Click here for English version.
ಈ ವರ್ಷ ನಮ್ಮೂರ ಕಡೆ ಮಾವಿನ ಫಸಲು ಚೆನ್ನಾಗಿ ಬರಬೇಕಾದ ವರ್ಷವಾಗಿತ್ತು. ಆದರೆ ನಮ್ಮ ಮನೆಯೂ ಸೇರಿದಂತೆ ಹೆಚ್ಚಿನ ಮನೆಗಳಲ್ಲಿ ಮಾವಿನ ಬೆಳೆ ಚೆನ್ನಾಗಿರಲಿಲ್ಲ. ನನ್ನ ತವರುಮನೆಯಲ್ಲಿ ಬೇರೆ ಬೇರೆ ಜಾತಿಯ ಮಾವಿನ ಮರಗಳು ಬಹಳ ಇದ್ದಿದ್ದರಿಂದ ನಾವೆಲ್ಲ ಚಿಕ್ಕಂದಿನಿಂದಲೂ ಮಾವಿನ ಹಣ್ಣನ್ನು ಸವಿಯುತ್ತ ಬೆಳೆದವರು. ಮನೆಯವರೆಲ್ಲ ಎಷ್ಟು ತಿಂದರೂ, ಪರಿಚಯದವರಿಗೆ ಕೊಟ್ಟರೂ ಖರ್ಚಾಗುತ್ತಿರಲಿಲ್ಲ ಮಾವಿನ ಹಣ್ಣುಗಳು! ಈ ವರ್ಷದ ಮಾವಿನ ಸೀಜನ್ ಗೆ ಬರೀ ಅಂಗಡಿಯಿಂದ ಕೊಂಡುತಂದ ಮಾವಿನ ಹಣ್ಣನ್ನೇ ತಿನ್ನುವುದಾಯಿತು ಅಂದುಕೊಂಡಿದ್ದೆವು ಮನೆಯವರೆಲ್ಲರೂ.. ಆದರೆ ಕೊನೆಗೂ ಮನೆಯಲ್ಲಿ ಬೆಳೆದ ಉತ್ತಮ ಜಾತಿಯ ಮಾವಿನ ಹಣ್ಣುಗಳನ್ನು ಸಖತ್ ಆಗಿ ತಿನ್ನುವ ಅವಕಾಶ ದೊರಕಿಬಿಟ್ಟಿತು!
ನನ್ನ ಅಮ್ಮನ ತವರುಮನೆಯಲ್ಲಿ ಈ ವರ್ಷ ಮಾವಿನ ಹಣ್ಣುಗಳು ಚೆನ್ನಾಗಿ ಬಿಟ್ಟಿದ್ದವಂತೆ. ಅವರ ಮನೆಯವರು ಮಾವಿನ ಹಣ್ಣನ್ನು ತಿನ್ನಲು ನಮ್ಮ ಮನೆಯವರನ್ನು ಪ್ರತಿ ವರ್ಷವೂ ಕರೆಯುವುದು ವಾಡಿಕೆ. ಈ ವರ್ಷ ಮನೆ ಕಡೆ ತೊಂದರೆಗಳಿಂದಾಗಿ ಅಮ್ಮನ ಅಣ್ಣಂದಿರು ನಾಲ್ಕೈದು ಬಾರಿ ಫೋನ್ ಮಾಡಿ ಕರೆದರೂ ಅವರ ಮನೆಗೆ ಯಾರಿಗೂ ಹೋಗಲಾಗಿರಲಿಲ್ಲ. ಕರೆದು ಕರೆದು ಬೇಸತ್ತು ಅವರೇ ಕೊನೆಗೆ ಅಮ್ಮನ ಮನೆಗೆ ಒಂದಿಷ್ಟು ಮಾವಿನ ಹಣ್ಣು ಮತ್ತು ಮಾವಿನ ಕಾಯಿಗಳನ್ನು ತಂದುಕೊಟ್ಟರು! ಬೇರೆ ಬೇರೆ ವೆರೈಟಿಯ ಸವಿಯಾದ ಮಾವಿನ ಹಣ್ಣುಗಳನ್ನು ನಾವೆಲ್ಲ ವಾರಗಟ್ಟಲೆ ತಿಂದೆವು!
