ಕೇಸರಿ, ಶಿರಾ ಅಥವಾ ಶೀರ ಎಂತಲೂ ಕರೆಯಲ್ಪಡುವ ಈ ಸಿಹಿತಿಂಡಿ ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತ. ಮನೆಗೆ ದಿಢೀರ್ ಎಂದು ಯಾರಾದರೂ ಅತಿಥಿಗಳು ಬಂದರೆ ಏನು ತಯಾರಿಸಬೇಕೆಂದು ಯೋಚಿಸಿದಾಗ ಮೊದಲು ನೆನಪಾಗುವುದು ಕೇಸರಿ. ಮದುವೆ - ಮುಂಜಿ ಇತ್ಯಾದಿ ಸಮಾರಂಭಗಳಲ್ಲಿ ಕೇಸರಿಯನ್ನು ಸಾಮಾನ್ಯವಾಗಿ ತಯಾರಿಸುತ್ತಾರೆ. ರವಾ ಕೇಸರಿ / ಶಿರಾ ರೆಸಿಪಿಯನ್ನು ಈ ಮೊದಲೇ ಬರೆದಿದ್ದೆ. ರವೆ ಬಳಸಿ ತಯಾರಿಸುವ ಈ ಸಿಹಿತಿಂಡಿಗೆ ಬೇರೆಬೇರೆ ಹಣ್ಣುಗಳನ್ನು ಸೇರಿಸಿ ತಯಾರಿಸಿದರೆ ಇನ್ನೂ ರುಚಿ!
ಕೆಲದಿನಗಳ ಹಿಂದೆ ಪೈನಾಪಲ್ ಜ್ಯಾಮ್ ತಯಾರಿಸಲೆಂದು ಪೈನಾಪಲ್ ಹಣ್ಣುಗಳನ್ನು ತಂದಿದ್ದೆವು. ಹಣ್ಣುಗಳು ತುಂಬ ದೊಡ್ಡದಾಗಿದ್ದರಿಂದ ಜ್ಯಾಮ್ ಮಾಡಲು ಕತ್ತರಿಸಿದ ನಂತರವೂ ಸ್ವಲ್ಪ ಉಳಿಯಿತು. ಅದನ್ನು ಬಳಸಿ ಪೈನಾಪಲ್ ಕೇಸರಿ / ಶಿರಾ ತಯಾರಿಸಿ ಅತಿಥಿಗಳೊಡನೆ ಸವಿದೆವು.
ಪೈನಾಪಲ್ ಕೇಸರಿ ತಯಾರಿಸುವ ವಿಧಾನ ಈ ಕೆಳಗಿನಂತಿದೆ:
ತಯಾರಿಸಲು ಬೇಕಾಗುವ ಸಮಯ: 35 - 40 ನಿಮಿಷಗಳು
ಸರ್ವಿಂಗ್ಸ್: 8 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಬೇಕಾಗುವ ಸಾಮಗ್ರಿಗಳು:
ಸೂಜಿ ರವಾ - 1 ಕಪ್
ಸಕ್ಕರೆ - 2 ಕಪ್
ಉಪ್ಪು - ದೊಡ್ಡ ಚಿಟಿಕೆ
ತುಪ್ಪ - 2/3 ಕಪ್
ಬಿಸಿ ನೀರು - 2 1/2 ಕಪ್
ಪೈನಾಪಲ್ (ತುರಿದದ್ದು, ರಸವನ್ನೂ ಸೇರಿಸಿ) - 1/2 ಕಪ್
ಗೋಡಂಬಿ ಚೂರುಗಳು - 3 ರಿಂದ 4 ಟೇಬಲ್ ಸ್ಪೂನ್
ಒಣದ್ರಾಕ್ಷಿ - ಸ್ವಲ್ಪ
ಏಲಕ್ಕಿಪುಡಿ - 1 ಟೀ ಸ್ಪೂನ್
ತಯಾರಿಸುವ ವಿಧಾನ:
ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪವನ್ನು ಬಿಸಿಗಿಡಿ. ಇದಕ್ಕೆ ಸೂಜಿ ರವೆಯನ್ನು ಸೇರಿಸಿ ಸಣ್ಣ ಉರಿಯಲ್ಲಿ 8 - 10 ನಿಮಿಷ ಅಥವಾ ಚೆನ್ನಾಗಿ ಪರಿಮಳ ಬರುವವರೆಗೆ ಹುರಿಯಿರಿ.
