ಬೆಂಡೆಕಾಯಿ ರಸಂ / Okra Rasam

Click here for English version.
 
ಬಹಳ ಸುಲಭವಾಗಿ, ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ರಸಂ ಇದು. ಆಫೀಸಿಗೆ ಹೋಗಿಬಂದು ಸುಸ್ತಾಗಿರುವಾಗ ಇಂಥ ಅಡಿಗೆಗಳಿದ್ದರೆ ಮಾಡಲು ಅನುಕೂಲ ಅಲ್ಲವೇ? ನನ್ನ ಅತ್ತಿಗೆಯ ಮನೆಗೆ ಹೋಗಿದ್ದಾಗ ಅವರು ಹತ್ತೇ ನಿಮಿಷದಲ್ಲಿ ರುಚಿಯಾದ ರಸಂ ತಯಾರಿಸಿದ್ದು ನೋಡಿ ನನಗೆ ಆಶ್ಚರ್ಯವೇ ಆಯಿತು! ಅವರು ತಯಾರಿಸಿದ ಸಾಮಗ್ರಿಗಳಲ್ಲಿ ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಿ ನಾನು ಕಂಡುಕೊಂಡ ವಿಧಾನ ಇಲ್ಲಿದೆ..


ತಯಾರಿಸಲು ಬೇಕಾಗುವ ಸಮಯ: 10 - 15 ನಿಮಿಷಗಳು 
ಸರ್ವಿಂಗ್ಸ್ - 4 ರಿಂದ 5 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಬೆಂಡೆಕಾಯಿ 7 - 8 
ಸಾರಿನ ಪುಡಿ 2 - 3 ಚಮಚ (ಖಾರಕ್ಕೆ ತಕ್ಕಂತೆ)
ಒಗ್ಗರಣೆಗೆ - ಎಣ್ಣೆ, ಕಡಲೆಬೇಳೆ, ಸಾಸಿವೆ, ಇಂಗು, ಚಿಟಿಕೆ ಅರಿಶಿನ, ಕರಿಬೇವು
ರುಚಿಗೆ ತಕ್ಕಷ್ಟು ಉಪ್ಪು
ಬೆಲ್ಲ ಅಥವಾ ಸಕ್ಕರೆ - 1 1/2 ಚಮಚ (ರುಚಿಗೆ ತಕ್ಕಷ್ಟು) 
ಹುಣಸೆ ರಸ
ಹೆಚ್ಚಿದ ಕೊತ್ತಂಬರಿ ಸೊಪ್ಪು - 2 ಚಮಚ 


ಮಾಡುವ ವಿಧಾನ:
ಬೆಂಡೆಕಾಯಿಯನ್ನು ತೊಳೆದು ಬಟ್ಟೆಯಿಂದ ನೀರು ಹೋಗುವಂತೆ ಒರೆಸಿಕೊಂಡು, ಮಧ್ಯಮ ಗಾತ್ರದ ಹೋಳುಗಳಾಗಿ ಹೆಚ್ಚಿಕೊಳ್ಳಿ.
ಹುಣಸೆಹಣ್ಣನ್ನು 15 - 20 ನಿಮಿಷ ನೀರಿನಲ್ಲಿ ನೆನೆಸಿಟ್ಟು, ರಸ ತೆಗೆದುಕೊಳ್ಳಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು 3 - 4 ಚಮಚ ಎಣ್ಣೆ ಕಾಯಿಸಿ ಕಡಲೆಬೇಳೆ, ಸಾಸಿವೆ, ಇಂಗು, ಅರಿಶಿನ, ಕರಿಬೇವು ಹಾಕಿ ಒಗ್ಗರಣೆ ಮಾಡಿ.
ನಂತರ ಹೆಚ್ಚಿಟ್ಟ ಬೆಂಡೆಕಾಯಿ ಹೋಳುಗಳನ್ನು ಸೇರಿಸಿ 2 - 3 ನಿಮಿಷ ಕೈಯಾಡಿಸಿ.
ಸಾರಿನ ಪುಡಿಯನ್ನು ನೀರಿನಲ್ಲಿ ಕದಡಿ, ಬೆಂಡೆಕಾಯಿ ಮಿಶ್ರಣಕ್ಕೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಮತ್ತು ಹುಣಸೆರಸ ಸೇರಿಸಿ ಕೈಯಾಡಿಸಿ.
ರಸಂ ಮಿಶ್ರಣಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು, 3 ಲೋಟದಷ್ಟು ನೀರು ಸೇರಿಸಿ ನಾಲೈದು ನಿಮಿಷ ಕುದಿಸಿ ಇಳಿಸಿ. ಬಿಸಿ ಅನ್ನದೊಡನೆ ಸರ್ವ್ ಮಾಡಿ. 


ಟಿಪ್ಸ್:
  • ರಸಂ ಮಿಶ್ರಣ ತುಂಬ ತೆಳ್ಳಗೆನಿಸಿದರೆ ಒಂದು ಚಮಚದಷ್ಟು ಅಕ್ಕಿಹಿಟ್ಟನ್ನು ನೀರಿನಲ್ಲಿ ಕದಡಿ, ರಸಂ ಗೆ ಸೇರಿಸಿ ಕುದಿಸಿ. ರಸಂ ಅಥವಾ ಯಾವುದೇ ಸಾಂಬಾರ್ ಗೆ ಖಾರ ಹೆಚ್ಚಾಗಿದ್ದರೂ ಅಕ್ಕಿಹಿಟ್ಟನ್ನು ಕದಡಿ ಸೇರಿಸಿದರೆ ಸರಿಹೋಗುತ್ತದೆ.

ಕಾಮೆಂಟ್‌ಗಳು

  1. nimma aduge nanage thumba istta agede. hege recipe world munduvariyali

    manasa

    ಪ್ರತ್ಯುತ್ತರಅಳಿಸಿ
  2. Thanks Manasa, Rashmi, Prabha and Chitra..
    @ Rashmi: will do it for sure :)
    Chitra, try it out n I'm eager to hear your feedback :)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)