ಕಡ್ಲೆಮಡ್ಡಿ | ಹಯಗ್ರೀವ | Kadlemaddi | Hayagreeva | Chana Dal Sweet

Click here for English version.

ಇತ್ತೀಚಿಗೆ ಅಮ್ಮನಿಂದ ಕಲಿತ ಅಡಿಗೆಗಳಲ್ಲಿ ಕಡ್ಲೆಮಡ್ಡಿಯೂ ಒಂದು. ಸ್ವಲ್ಪ ಮಟ್ಟಿಗೆ ಇದು ಕಡಲೆಬೇಳೆ ಹೋಳಿಗೆ ಅಥವಾ ಒಬ್ಬಟ್ಟಿಗೆ ತಯಾರಿಸುವ ಹೂರಣವನ್ನೇ ಹೋಲುತ್ತದೆ. ರವಾ ಕೇಸರಿಭಾತ್ ನಂತೆಯೇ ಇದೂ ಸಹ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂಥ ಸಿಹಿತಿಂಡಿ. ಕಡ್ಲೆಮಡ್ಡಿಯನ್ನು ಹಯಗ್ರೀವ ಎಂತಲೂ ಹೇಳುತ್ತಾರೆ. ತಯಾರಿಸಲು ಹೆಚ್ಚು ಕಷ್ಟವೇನಿಲ್ಲದ ಈ ಸಿಹಿತಿಂಡಿ ತಿನ್ನಲು ಬಹಳ ರುಚಿ!


ತಯಾರಿಸಲು ಬೇಕಾಗುವ ಸಮಯ: 40 ನಿಮಿಷಗಳು 
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ 
ಡಿಫಿಕಲ್ಟಿ ಲೆವೆಲ್: ಮೀಡಿಯಮ್ 

ಬೇಕಾಗುವ ಸಾಮಗ್ರಿಗಳು:
ಕಡಲೆಬೇಳೆ - 3 ಕಪ್ 
ಬೆಲ್ಲ - 1 3/4 ಕಪ್ (ಸಿಹಿಗೆ ತಕ್ಕಂತೆ)
ಸಕ್ಕರೆ - 1/4 ಕಪ್ ಅಥವಾ ರುಚಿಗೆ ತಕ್ಕಷ್ಟು (ಟಿಪ್ಸ್ ನೋಡಿ)
ಉಪ್ಪು - 1 1/2 ಚಮಚ
ತೆಂಗಿನತುರಿ - 1 1/2 ಕಪ್
ಲವಂಗ -2
ಏಲಕ್ಕಿ -2
ತುಪ್ಪ (ಬೇಕಿದ್ದರೆ) - 2 ಚಮಚ
ಗೋಡಂಬಿ (ಬೇಕಿದ್ದರೆ) - 10
ದ್ರಾಕ್ಷಿ (ಬೇಕಿದ್ದರೆ) - 15

ಮಾಡುವ ವಿಧಾನ:
ಕಡ್ಲೆಬೇಳೆಯನ್ನು ಅರ್ಧ ಘಂಟೆ ನೀರಿನಲ್ಲಿ ನೆನೆಸಿಟ್ಟು ನಂತರ ಬೇಕಾದಷ್ಟು ನೀರು ಸೇರಿಸಿ ಪ್ರೆಷರ್ ಕುಕ್ಕರ್ ನಲ್ಲಿ ಬೇಳೆ ಚೆನ್ನಾಗಿ ಮೆತ್ತಗಾಗುವವರೆಗೆ (1 ಅಥವಾ 2 ವಿಸಿಲ್ ಆಗುವವರೆಗೆ) ಬೇಯಿಸಿಕೊಳ್ಳಿ.
ಬೇಯಿಸಿದ ಬೇಳೆಯಿಂದ ನೀರನ್ನೆಲ್ಲ ಬಸಿದು ತೆಗೆದುಬಿಡಿ. ಬೆಂದ ಮಿಶ್ರಣವನ್ನು ಒಂದು ಸೌಟು ಅಥವಾ ಮ್ಯಾಶರ್ ಬಳಸಿ ಸ್ವಲ್ಪ ಹಿಸುಕಿ.
ಒಂದು ದಪ್ಪ ತಳದ ಪಾತ್ರೆಯಲ್ಲಿ ಹಿಸುಕಿದ ಕಡ್ಲೆಬೇಳೆ ಮಿಶ್ರಣವನ್ನು ಬಿಸಿಗಿಡಿ. ಇದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ, ಸಕ್ಕರೆ, ಉಪ್ಪು ಮತ್ತು ತೆಂಗಿನತುರಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಕಡ್ಲೆಮಡ್ಡಿ ಮಿಶ್ರಣವನ್ನು ಹದವಾದ ಉರಿಯಲ್ಲಿ ಕೈಯಾಡಿಸುತ್ತಿದ್ದು, ಅದರಲ್ಲಿನ ನೀರಿನಂಶ ಕಡಿಮೆಯಾಗಿ ಮಿಶ್ರಣ ಸೌಟಿನಿಂದ ಕೆಳಗೆ ಬೀಳುವಂತಾದಾಗ ಅದಕ್ಕೆ ಏಲಕ್ಕಿ ಮತ್ತು ಲವಂಗದ ಪುಡಿ, ಗೋಡಂಬಿ ಚೂರುಗಳು ಹಾಗೂ ದ್ರಾಕ್ಷಿ ಸೇರಿಸಿ ಉರಿ ಆಫ್ ಮಾಡಿ.
ತಯಾರಾದ ಕಡ್ಲೆಮಡ್ಡಿಗೆ 2 - 3 ಚಮಚ ತುಪ್ಪ ಸೇರಿಸಿ ಕೈಯಾಡಿಸಿ ಮುಚ್ಚಳ ಮುಚ್ಚಿ 10 ನಿಮಿಷ ಸೆಟ್ ಆಗಲು ಬಿಡಿ.
ಕಡ್ಲೆಮಡ್ಡಿ ಸ್ವಲ್ಪ ಬಿಸಿ ಇರುವಾಗಲೇ ಸರ್ವಿಂಗ್ ಪ್ಲೇಟ್ ಗೆ ಹಾಕಿ, ಮೇಲಿನಿಂದ ಒಂದು ಚಮಚ ತುಪ್ಪ ಹಾಕಿಕೊಂಡು ಸವಿದುನೋಡಿ! ತುಪ್ಪ ಹಾಕಿಕೊಳ್ಳದೆ ಹಾಗೇ ತಿನ್ನಲೂ ಇದು ಚೆನ್ನಾಗಿರುತ್ತದೆ.


ಟಿಪ್ಸ್:
  • ಬೆಲ್ಲದ ಬದಲು ಬರೀ ಸಕ್ಕರೆ ಬಳಸಿಯೂ ಕಡ್ಲೆಮಡ್ಡಿ ತಯಾರಿಸಬಹುದು. ಆದರೆ ಬೆಲ್ಲ ಬಳಸುವುದರಿಂದ ಕಡ್ಲೆ ಮಡ್ಡಿಯ ರುಚಿ ಹೆಚ್ಚುತ್ತದೆ. 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)