ಕ್ಯಾರೆಟ್ ಬರ್ಫಿ

Click here for English version.


'ಬರ್ಫಿ' - ಇದು ಭಾರತದಲ್ಲಿ ಸಾಮಾನ್ಯವಾಗಿ ತಯಾರಿಸುವ ಸಿಹಿ ತಿನಿಸು. ಬಗೆಬಗೆಯ ಸಾಮಗ್ರಿಗಳನ್ನು ಬಳಸಿ ವಿಧವಿಧವಾದ ಬರ್ಫಿಗಳನ್ನು ತಯಾರಿಸಬಹುದು. ಹಾಲು, ತುಪ್ಪ, ಸಕ್ಕರೆ ಇತ್ಯಾದಿ ಸೇರಿಸಿರುವುದರಿಂದ ಬರ್ಫಿ ತಿನ್ನಲು ಬಹಳ ರುಚಿಯಾಗಿರುತ್ತದೆ. ಕ್ಯಾರೆಟ್ ಬಳಸಿ ಬರ್ಫಿ ತಯಾರಿಸುವ ವಿಧಾನ ಇಲ್ಲಿದೆ. 

  • ತಯಾರಿಸಲು ಬೇಕಾಗುವ ಸಮಯ: 35 - 40 ನಿಮಿಷಗಳು 
  • ಡಿಫಿಕಲ್ಟಿ ಲೆವೆಲ್: ಕಷ್ಟಕರ 
  • ಸರ್ವಿಂಗ್ಸ್: ಈ ಅಳತೆಯಿಂದ 20 - 25 ಬರ್ಫಿಗಳನ್ನು ತಯಾರಿಸಬಹುದು 

ತಯಾರಿಸಲು ಬೇಕಾಗುವ ಸಾಮಗ್ರಿಗಳು:

  • ತುರಿದ ಕ್ಯಾರೆಟ್ - 1 ಕಪ್ 
  • ತೆಂಗಿನತುರಿ - 1 ಕಪ್ 
  • ಸೂಜಿ ರವಾ - 1/2 ಕಪ್ 
  • ಸಕ್ಕರೆ - 2 1/4 ಕಪ್ 
  • ತುಪ್ಪ - 2/3 ಕಪ್ 
  • ಫ್ರೆಶ್ / ವಿಪ್ಪಿಂಗ್ ಕ್ರೀಮ್ - 1 ಕಪ್ 

ತಯಾರಿಸುವ ವಿಧಾನ:

  • ತೆಂಗಿನತುರಿಯನ್ನು ಮಿಕ್ಸಿಯಲ್ಲಿ 3 - 4 ಸೆಕೆಂಡ್ ಕಾಲ ತಿರುವಿ ತೆಗೆಯಿರಿ. ಹೀಗೆ ಮಾಡುವುದರಿಂದ ಒಂದೇ ಅಳತೆಯ ಚಿಕ್ಕ ತರಿಯಾಗುತ್ತದೆ. 
  • ಒಂದು ದಪ್ಪ ತಳದ ಬಾಣಲೆಯಲ್ಲಿ 2/3 ಕಪ್ ನಷ್ಟು ತುಪ್ಪ ವನ್ನು ಸಣ್ಣ / ಮೀಡಿಯಮ್ ಉರಿಯಲ್ಲಿ ಬಿಸಿಗಿಡಿ. 
  • ತುಪ್ಪ ಕರಗುತ್ತಿದ್ದಂತೆ ಇದಕ್ಕೆ 1/2 ಕಪ್ ನಷ್ಟು ರವೆ ಸೇರಿಸಿ 2 ನಿಮಿಷ ಹುರಿಯಿರಿ. 
  • ನಂತರ ಇದಕ್ಕೆ ಕ್ಯಾರೆಟ್ ತುರಿ ಸೇರಿಸಿ ಹಸಿ ವಾಸನೆ ಹೋಗುವಂತೆ 2 ನಿಮಿಷ ಹುರಿಯಿರಿ. 
  • ನಂತರ ಇದಕ್ಕೆ ಸಕ್ಕರೆ ಹಾಗೂ ಕ್ರೀಮ್ ಸೇರಿಸಿ ಮೀಡಿಯಂ ಉರಿಯಲ್ಲಿ ಬಿಡದೆ ಕೈಯಾಡಿಸುತ್ತಿರಿ. 
  • ಬರ್ಫಿ ಮಿಶ್ರಣ ನಿಧಾನವಾಗಿ ದಪ್ಪವಾಗುತ್ತ ಸುಮಾರು 35 ನಿಮಿಷ ಆಗುವಷ್ಟರಲ್ಲಿ ತಳ ಬಿಡತೊಡಗುತ್ತದೆ. ಮಿಶ್ರಣದ ಸ್ವಲ್ಪ ನೊರೆನೊರೆಯಾಗಿ ಬೆಳ್ಳಗೆ ಕಾಣುತ್ತದೆ. 
  • ಈ ಹಂತದಲ್ಲಿ ಪರಿಮಳಕ್ಕೆ ಬೇಕಿದ್ದರೆ ಏಲಕ್ಕಿ, ಲವಂಗದ ಪುಡಿ 1/4 ಟೀ ಚಮಚದಷ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ತುಪ್ಪ ಸವರಿದ ಪ್ಲೇಟ್ ನಲ್ಲಿ ಹರವಿ. 
  • ಮಿಶ್ರಣ ಸ್ವಲ್ಪ ಗಟ್ಟಿಯಾದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.    

ಟಿಪ್ಸ್: 

  • ಫ್ರೆಶ್ ತೆಂಗಿನತುರಿ ಇಲ್ಲದಿದ್ದರೆ ಬದಲಾಗಿ ಡೆಸಿಕೇಟೆಡ್ ಕೊಕೋನಟ್ ಬಳಸಬಹುದು.       

ಕಾಮೆಂಟ್‌ಗಳು