನು ಕೂಡ ಬಳಸಬಹುದು.
ತಯಾರಾದ ಕೇಕ್ ನ್ನು 2 - 3 ಘಂಟೆಕಾಲ ಫ್ರಿಜ್ ನಲ್ಲಿಟ್ಟು ಸೆಟ್ ಆಗಲು ಬಿಡಿ. ನಂತರ ಸರ್ವ್ ಮಾಡಿ.
ಟಿಪ್ಸ್:

- ನಾನು ಹೆಚ್ಚು ಲೇಯರ್ ನ ಕೇಕ್ ಮಾಡೋಣವೆಂದು ಸ್ವಲ್ಪ ಚಿಕ್ಕ ಬೇಕಿಂಗ್ ಪಾತ್ರೆ ಬಳಸಿ, ಎರಡು ಪ್ರತ್ಯೇಕ ಕೇಕ್ ಗಳನ್ನು ತಯಾರಿಸಿದ್ದೇನೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಪೂರ್ತಿ ಹಿಟ್ಟನ್ನು ಒಮ್ಮೆಲೇ ಬಳಸಿ ಒಂದೇ ಕೇಕ್ ಕೂಡ ತಯಾರಿಸಬಹುದು.
- ವ್ಹಿಪ್ಪಿಂಗ್ ಕ್ರೀಮ್ ಸಿಗದಿದ್ದರೆ ಫ್ರೆಶ್ ಕ್ರೀಮ್ ಬಳಸಿ ಮನೆಯಲ್ಲೇ ವ್ಹಿಪ್ಪಿಂಗ್ ಕ್ರೀಮ್ ತಯಾರಿಸಬಹುದು: 300 ml ಫ್ರೆಶ್ ಕ್ರೀಮ್, 5 ಟೀ ಸ್ಪೂನ್ ಸಕ್ಕರೆ ಪುಡಿ ಮತ್ತು 1 ಟೀ ಸ್ಪೂನ್ ವೆನಿಲ್ಲಾ ಎಸ್ಸೆನ್ಸ್ ನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಬೀಟ್ ಮಾಡಿ. ಇದಕ್ಕೆ ಎಲೆಕ್ಟ್ರಿಕ್ ಬೀಟರ್ ಇದ್ದರೆ ಅನುಕೂಲ. ಇಲ್ಲದಿದ್ದರೆ ಎಗ್ ಬೀಟರ್ ಬಳಸಿ ಬೀಟ್ ಮಾಡಿ. ಕ್ರೀಮ್ ಪೂರ್ತಿ ನೊರೆಯಂತಾಗಿ, ಸ್ಪೂನ್ ನಲ್ಲಿ ತೆಗೆದರೆ ಕೆಳಗೆ ಬೀಳಬಾರದು. ಈ ಹದ ಬಂದಾಗ ಬೀಟ್ ಮಾಡುವುದನ್ನು ನಿಲ್ಲಿಸಿ. ಈ ವ್ಹಿಪ್ಪಿಂಗ್ ಕ್ರೀಮ್ ಹಾಗೇ ಇಟ್ಟರೆ ಕರಗಿಬಿಡುವುದರಿಂದ ಫ್ರಿಜ್ ನಲ್ಲಿಟ್ಟು ಬೇಕಾದ ತೆಗೆದು ಬಳಸಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)