ರಾಗಿ ಬಿಸ್ಕಿಟ್

Click here for English version. 


ಪ್ರೊಟೀನ್, ಕಬ್ಬಿಣ, ಕ್ಯಾಲ್ಶಿಯಂ ಇತ್ಯಾದಿಗಳ ಆಗರವಾಗಿರುವ ರಾಗಿಯನ್ನು ನಮ್ಮ ಮನೆಯಲ್ಲಿ ದಿನನಿತ್ಯದ ಅಡುಗೆ ಪದಾರ್ಥಗಳಲ್ಲಿ ಒಂದಿಲ್ಲೊಂದು ಬಗೆಯಲ್ಲಿ ಬಳಸುವುದು ಬಹಳ ಒಳ್ಳೆಯದು. ದೋಸೆ, ರೊಟ್ಟಿ, ಇಡ್ಲಿ, ರಾಗಿಮುದ್ದೆ, ಮಾಲ್ಟ್ ಹೀಗೆ ನಾನಾ ಬಗೆಯಲ್ಲಿ ರಾಗಿಯನ್ನು ನಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಬಹುದು. 

ರಾಗಿ ಹಿಟ್ಟನ್ನು ಬಳಸಿ ತಯಾರಿಸುವ ಬಿಸ್ಕಿಟ್ ರೆಸಿಪಿ ಇಲ್ಲಿದೆ. ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ಬಿಸ್ಕಿಟ್ ಇದು. ಮಕ್ಕಳ ಲಂಚ್ ಬಾಕ್ಸ್ ಗೆ ಸ್ನ್ಯಾಕ್ಸ್ ನಂತೆ ಹಾಕಿ ಕೊಡುವುದಕ್ಕೂ ಚೆನ್ನಾಗಿರುತ್ತದೆ. 

  • ತಯಾರಿಸಲು ಬೇಕಾಗುವ ಸಮಯ: 35 ನಿಮಿಷಗಳು 
  • ರೆಸ್ಟಿಂಗ್ ಟೈಮ್: 30 ನಿಮಿಷಗಳು 
  • ಡಿಫಿಕಲ್ಟಿ ಲೆವೆಲ್: ಮೀಡಿಯಮ್ 
  • ಸರ್ವಿಂಗ್ಸ್: ಈ ಅಳತೆಯಿಂದ 20 - 22 ಬಿಸ್ಕಿಟ್ ಗಳನ್ನು ತಯಾರಿಸಬಹುದು 

ತಯಾರಿಸಲು ಬೇಕಾಗುವ ಸಾಮಗ್ರಿಗಳು:

  • ರಾಗಿಹಿಟ್ಟು - 1/2 ಕಪ್ 
  • ಗೋಧಿ ಹಿಟ್ಟು - 3/4 ಕಪ್ 
  • ಬೆಣ್ಣೆ (ರೂಮ್ ಟೆಂಪರೇಚರ್ ನಲ್ಲಿ) - 100 ಗ್ರಾಂ 
  • ಸಕ್ಕರೆ ಪುಡಿ / ಐಸಿಂಗ್ ಶುಗರ್ - 1/3 ಕಪ್ (ಟಿಪ್ಸ್ ನೋಡಿ) 
  • ಬೇಕಿಂಗ್ ಪೌಡರ್ - ದೊಡ್ಡ ಚಿಟಿಕೆಯಷ್ಟು 
  • ಏಲಕ್ಕಿ ಪುಡಿ - 1/2 ಟೀ ಚಮಚ 

ತಯಾರಿಸುವ ವಿಧಾನ:

  • ರಾಗಿ ಹಿಟ್ಟು, ಗೋಧಿ ಹಿಟ್ಟು, ಬೇಕಿಂಗ್ ಪೌಡರ್, ಏಲಕ್ಕಿ ಪುಡಿ ಇಷ್ಟನ್ನೂ ಒಂದು ಬೌಲ್ ನಲ್ಲಿ ಮಿಕ್ಸ್ ಮಾಡಿಕೊಳ್ಳಿ. 
  • ಬೆಣ್ಣೆ ಹಾಗೂ ಸಕ್ಕರೆಯನ್ನು ಒಂದು ಬೌಲ್ ನಲ್ಲಿ ಹಾಕಿಕೊಂಡು ಚೆನ್ನಾಗಿ ಕ್ರೀಮ್ ಆಗುವಂತೆ ಬೀಟ್ ಮಾಡಿಕೊಳ್ಳಿ. 
  • ಇದಕ್ಕೆ ಹಿಟ್ಟಿನ ಮಿಶ್ರಣವನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ ನಿಧಾನವಾಗಿ ಮಿಕ್ಸ್ ಮಾಡಿ. 
  • ಮಿಶ್ರಣ ತುಂಬಾ ಮೆತ್ತಗಿದ್ದರೆ ಇನ್ನೂ ಅರ್ಧ ಕಪ್ ನವರೆಗೆ ಗೋಧಿಹಿಟ್ಟು ಸೇರಿಸಬಹುದು. 
  • ತಯಾರಾದ ಹಿಟ್ಟಿನಿಂದ ಬೇಕಾದ ಆಕಾರಕ್ಕೆ ಉಂಡೆಗಳನ್ನು ಮಾಡಿ, ಫ್ರಿಜ್ ನಲ್ಲಿ 30 ನಿಮಿಷ ಇಡಿ. 
  • ಓವನ್ ನ್ನು 165°C ಗೆ ಪ್ರಿಹೀಟ್  ಮಾಡಿದ ಓವನ್ ನಲ್ಲಿ ಈ ಬಿಸ್ಕಿಟ್ ಗಳನ್ನು 20 - 22 ನಿಮಿಷ ಬೇಕ್ ಮಾಡಿ ತೆಗೆಯಿರಿ. 
  • ಬಿಸ್ಕಿಟ್ ತಣ್ಣಗಾದ ನಂತರ ಗಾಳಿಯಾಡದ ಕಂಟೇನರ್ ನಲ್ಲಿ ಸ್ಟೋರ್ ಮಾಡಿ. 

ಟಿಪ್ಸ್:

  • ಗೋಧಿ ಹಿಟ್ಟಿನ ಜೊತೆಗೆ ಸ್ವಲ್ಪ ಭಾಗ ಬಾದಾಮಿ ಪುಡಿಯನ್ನೂ ಮಿಕ್ಸ್ ಮಾಡಿ ಬಳಸಬಹುದು. 
  • ಸಿಹಿ ಜಾಸ್ತಿ ಬೇಕಿದ್ದರೆ ಅರ್ಧ ಅಥವಾ ಮುಕ್ಕಾಲು ಕಪ್ ನಷ್ಟು ಸಕ್ಕರೆ ಪುಡಿ ಬಳಸಬಹುದು 


ಕಾಮೆಂಟ್‌ಗಳು