ಸಾಮಾನ್ಯವಾಗಿ ಮಾವಿನಹಣ್ಣು ಇದ್ದಾಗಲೆಲ್ಲ ನಮ್ಮ ಮನೆಯಲ್ಲಿ ಮಾವಿನ ಸೀಕರಣೆ (ರಸಾಯನ) ಮಾಡುತ್ತಾರೆ. ಇದನ್ನು ಡೆಸರ್ಟ್ ನಂತೆಯೂ ತಿನ್ನಬಹುದು ಅಥವಾ ಸಿಹಿ ಪ್ರಿಯರು ದೋಸೆ ಅಥವಾ ರೊಟ್ಟಿಯೊಡನೆ ಸೈಡ್ ಡಿಶ್ ನಂತೆಯೂ ಬಳಸಬಹುದು. ಮಾವಿನ ಸೀಕರಣೆ ಮಾಡುವುದು ಹೇಗೆಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಈಗ ನಾನು ಹೇಳ ಹೊರಟಿರುವುದು ಮಾವಿನಕಾಯಿಯ ಒಂದು ಹೊಸ ಅಡಿಗೆಯ ಬಗ್ಗೆ! ಇತ್ತೀಚೆಗೆ ನಾನು ನಮ್ಮ ಅಕ್ಕನ ಮನೆಗೆ ಹೋದಾಗ ಅಲ್ಲಿ ಮಾವಿನಕಾಯಿಯ ಸಿಹಿ ಉಪ್ಪಿನಕಾಯಿ ಮಾಡಿದ್ದರು. ಸ್ವಲ್ಪ ಸಿಹಿ, ಸ್ವಲ್ಪ ಹುಳಿಯಾದ ಉಪ್ಪಿನಕಾಯಿ ಬಹಳ ಚೆನ್ನಾಗಿತ್ತು. ಅವರ ಮನೆಯವರಿಂದ ಕಲಿತ ಮಾವಿನಕಾಯಿ ಸಿಹಿ ಉಪ್ಪಿನಕಾಯಿ ಮಾಡುವ ವಿಧಾನ ಇಂತಿದೆ:
ತಯಾರಿಸಲು ಬೇಕಾಗುವ ಸಮಯ: 40 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಬೇಕಾಗುವ ಸಾಮಗ್ರಿಗಳು:
ಮಾಡುವ ವಿಧಾನ:
ಸಾಮಾನ್ಯವಾಗಿ ಮಾವಿನಹಣ್ಣು ಇದ್ದಾಗಲೆಲ್ಲ ನಮ್ಮ ಮನೆಯಲ್ಲಿ ಮಾವಿನ ಸೀಕರಣೆ (ರಸಾಯನ) ಮಾಡುತ್ತಾರೆ. ಇದನ್ನು ಡೆಸರ್ಟ್ ನಂತೆಯೂ ತಿನ್ನಬಹುದು ಅಥವಾ ಸಿಹಿ ಪ್ರಿಯರು ದೋಸೆ ಅಥವಾ ರೊಟ್ಟಿಯೊಡನೆ ಸೈಡ್ ಡಿಶ್ ನಂತೆಯೂ ಬಳಸಬಹುದು. ಮಾವಿನ ಸೀಕರಣೆ ಮಾಡುವುದು ಹೇಗೆಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಈಗ ನಾನು ಹೇಳ ಹೊರಟಿರುವುದು ಮಾವಿನಕಾಯಿಯ ಒಂದು ಹೊಸ ಅಡಿಗೆಯ ಬಗ್ಗೆ! ಇತ್ತೀಚೆಗೆ ನಾನು ನಮ್ಮ ಅಕ್ಕನ ಮನೆಗೆ ಹೋದಾಗ ಅಲ್ಲಿ ಮಾವಿನಕಾಯಿಯ ಸಿಹಿ ಉಪ್ಪಿನಕಾಯಿ ಮಾಡಿದ್ದರು. ಸ್ವಲ್ಪ ಸಿಹಿ, ಸ್ವಲ್ಪ ಹುಳಿಯಾದ ಉಪ್ಪಿನಕಾಯಿ ಬಹಳ ಚೆನ್ನಾಗಿತ್ತು. ಅವರ ಮನೆಯವರಿಂದ ಕಲಿತ ಮಾವಿನಕಾಯಿ ಸಿಹಿ ಉಪ್ಪಿನಕಾಯಿ ಮಾಡುವ ವಿಧಾನ ಇಂತಿದೆ:
ತಯಾರಿಸಲು ಬೇಕಾಗುವ ಸಮಯ: 40 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಬೇಕಾಗುವ ಸಾಮಗ್ರಿಗಳು:
- 1 ದೊಡ್ಡ ಮಾವಿನಕಾಯಿ (ತೋತಾಪುರಿ ಮಾವಿನಕಾಯಿ ಆದರೆ ಒಳ್ಳೆಯದು)
- ಜೋನಿ ಬೆಲ್ಲ - 1 ರಿಂದ 1 1/2 ಕಪ್
- ಉಪ್ಪು - 1 ಚಮಚ
- ಹಸಿಮೆಣಸು - 2 (ಖಾರಕ್ಕೆ ತಕ್ಕಂತೆ)
- ನೀರು - 1/2 ಕಪ್
ಮಾಡುವ ವಿಧಾನ:
- ಮಾವಿನಕಾಯಿಯ ಸಿಪ್ಪೆ ತೆಗೆದು ಮಧ್ಯಮ ಗಾತ್ರದ ಸ್ವಲ್ಪ ತೆಳ್ಳಗಿನ ಸ್ಲೈಸ್ ಗಳಾಗಿ ಹೆಚ್ಚಿಕೊಳ್ಳಿ.
