ಹಲಸಿನ ಸೀಜನ್ ಶುರುವಾಗಿರುವುದರಿಂದ ನಮ್ಮ ಮನೆಯಲ್ಲೀಗ ಹಲಸಿನ ಚಿಪ್ಸ್, ಹಪ್ಪಳ ತಯಾರಿಸುವ ಸಂಭ್ರಮ. ಜೊತೆಗೆ ದಿನವೂ ಬಾಯಲ್ಲಿ ನೀರೂರಿಸುವ ಹಲಸಿನ ಥರಾವರಿ ಅಡಿಗೆಗಳು! ಅದರ ಜೊತೆಗೇ ಹಲಸಿನ ಹಣ್ಣಿನ ಹಣ್ಣಿನ ಕಡುಬು, ಹಲ್ವಾ ಇತ್ಯಾದಿ ಸಿಹಿ ತಿಂಡಿಗಳೂ ಆಗಾಗ ತಯಾರಾಗುತ್ತಿರುತ್ತವೆ.
ಹಲಸಿನ ಚಿಪ್ಸ್ ಎಂದ ತಕ್ಷಣ ನನಗೆ ಚಿಕ್ಕಂದಿನ ದಿನಗಳ ನೆನಪಾಗುತ್ತದೆ. ನನ್ನ ತವರುಮನೆಯಲ್ಲಿ ಹಲಸಿನ ಚಿಪ್ಸ್ ನ್ನು ತಯಾರಿಸಿ ಒಂದು ವರ್ಷದವರೆಗೂ ಇಟ್ಟು ಬಳಸುತ್ತಾರೆ. ಮನೆಯಲ್ಲಿ ನಾವು ನಾಲ್ಕೈದು ಜನ ಒಂದೇ ವಾರಿಗೆಯ ಮಕ್ಕಳು. ನಮ್ಮ ಕಣ್ಣು ತಪ್ಪಿಸಿ ಚಿಪ್ಸ್ ಕಾಯ್ದಿಡುವುದೆಂದರೆ ಅಮ್ಮ - ಚಿಕ್ಕಮ್ಮಂದಿರಿಗೆ ದೊಡ್ಡ ಸವಾಲ್! ಅವರು ಚಿಪ್ಸ್ ತುಂಬಿದ ಡಬ್ಬಗಳನ್ನು ಎಷ್ಟೇ ಜಾಗ್ರತೆಯಿಂದ ಅಡಗಿಸಿಟ್ಟರೂ ನಾವುಗಳು ಅದನ್ನು ಹುಡುಕಿ ಖಾಲಿ ಮಾಡಿಬಿಡುತ್ತಿದ್ದೆವು! ಈಗಲೂ ಹಲಸಿನ ಚಿಪ್ಸ್ ಮಾಡುವಾಗ ಅವರು ನಮ್ಮ ನೆನಪು ಮಾಡಿಕೊಂಡು ನಗುತ್ತಿರುತ್ತಾರೆ :)
ಹಲಸಿನ ಚಿಪ್ಸ್ ಎಂದ ತಕ್ಷಣ ನನಗೆ ಚಿಕ್ಕಂದಿನ ದಿನಗಳ ನೆನಪಾಗುತ್ತದೆ. ನನ್ನ ತವರುಮನೆಯಲ್ಲಿ ಹಲಸಿನ ಚಿಪ್ಸ್ ನ್ನು ತಯಾರಿಸಿ ಒಂದು ವರ್ಷದವರೆಗೂ ಇಟ್ಟು ಬಳಸುತ್ತಾರೆ. ಮನೆಯಲ್ಲಿ ನಾವು ನಾಲ್ಕೈದು ಜನ ಒಂದೇ ವಾರಿಗೆಯ ಮಕ್ಕಳು. ನಮ್ಮ ಕಣ್ಣು ತಪ್ಪಿಸಿ ಚಿಪ್ಸ್ ಕಾಯ್ದಿಡುವುದೆಂದರೆ ಅಮ್ಮ - ಚಿಕ್ಕಮ್ಮಂದಿರಿಗೆ ದೊಡ್ಡ ಸವಾಲ್! ಅವರು ಚಿಪ್ಸ್ ತುಂಬಿದ ಡಬ್ಬಗಳನ್ನು ಎಷ್ಟೇ ಜಾಗ್ರತೆಯಿಂದ ಅಡಗಿಸಿಟ್ಟರೂ ನಾವುಗಳು ಅದನ್ನು ಹುಡುಕಿ ಖಾಲಿ ಮಾಡಿಬಿಡುತ್ತಿದ್ದೆವು! ಈಗಲೂ ಹಲಸಿನ ಚಿಪ್ಸ್ ಮಾಡುವಾಗ ಅವರು ನಮ್ಮ ನೆನಪು ಮಾಡಿಕೊಂಡು ನಗುತ್ತಿರುತ್ತಾರೆ :)
