ಆಲೂಗಡ್ಡೆ ಪೋಡಿ - ಓವನ್ ಹಾಗೂ ತವಾದಲ್ಲಿ ತಯಾರಿಸುವ ವಿಧಾನ

ಕೋವಿಡ್ - 2019 ನಿಂದಾಗಿ ಹೊರಗೆಲ್ಲೂ ಹೋಗುವ ಹಾಗಿಲ್ಲ. ಎಲ್ಲರೂ ಮನೆಯಲ್ಲೇ ಇದ್ದಾಗ ಊಟ, ತಿಂಡಿ, ಟೀ ಎಂದು ಕೆಲಸವೂ ಜಾಸ್ತಿ. ಮನೆಯಲ್ಲಿ ಆಲೂಗಡ್ಡೆ ಇದ್ದರೆ ಸುಲಭದಲ್ಲಿ ತಯಾರಿಸಬಹುದಾದ ಪೋಡಿ ರೆಸಿಪಿ ಇಲ್ಲಿದೆ. ಊಟಕ್ಕೆ ಸೈಡ್ ಡಿಶ್ ನಂತೆಯೂ ಹಾಕಿಕೊಳ್ಳಬಹುದು ಅಥವಾ ಸಂಜೆಯ ಸ್ನ್ಯಾಕ್ಸ್ ಗೂ ಚೆನ್ನಾಗಿರುತ್ತದೆ. 


ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು 
ಡಿಫಿಕಲ್ಟಿ ಲೆವೆಲ್: ಮೀಡಿಯಂ 
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು:
  • ಆಲೂಗಡ್ಡೆ - 2 ದೊಡ್ಡದು 
  • ಸೂಜಿ ರವಾ - 3 ಟೇಬಲ್ ಚಮಚ 
  • ಉಪ್ಪು - ರುಚಿಗೆ ತಕ್ಕಷ್ಟು 
  • ಅಚ್ಚ ಖಾರದ ಪುಡಿ - 3/4 ಟೀ ಚಮಚ ಅಥವಾ ಖಾರಕ್ಕೆ ತಕ್ಕಷ್ಟು 
  • ಎಣ್ಣೆ  - ಸ್ವಲ್ಪ 

ತಯಾರಿಸುವ ವಿಧಾನ:
  • ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ತೆಳ್ಳಗಿನ ವೃತ್ತಗಳಾಗಿ ಕತ್ತರಿಸಿಕೊಳ್ಳಿ. 
  • ಸೂಜಿ ರವೆ, ಉಪ್ಪು, ಅಚ್ಚ ಖಾರದ ಪುಡಿ ಇಷ್ಟನ್ನೂ ಒಂದು ಬೌಲ್ ನಲ್ಲಿ ಮಿಕ್ಸ್ ಮಾಡಿಕೊಳ್ಳಿ. 
  • ಆಲೂಗಡ್ಡೆ ಪೀಸ್ ಗಳನ್ನು ರವಾ ಮಿಶ್ರಣದಲ್ಲಿ ಎರಡೂ ಕಡೆ ಅದ್ದಿ, ಕಾದ ತವಾದ ಮೇಲೆ ಸಣ್ಣ ಉರಿಯಲ್ಲಿ ಬೇಯಿಸಿ. 
  • ಬೇಯಿಸುವಾಗ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ. 


ಓವನ್ ನಲ್ಲಿ ಬೇಯಿಸುವುದಾದರೆ:

  • ಓವನ್ ನ್ನು 175C ಗೆ ಪ್ರಿ-ಹೀಟ್ ಮಾಡಿಕೊಳ್ಳಿ. 
  • ಬೇಕಿಂಗ್ ಟ್ರೇ ಗೆ ಬೇಕಿಂಗ್ ಶೀಟ್ ಹಾಕಿಕೊಂಡು ಅದರಮೇಲೆ ರವಾ ದಲ್ಲಿ ಅದ್ದಿದ ಆಲೂಗಡ್ಡೆ ಪೀಸ್ ಗಳನ್ನು ಒಂದರ ಪಕ್ಕ ಒಂದರಂತೆ ಇಡುತ್ತಾ ಹೋಗಿ. 
  • ಪ್ರತಿ ಆಲೂಗಡ್ಡೆ ಆಲೂಗಡ್ಡೆ ಪೀಸ್ ಪೀಸ್ ನ ಮೇಲೆಯೂ 4 - 5 ಹನಿಯಷ್ಟು ಎಣ್ಣೆ ಹಾಕಿ. 
  • ಪ್ರಿ-ಹೀಟ್ ಮಾಡಿದ ಓವನ್ ನಲ್ಲಿ ಆಲೂಗಡ್ಡೆ ಪೀಸ್ ಗಳನ್ನು 15 ನಿಮಿಷ ಬೇಯಿಸಿ. 
  • 5 ನಿಮಿಷದ ನಂತರ ಟ್ರೇ ಯನ್ನು ಹೊರತೆಗೆದು ಬಿಸಿ ಬಿಸಿ ಆಲೂಗಡ್ಡೆ ಪೋಡಿಯನ್ನು ಸರ್ವ್ ಮಾಡಿ. 
  • ಆಲೂಗಡ್ಡೆ ಪೋಡಿ ಸ್ನ್ಯಾಕ್ಸ್ ಅಥವಾ ಊಟಕ್ಕೆ ಸೈಡ್ ಡಿಶ್ ನಂತೆಯೂ ಚೆನ್ನಾಗಿರುತ್ತದೆ. 

ಕಾಮೆಂಟ್‌ಗಳು