ಮಾವಿನಕಾಯಿ ಚಟ್ನಿ / Raw Mango Chutney

Click here for English version.

ಈಗಂತೂ ಎಲ್ಲ ಕಡೆ ಮಾವಿನಕಾಯಿಯ ಸೀಜನ್. ಮಾವಿನಕಾಯಿಯ ಜೊತೆಗೆ ವಿವಿಧ ಬಗೆಯ ಮಾವಿನ ಹಣ್ಣುಗಳೂ ಅಂಗಡಿಗಳಲ್ಲಿ ದೊರೆಯುತ್ತಿವೆ. ನಾವಂತೂ ಈ  ವರ್ಷ ಮಾವಿನ ಸೀಜನ್ ನ ಸಂಪೂರ್ಣ ಉಪಯೋಗ ತೆಗೆದುಕೊಳ್ಳುತ್ತಿದ್ದೇವೆ ಎಂದೇ ಹೇಳಬಹುದು! 
ಬಹಳ ಸುಲಭದಲ್ಲಿ ತಯಾರಿಸಬಹುದಾದ ಮತ್ತು ಊಟಕ್ಕೆ ಹಿತವಾದ ಮಾವಿನಕಾಯಿ ಚಟ್ನಿಯ ರೆಸಿಪಿ ಇಲ್ಲಿದೆ..ಟ್ರೈ ಮಾಡಿ ನೋಡಿ :)


ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು 
ಸರ್ವಿಂಗ್ಸ್: 4 - 5 ಜನರಿಗೆ ಆಗುತ್ತದೆ 
ಬೇಕಾಗುವ ಸಾಮಗ್ರಿಗಳು:
ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಹುಳಿ ಮಾವಿನಕಾಯಿ - 1/2 ಕಪ್ 
ತೆಂಗಿನತುರಿ - 1 1/2 ಕಪ್  
ಲವಂಗ - 1 ಅಥವಾ 2
ಕೊತ್ತಂಬರಿ ಬೀಜ - 1/2 ಟೀ ಸ್ಪೂನ್ 
2 - 3 ಹಸಿಮೆಣಸು (ಖಾರಕ್ಕೆ ತಕ್ಕಂತೆ)
ಎಣ್ಣೆ - 1/2 ಟೀ ಸ್ಪೂನ್ 
ರುಚಿಗೆ ಉಪ್ಪು 


ಮಾಡುವ ವಿಧಾನ: 
ಒಗ್ಗರಣೆ ಸೌಟಿನಲ್ಲಿ ಆರ್ಧ ಚಮಚದಷ್ಟು ಎಣ್ಣೆ ಕಾಯಿಸಿ ಲವಂಗ, ಕೊತ್ತಂಬರಿ ಮತ್ತು ಹೆಚ್ಚಿದ ಹಸಿಮೆಣಸನ್ನು ಸೇರಿಸಿ ಹುರಿದುಕೊಳ್ಳಿ.
ಹುರಿದ ಸಾಮಗ್ರಿಗಳನ್ನು ತೆಂಗಿನತುರಿ ಮತ್ತು ಹೆಚ್ಚಿದ ಮಾವಿನಕಾಯಿಯೊಡನೆ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ. 
ರುಬ್ಬುವಾಗ ಸ್ವಲ್ಪವೇ ನೀರು ಸೇರಿಸಿ. ಈ ಚಟ್ನಿ ಗಟ್ಟಿಯಾಗಿದ್ದರೆ ಚೆನ್ನ.
ತಯಾರಾದ ಚಟ್ನಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಬೇಕಿದ್ದರೆ ಸಾಸಿವೆಯ ಒಗ್ಗರಣೆ ಮಾಡಿ.
ಈ ಚಟ್ನಿಯನ್ನು ಉಪ್ಪಿನಕಾಯಿಯಂತೆಯೂ ಬಳಸಬಹುದು. ಊಟ ಮಾಡುವಾಗ ಅನ್ನದೊಡನೆ ಕಲೆಸಿಕೊಳ್ಳಲೂ ಚೆನ್ನಾಗಿರುತ್ತದೆ.   

ಕಾಮೆಂಟ್‌ಗಳು