ಒಳ್ಳೆಯ ಎಣ್ಣೆ ಬಳಸಿ ಗರಿಯಾಗಿ ಕರಿದರೆ ಚಿಪ್ಸ್ ಬಹಳ ದಿನಗಳವರೆಗೆ ಫ್ರೆಶ್ ಆಗಿ ಚೆನ್ನಾಗಿರುತ್ತದೆ. ಹಲಸಿನ ಚಿಪ್ಸ್ ತಯಾರಿಸುವ ವಿಧಾನ ಇಂತಿದೆ:
ತಯಾರಿಸಲು ಬೇಕಾಗುವ ಸಮಯ: 2 1/2 ಘಂಟೆ
ಡಿಫಿಕಲ್ಟಿ ಲೆವೆಲ್: ಡಿಫಿಕಲ್ಟ್
ಬೇಕಾಗುವ ಸಾಮಗ್ರಿಗಳು:
ಮಾಡುವ ವಿಧಾನ:
ಟಿಪ್ಸ್:
ತಯಾರಿಸಲು ಬೇಕಾಗುವ ಸಮಯ: 2 1/2 ಘಂಟೆ
ಡಿಫಿಕಲ್ಟಿ ಲೆವೆಲ್: ಡಿಫಿಕಲ್ಟ್
ಬೇಕಾಗುವ ಸಾಮಗ್ರಿಗಳು:
- ಚೆನ್ನಾಗಿ ಬೆಳೆದ ಮೀಡಿಯಂ ಸೈಜ್ ನ ಹಲಸಿನಕಾಯಿ - 1
- ಕರಿಯಲು ಎಣ್ಣೆ
- ಉಪ್ಪು - 4 ಟೀ ಸ್ಪೂನ್
- ನೀರು - 1 ಕಪ್
- ಚಿಪ್ಸ್ ಮಸಾಲಾ - ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
- ಹಲಸಿನಕಾಯಿಯ ತೊಳೆಗಳನ್ನು ಬಿಡಿಸಿ ಬೀಜವನ್ನು ಬೇರ್ಪಡಿಸಿಕೊಳ್ಳಿ. ಬಿಡಿಸಿದ ತೊಳೆಗಳನ್ನು ತೆಳ್ಳಗೆ ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ.
- ಒಂದು ಕಪ್ ನೀರಿಗೆ 3 ರಿಂದ 4 ಚಮಚ ಉಪ್ಪು ಸೇರಿಸಿ ಉಪ್ಪುನೀರು ತಯಾರಿಸಿಕೊಳ್ಳಿ.
- ಒಂದು ದಪ್ಪ ತಳದ ಅಗಲವಾದ ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಉದ್ದವಾಗಿ ಹೆಚ್ಚಿದ ಹಲಸಿನ ತೊಳೆಗಳನ್ನು ಹಾಕಿ 1 - 2 ಚಮಚ ಉಪ್ಪುನೀರು ಸೇರಿಸಿ ಮಧ್ಯಮ ಉರಿಯಲ್ಲಿ ಗರಿಯಾಗುವತನಕ ಕರಿಯಿರಿ.