- ಒಂದು ಪಾತ್ರೆಯಲ್ಲಿ ಅರ್ಧ ಕಪ್ ನಷ್ಟು ನೀರು ಬಿಸಿಗಿಟ್ಟು, ನೀರು ಬಿಸಿಯಾದಾಗ ಅದಕ್ಕೆ ಮಾವಿನ ಸ್ಲೈಸ್ ಗಳನ್ನು ಹಾಕಿ ಒಂದು ನಿಮಿಷ ಬೇಯಿಸಿ.
- ಅರ್ಧ ಬೆಂದ ಮಾವಿನ ಹೋಳಿಗೆ ರುಚಿಗೆ ತಕ್ಕಷ್ಟು ಉಪ್ಪು, ಚೆನ್ನಾಗಿ ಸಿಹಿಯಾಗುವಷ್ಟು ಬೆಲ್ಲ, ಸೀಳಿದ ಹಸಿಮೆಣಸು ಸೇರಿಸಿ ದಪ್ಪ ಪಾಕ (ಜೇನುತುಪ್ಪದ ಹದ) ಬರುವವರೆಗೆ ಕುದಿಸಿ ಉರಿ ಆಫ್ ಮಾಡಿ. ಈ ಮಿಶ್ರಣ ದಪ್ಪವಾಗುವಷ್ಟರಲ್ಲಿ ಮಾವಿನ ಸ್ಲೈಸ್ ಗಳೂ ಚೆನ್ನಾಗಿ ಬೆಂದು ಟ್ರಾನ್ಸ್ ಪರೆಂಟ್ ಆಗಿರುತ್ತವೆ.
- ಈ ಉಪ್ಪಿನಕಾಯಿ ಊಟಕ್ಕೆ ನೆಂಜಿಕೊಳ್ಳಲು ಚೆನ್ನಾಗಿರುತ್ತದೆ. ಇದನ್ನು 2 - 3 ವಾರದವರೆಗೂ ಇಟ್ಟುಕೊಂಡು ಬಳಸಬಹುದು.
ಟಿಪ್ಸ್:
- ಈ ಉಪ್ಪಿನಕಾಯಿಗೆ ಯಾವ ಮಾವಿನಕಾಯಿ ಬಳಸಿದರೂ ಅಗುತ್ತದೆ. ತೋತಾಪುರಿ ಮಾವಿನಕಾಯಿ ಆದರೆ ಉತ್ತಮ.
- ಖಾರಕ್ಕೆ ಹಸಿಮೆಣಸಿನ ಬದಲು ಮೆಣಸಿನಪುಡಿಯನ್ನೂ ಬಳಸಬಹುದು.
- ಈ ಉಪ್ಪಿನಕಾಯಿ ಹುಳಿ - ಸಿಹಿ ಎರಡೂ ಆಗಿದ್ದರೆ ರುಚಿ. ಒಲೆಯ ಉರಿ ಆಫ್ ಮಾಡುವ ಮುನ್ನ ಒಮ್ಮೆ ಉಪ್ಪಿನಕಾಯಿಯ ರುಚಿ ನೋಡಿ ಸಿಹಿ, ಹುಳಿ, ಖಾರ ಏನಾದರೂ ಬೇಕಿದ್ದರೆ ಸೇರಿಸಿ. ಹುಳಿ ಕಡಿಮೆ ಎನ್ನಿಸಿದರೆ ನಿಂಬೆರಸ ಸೇರಿಸಬಹುದು.
mouth watering pickle, first time here,happy to follow u, glad if u visit my blog....
ಪ್ರತ್ಯುತ್ತರಅಳಿಸಿhttp://malinisdelights.blogspot.in
Thanks Malini..will visit your blog during my free time :)
ಅಳಿಸಿ