ಟೊಮೆಟೋ ದೋಸೆ / Tomato Dosa

Click here for English version.

ಇದು ನನ್ನ ಈ ವೀಕ್ಎಂಡ್ ಎಕ್ಸ್ ಪರಿಮೆಂಟ್. 
ಬೆಳಿಗ್ಗೆಯೇ ದೋಸೆಗೆ ಅಕ್ಕಿ ನೆನೆಹಾಕಲು ಮರೆತುಬಿಟ್ಟಿದ್ದೀರಾ? ಚಿಂತೆ ಬೇಡ, ಈ ದೋಸೆ ಮಾಡಿನೋಡಿ!


ಸರ್ವಿಂಗ್: ಇಬ್ಬರಿಗೆ ಆಗುತ್ತದೆ
ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು ( ಅಕ್ಕಿಯನ್ನು 3 - 4 ಘಂಟೆ ನೆನೆಸಿಕೊಳ್ಳಬೇಕು)

ಬೇಕಾಗುವ ಸಾಮಗ್ರಿಗಳು:
ಅಕ್ಕಿ - ಒಂದೂವರೆ ಲೋಟ
ಮೆಂತ್ಯ - 1 ಚಮಚ
ತೆಂಗಿನ ತುರಿ - ಮುಕ್ಕಾಲು ಲೋಟ 
ಟೊಮೆಟೋ ಹಣ್ಣು - 2
ಒಣಮೆಣಸು - 3
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
ಅಕ್ಕಿ ಮತ್ತು ಮೆಂತ್ಯವನ್ನು ರಾತ್ರಿಯೇ (ಅಥವಾ 3 - 4 ಘಂಟೆಕಾಲ) ನೆನೆಸಿಡಿ.
ಟೊಮೆಟೋ ಹಣ್ಣು, ಒಣಮೆಣಸು ಮತ್ತು ತೆಂಗಿನತುರಿಯನ್ನು ಮೊದಲು ಮಿಕ್ಸಿಯಲ್ಲಿ ರುಬ್ಬಿಕೊಂಡು ಅದಕ್ಕೆ ನೆನೆಸಿದ ಅಕ್ಕಿ ಮತ್ತು ಮೆಂತ್ಯವನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕಾದ ಕಾವಲಿಯಮೇಲೆ ತೆಳ್ಳಗೆ ದೋಸೆ ಎರೆಯಿರಿ.
ಬಿಸಿ ಇರುವಾಗಲೇ ಚಟ್ನಿಯೊಡನೆ ತಿನ್ನಿ.

ಕಾಮೆಂಟ್‌ಗಳು

  1. Full try madthivi Vanilohith avre.. namguu baree ondee ruchi tindu tindu bejaru hididu hogideee

    ಪ್ರತ್ಯುತ್ತರಅಳಿಸಿ
  2. ನನ್ನದು ಹೇೂಟೆಲ್ ಇದೆ ಇಡ್ಲಿ ಮಾಡಿದರೆ ತುಂಬಾ ಗಟ್ಟಿಯಾಗಿ ಇರುತ್ತೆ ಮೃದುವಾಗಿ ಬರಲು ಏನು ಮಾಡಬೇಕು ದಯವಿಟ್ಟು ತಿಳಿಸಿ ವಾಣಿಯವರೆ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಜಯರಾಮ್ ಅವರೆ,
      ನಿಮ್ಮದು ಹೋಟೆಲ್ ಇದೆಯೆಂದಮೇಲೆ ಇಡ್ಲಿ ಹಿಟ್ಟು ತಯಾರಿಸುವ ಹದ ನಿಮಗೇ ಚೆನ್ನಾಗಿ ತಿಳಿದಿದೆ ಎಂದುಕೊಳ್ಳುತ್ತೇನೆ. ನನಗೆ ತಿಳಿದಂತೆ ಇಡ್ಲಿ / ದೋಸೆ ಹಿಟ್ಟು ಹುದುಗು ಬರುವುದು ಬಹಳ ಮುಖ್ಯ.. ಇಲ್ಲದಿದ್ದರೆ ಇಡ್ಲಿ ಗಟ್ಟಿಯಾಗುತ್ತದೆ. ನೀವು ತಯಾರಿಸುವುದು ಯಾವ ಬಗೆಯ ಇಡ್ಲಿ ಎಂದು ತಿಳಿಸಿಲ್ಲ. ರವಾ ಇಡ್ಲಿ ಆದರೆ ನಾನು ೧/೨ ಕಪ್ ಉದ್ದಿನಬೇಳೆಗೆ ೧ ರಿಂದ ೧ ೧/೨ ಕಪ್ ನಷ್ಟು ರವಾ ಬಳಸುತ್ತೇನೆ. ಇಡ್ಲಿ ಮೆತ್ತಗಾಗಲು ಹಿಟ್ಟನ್ನು ರುಬ್ಬುವಾಗ ಬೇಕಿದ್ದರೆ ಸ್ವಲ್ಪ ಅನ್ನ ಸೇರಿಸಬಹುದು.

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)