Here are some recipes which I came across through the net, books, so on and few are my own experiments..

Thursday, 12 December 2013

ಫ್ರೂಟ್ ಯೋಗರ್ಟ್ | Fruit Yogurt

Click here for English version.

ನನ್ನ ಗಡಿಬಿಡಿಯ ದಿನಚರಿಯಲ್ಲಿ ಇತ್ತೀಚಿಗೆ ಅಡಿಗೆ ಪೋಸ್ಟ್ ಮಾಡಲು ಸಮಯ ಸಿಗುವುದೇ ಕಷ್ಟವಾಗಿಬಿಟ್ಟಿದೆ. ಯಾವುದಾದರೂ ಹೊಸ ತಿಂಡಿ ಮಾಡಿ, ಅದರ ಫೊಟೋ ಕ್ಲಿಕ್ಕಿಸಬೇಕೆನ್ನುವಷ್ಟರಲ್ಲಿ ಮಗಳ ಗಲಾಟೆ ಶುರುವಾಗಿರುತ್ತದೆ! ಹಾಗೂ ಹೀಗೂ ಸಿಕ್ಕ ಸಮಯದಲ್ಲೇ ತೆಗೆದಿಟ್ಟ ಅನೇಕ ಅಡಿಗೆ ಫೊಟೋಗಳು ನಾನು ಪೋಸ್ಟ್ ಮಾಡುವುದನ್ನೇ ಕಾಯುತ್ತ ಕುಳಿತಿವೆ. ಈ ರೆಸಿಪಿಯ ಫೊಟೋ ಕೂಡ ಅಷ್ಟೇ, ಕಡಿಮೆ ಎಂದರೂ ಮೂರು ತಿಂಗಳು ಹಳೆಯದು! 
ಫ್ರೂಟ್ ಯೋಗರ್ಟ್ ಎಂದರೆ ಗಟ್ಟಿ ಮೊಸರಿನ ಜತೆ ಹಣ್ಣುಗಳನ್ನು ರುಬ್ಬಿ ಹಾಕಿ ತಯಾರಿಸುವ ಒಂದು ಸಿಹಿ ತಿಂಡಿ. ಭಾರತೀಯರ ಪ್ರಕಾರ ಇದನ್ನು 'ಹಣ್ಣುಗಳನ್ನು ಹಾಕಿ ಮಾಡುವ ಶ್ರೀಖಂಡ' ಎಂದು ವ್ಯಾಖ್ಯಾನಿಸಬಹುದು. ಸುಪರ್ ಮಾರ್ಕೆಟ್ ಗಳಲ್ಲಿ ಸಿಗುವ ಬೇರೆ ಬೇರೆ ಹಣ್ಣುಗಳನ್ನು ಹಾಕಿ ತಯಾರಿಸಿದ ಸ್ಟ್ರಾಬೆರಿ ಯೋಗರ್ಟ್, ಮ್ಯಾಂಗೋ ಯೋಗರ್ಟ್, ಮಿಕ್ಸೆಡ್ ಬೆರ್ರಿ ಯೋಗರ್ಟ್, ಇವರಲ್ಲಿ ಒಬ್ಬರಾದರೂ ನಮ್ಮ ಮನೆಯ ಫ್ರಿಜ್ ನ ಖಾಯಂ ಸದಸ್ಯರು! ಇವನ್ನೆಲ್ಲ ಸವಿದ ನಂತರ ನಾನು ಟ್ರೈ ಮಾಡಿ ಕಲಿತ ಸ್ಟ್ರಾಬೆರಿ ಯೋಗರ್ಟ್ ರೆಸಿಪಿ ಇಲ್ಲಿದೆ. ಮೊಸರು ತಿನ್ನಲು ಇಷ್ಟಪಡದ ಮಕ್ಕಳಿಗೆ ಹಣ್ಣು ಸೇರಿಸಿ ತಯಾರಿಸುವ ಈ ಫ್ರೂಟ್ ಯೋಗರ್ಟ್ ಒಳ್ಳೆಯ ಸ್ನ್ಯಾಕ್ಸ್.


ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು   
ತಂಪಾಗಲು ಬೇಕಾಗುವ ಸಮಯ: 1 - 2 ಘಂಟೆ 
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ 

ಬೇಕಾಗುವ ಸಾಮಗ್ರಿಗಳು: 
  • ಸ್ಟ್ರಾಬೆರಿ ಹಣ್ಣುಗಳು - 4 ರಿಂದ 5
  • ಸಕ್ಕರೆ - 7 ಟೀ ಚಮಚ ಅಥವಾ ಸಿಹಿಗೆ ತಕ್ಕಷ್ಟು 
  • ಬಟ್ಟೆಯಲ್ಲಿ ನೇತುಹಾಕಿದ ಗಟ್ಟಿ ಮೊಸರು - 1 ಕಪ್ 
  • ವೆನಿಲ್ಲಾ ಎಸೆನ್ಸ್ (ಬೇಕಿದ್ದರೆ) - ಒಂದೆರಡು ಹನಿ 


ತಯಾರಿಸುವ ವಿಧಾನ:
  • ಸ್ಟ್ರಾಬೆರಿ ಹಣ್ಣುಗಳನ್ನು ಸಣ್ಣ ಹೋಳುಗಳಾಗಿ ಹೆಚ್ಚಿಕೊಳ್ಳಿ. 
  • ಮೊಸರು ಮತ್ತು ಸಕ್ಕರೆಯನ್ನು ಮಿಕ್ಸಿಯಲ್ಲಿ 1 ನಿಮಿಷ ತಿರುವಿ, ನುಣ್ಣಗಿನ ಪೇಸ್ಟ್ ತಯಾರಿಸಿಕೊಳ್ಳಿ. 
  • ಹೆಚ್ಚಿದ ಸ್ಟ್ರಾಬೆರಿಯನ್ನು ಎರಡು ಚಮಚದಷ್ಟು ತೆಗೆದಿಟ್ಟು ಉಳಿದೆಲ್ಲವನ್ನೂ ಮೊಸರು - ಸಕ್ಕರೆ ಮಿಶ್ರಣಕ್ಕೆ ಸೇರಿಸಿ ಅರ್ಧ ನಿಮಿಷ ತಿರುವಿ. 
  • ಉಳಿದ ಸ್ಟ್ರಾಬೆರಿ ಹೋಳುಗಳನ್ನು ಕೊನೆಯಲ್ಲಿ ಸೇರಿಸಿ. ಬೇಕಿದ್ದರೆ ಒಂದೆರಡು ಹನಿ ವೆನಿಲ್ಲಾ ಎಸೆನ್ಸ್ ಸೇರಿಸಿ ಮಿಕ್ಸಿಯನ್ನು 4 - 5 ಸೆಕೆಂಡ್ ಕಾಲ ಹಾಕಿ ಆಫ್ ಮಾಡಿ.
  • ತಯಾರಾದ ಸ್ಟ್ರಾಬೆರಿ ಯೋಗರ್ಟ್ ನ್ನು ಫ್ರಿಜ್ ನಲ್ಲಿ 2 ಘಂಟೆ ಸೆಟ್ ಆಗಲು ಬಿಡಿ. 
  • ಹಣ್ಣಿನ ಸ್ವಾದದ ತಂಪಾದ ಮೊಸರನ್ನು ಸರ್ವಿಂಗ್ ಬೌಲ್ ಗೆ ಹಾಕಿ ಸವಿಯಿರಿ!


ಟಿಪ್ಸ್:
  • ತಯಾರಿಸಿದ 1 - 2 ದಿನದೊಳಗೆ ಈ ಯೋಗರ್ಟ್ ನ್ನು ಖಾಲಿ ಮಾಡಿ. ನಾವು ಇಲ್ಲಿ ಯಾವುದೇ ಪ್ರಿಸರ್ವೇಟಿವ್ಸ್ ಸೇರಿಸದ ಕಾರಣ ಫ್ರೂಟ್ ಯೋಗರ್ಟ್ ಬೇಗ ತಾಜಾತನ ಕಳೆದುಕೊಳ್ಳುತ್ತದೆ.

1 comment:

Hi, Thanks for dropping in. I will be happy to hear your feedback :)

Related Posts Plugin for WordPress, Blogger...