- ಕರಿದ ಚಿಪ್ಸ್ ನ್ನು ಒಂದು ಜಾಲರಿ ಅಥವಾ ಟಿಶ್ಯೂ ಪೇಪರ್ ಮೇಲೆ 5 ನಿಮಿಷ ಹರವಿ ಎಣ್ಣೆ ಆರಲು ಬಿಡಿ.
- ಒಂದು ಪಾತ್ರೆಯಲ್ಲಿ ಕರಿದ ಚಿಪ್ಸ್ ನ್ನು ಹಾಕಿ, ಮೇಲಿನಿಂದ ರುಚಿಗೆ ತಕ್ಕಂತೆ ಅರ್ಧ ಚಮಚ ಅಥವಾ ಒಂದು ಚಮಚ ಚಿಪ್ಸ್ ಮಸಾಲಾ ಪುಡಿ ಉದುರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಒಮ್ಮೆ ರುಚಿ ನೋಡಿಕೊಂಡು ಇನ್ನೂ ಸ್ವಲ್ಪ ಮಸಾಲಾ ಪುಡಿ ಬೇಕಿದ್ದರೆ ಸೇರಿಸಿ ಮಿಕ್ಸ್ ಮಾಡಿ.
- ಹಲಸಿನ ತೊಳೆಗಳು ಖಾಲಿಯಾಗುವವರೆಗೂ ಈ ಮೇಲೆ ಹೇಳಿದ ಸ್ಟೆಪ್ ಗಳನ್ನು ಮುಂದುವರೆಸಿ.
- ತಯಾರಾದ ಹಲಸಿನ ಚಿಪ್ಸ್ ನ್ನು ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟು ಬಳಸಿ. ಬಿಸಿ ಬಿಸಿ ಟೀ ಅಥವಾ ಕಾಫಿಯೊಡನೆ ಸವಿಯಲು ಈ ಚಿಪ್ಸ್ ತುಂಬಾ ಚೆನ್ನಾಗಿರುತ್ತದೆ.
ಟಿಪ್ಸ್:
- ಚಿಪ್ಸ್ ಕರಿದಾಗ ಗರಿಯಾಗದಿದ್ದರೆ ಅದನ್ನು ತಣ್ಣಗಾದ ನಂತರ ಇನ್ನೊಮ್ಮೆ ಕರಿದರೆ ಗರಿಯಾಗುತ್ತದೆ. ಅಥವಾ ಕರಿಯುವಾಗ ಸ್ವಲ್ಪ ವಿನೆಗರ್ ಸೇರಿಸಿದರೂ ಚಿಪ್ಸ್ ಗರಿಗರಿಯಾಗುತ್ತದೆ.
- ತುಂಬಾ ದಿನಗಳವರೆಗೆ ಚಿಪ್ಸ್ ನ್ನು ಫ್ರೆಷ್ ಆಗಿಡಲು ಒಂದು ಉಪಾಯ: ಚಿಪ್ಸ್ ನ್ನು ಉಪ್ಪುನೀರು ಸೇರಿಸಿ ಗರಿಯಾಗಿ ಕರಿದು ಮಸಾಲಾ ಪುಡಿ ಸೇರಿಸದೆ ಹಾಗೆಯೇ ಡಬ್ಬದಲ್ಲಿ ತುಂಬಿಡಿ. ನಿಮಗೆ ಬೇಕೆನಿಸಿದಾಗ ಬಾಣಲೆಯಲ್ಲಿ ಸ್ವಲ್ಪ (4 - 5 ಚಮಚ) ಎಣ್ಣೆ ಕಾಯಿಸಿ ಅದಕ್ಕೆ ಸ್ವಲ್ಪ ಚಿಪ್ಸ್ ಮತ್ತು ರುಚಿಗೆ ತಕ್ಕಷ್ಟು ಚಿಪ್ಸ್ ಮಸಾಲಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ತಾಜಾ ಚಿಪ್ಸ್ ಸವಿಯಲು ಸಿದ್ಧ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)