Click here for English version.
ಕರಬೂಜ ಹಣ್ಣು ಎಂದ ತಕ್ಷಣ ನನಗೆ ನೆನಪಾಗುವುದು ಡಯೆಟ್. ನಾವು ಡಯೆಟ್ ಪ್ರಿಯರಲ್ಲ, ಆದರೆ ಕರಬೂಜ ಹಣ್ಣು ನಮಗೆ ಪ್ರಿಯ! ಸೆಖೆಯ ದಿನಗಳಲ್ಲಿ ಈ ಹಣ್ಣಿನ ಬಳಕೆ ಎಲ್ಲರಿಗೂ ಬಹಳ ಒಳ್ಳೆಯದು. ನಾನು ಕೇಳಿದಂತೆ, ಕರಬೂಜ ಹಣ್ಣು ವಿಟಾಮಿನ್ 'ಎ' ಮತ್ತು 'ಸಿ', ಫೋಲಿಕ್ ಆಸಿಡ್, ಪೊಟಾಷಿಯಂ ಮುಂತಾದ ಅಗತ್ಯ ಖನಿಜಾಂಶಗಳ ಆಗರ. ನಮ್ಮ ದೇಹದಲ್ಲಿ ನೀರಿನಂಶ ಕಾಯ್ದುಕೊಳ್ಳುವುದಕ್ಕೂ ಇದು ಸಹಕಾರಿ. ಕರಬೂಜ ಹಣ್ಣನ್ನು ಕತ್ತರಿಸಿಕೊಂಡು ಹಾಗೆಯೇ ತಿಂದರೂ ಚೆನ್ನಾಗಿರುತ್ತದೆ ಅಥವಾ ಪಾಯಸ, ಜ್ಯೂಸ್ ಮಾಡಿಕೊಂಡೂ ಸವಿಯಬಹುದು.
ಕರಬೂಜ ಹಣ್ಣಿನ ಪಾಯಸ ತಯಾರಿಸುವ ವಿಧಾನ ಇಲ್ಲಿದೆ. ರುಚಿಕರವಾದ ಈ ಪಾಯಸ ತಯಾರಿಸಲು ಹೆಚ್ಚಿನ ಶ್ರಮವೇನೂ ಬೇಕಿಲ್ಲ. ಈ ಪಾಯಸವನ್ನು ತಯಾರಿಸಿದ ತಕ್ಷಣವೇ ಸವಿಯಬಹುದು.. ಫ್ರಿಜ್ ನಲ್ಲಿಟ್ಟು ತಣ್ಣಗಾದ ನಂತರ ಕುಡಿದರೆ ಇನ್ನೂ ಹೆಚ್ಚು ರುಚಿ!
ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು
ಫ್ರಿಜ್ ನಲ್ಲಿ ಇಡಬೇಕಾದ ಸಮಯ: 1 ಘಂಟೆ
ಸರ್ವಿಂಗ್ಸ್: 3 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಸುಲಭ
ಬೇಕಾಗುವ ಸಾಮಗ್ರಿಗಳು:
ತಯಾರಿಸುವ ವಿಧಾನ:
ಟಿಪ್ಸ್:
ಕರಬೂಜ ಹಣ್ಣಿನ ಪಾಯಸ ತಯಾರಿಸುವ ವಿಧಾನ ಇಲ್ಲಿದೆ. ರುಚಿಕರವಾದ ಈ ಪಾಯಸ ತಯಾರಿಸಲು ಹೆಚ್ಚಿನ ಶ್ರಮವೇನೂ ಬೇಕಿಲ್ಲ. ಈ ಪಾಯಸವನ್ನು ತಯಾರಿಸಿದ ತಕ್ಷಣವೇ ಸವಿಯಬಹುದು.. ಫ್ರಿಜ್ ನಲ್ಲಿಟ್ಟು ತಣ್ಣಗಾದ ನಂತರ ಕುಡಿದರೆ ಇನ್ನೂ ಹೆಚ್ಚು ರುಚಿ!
ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು
ಫ್ರಿಜ್ ನಲ್ಲಿ ಇಡಬೇಕಾದ ಸಮಯ: 1 ಘಂಟೆ
ಸರ್ವಿಂಗ್ಸ್: 3 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಸುಲಭ
ಬೇಕಾಗುವ ಸಾಮಗ್ರಿಗಳು:
- ಕರಬೂಜ ಹಣ್ಣು - ಮೀಡಿಯಂ ಸೈಜ್ ಹಣ್ಣಿನ ಕಾಲು ಭಾಗ
- ಕುದಿಸಿ ಆರಿಸಿದ ಹಾಲು - 2 ಕಪ್
- ಸಕ್ಕರೆ - 1/2 ಕಪ್ ಅಥವಾ ಸಿಹಿಯಾಗುವಷ್ಟು
- ಉಪ್ಪು - ಚಿಟಿಕೆ
- ಏಲಕ್ಕಿ ಪುಡಿ - 1/2 ಟೀ ಚಮಚ
ತಯಾರಿಸುವ ವಿಧಾನ:
- ಕರಬೂಜ ಹಣ್ಣಿನ ಸಿಪ್ಪೆ ಮತ್ತು ಬೀಜವನ್ನು ತೆಗೆದು, ಉಳಿದ ಭಾಗವನ್ನು ತುರಿಯುವ ಮಣೆಯಲ್ಲಿ ತುರಿದುಕೊಳ್ಳಿ.
- ಇದಕ್ಕೆ ಹಾಲು, ಸಕ್ಕರೆ, ಚಿಟಿಕೆ ಉಪ್ಪು ಮತ್ತು ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ.
- ತಯಾರಾದ ಪಾಯಸವನ್ನು ಹಾಗೆಯೇ ಸವಿಯಬಹುದು ಇಲ್ಲವೇ ಫ್ರಿಜ್ ನಲ್ಲಿಟ್ಟು ತಣ್ಣಗಾದ ನಂತರ ಸರ್ವ್ ಮಾಡಬಹುದು.
ಟಿಪ್ಸ್:
- ಬೆಲ್ಲ ಇಷ್ಟಪಡುವವರು ಈ ಪಾಯಸಕ್ಕೆ ಸಕ್ಕರೆಯ ಬದಲು ಬೆಲ್ಲ ಬಳಸಬಹುದು.
- ಅರ್ಜೆಂಟ್ ಆಗಿ ತಣ್ಣಗಿನ ಪಾಯಸ ತಯಾರಿಸಬೇಕೆಂದರೆ ಹಾಲನ್ನು ಮೊದಲೇ ಫ್ರಿಜ್ ನಲ್ಲಿಟ್ಟು ತಣ್ಣಗೆ ಮಾಡಿಕೊಂಡು ಪಾಯಸಕ್ಕೆ ಬಳಸಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)