ರವೆ ಹುರಿಯುವಷ್ಟರಲ್ಲಿ ನೀರು ಕುದಿಯುವಷ್ಟು ಬಿಸಿಯಾಗಿರಲಿ.
ಹುರಿದ ರವೆಗೆ ದೊಡ್ಡ ಚಿಟಿಕೆಯಷ್ಟು ಉಪ್ಪು ಹಾಗೂ ಎರಡೂವರೆ ಕಪ್ ನಷ್ಟು ಬಿಸಿನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಒಂದು ಪ್ಲೇಟ್ ಮುಚ್ಚಿ 7 - 8 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಮಿಶ್ರಣವನ್ನು ಆಗಾಗ್ಗೆ ಕೈಯಾಡಿಸುತ್ತಿರಿ.
ನೀರಿನಂಶ ಆರಿ ರವಾ ಮಿಶ್ರಣ ಬೆಂದ ನಂತರ ಇದಕ್ಕೆ ಎರಡು ಕಪ್ ನಷ್ಟು ಸಕ್ಕರೆ ಸೇರಿಸಿ ಕೈಯಾಡಿಸಿ. ಸಕ್ಕರೆ ಸೇರಿಸಿದಾಗ ಮಿಶ್ರಣ ನೀರೊಡೆದು ಪುನಃ ತೆಳ್ಳಗಾಗುತ್ತದೆ.
ಮುಚ್ಚಳವನ್ನು ಅರೆಬರೆ ಮುಚ್ಚಿ ಮಿಶ್ರಣವನ್ನು 8 - 10 ನಿಮಿಷ ಬೇಯಿಸಿ. ಆಗಾಗ್ಗೆ ಕೈಯಾಡಿಸಲು ಮರೆಯಬೇಡಿ.
ಗೋಡಂಬಿ ಚೂರುಗಳು ಹಾಗೂ ದ್ರಾಕ್ಷಿಯನ್ನು ಒಂದು ಚಮಚದಷ್ಟು ತುಪ್ಪದಲ್ಲಿ ಹುರಿದು ಕೇಸರಿಗೆ ಸೇರಿಸಿ.
ಕೊನೆಯಲ್ಲಿ ಇದಕ್ಕೆ ತುರಿದ ಪೈನಾಪಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಪ್ಲೇಟ್ ನ್ನು ಅರ್ಧ ಮುಚ್ಚಿ ಇನ್ನೂ ಐದು ನಿಮಿಷ ಬೇಯಿಸಿ ಉರಿ ಆಫ್ ಮಾಡಿ.
ಬಿಸಿಬಿಸಿ ಪೈನಾಪಲ್ ಕೇಸರಿಯನ್ನು ಉಪ್ಪಿಟ್ಟು ಅಥವಾ ಏನಾದರೂ ಕುರುಕಲು ತಿಂಡಿಯೊಡನೆ ಸವಿಯಿರಿ!
ಟಿಪ್ಸ್:
ಪೈನಾಪಲ್ ನ್ನು ತುರಿಯುವಾಗ ಸಿಗುವ ಜ್ಯೂಸ್ ನ್ನೂ ಅಳತೆ ಮಾಡುವಾಗ ಸೇರಿಸಿ. ಕೆಲವರು ಪೈನಾಪಲ್ ನ್ನು ತುರಿಯುವ ಬದಲು ಹೆಚ್ಚಿಕೊಂಡು ಮಿಕ್ಸಿಯಲ್ಲಿ ತಿರುವಿಕೊಂಡು ಬಳಸುತ್ತಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)