Akki Rotti / ಅಕ್ಕಿ ರೊಟ್ಟಿ

Click here for English version.

ಅತ್ತೆ ಸ್ಪೆಷಲ್ ! ನಾನು ಅತ್ತೆಯಿಂದ ಕಲಿತ ಈ ರೊಟ್ಟಿ ನಮ್ಮ ಬಳಗದಲ್ಲೆಲ್ಲ ಈಗ ಜನಪ್ರಿಯ.. ನಾನು ಇಲ್ಲಿ ಆಲೂಗಡ್ಡೆ, ಕ್ಯಾರೆಟ್ ಇತ್ಯಾದಿ ತರಕಾರಿಗಳನ್ನು ಬಳಸಿದ್ದೇನೆ. ಬರೀ ಸೌತೆಕಾಯಿ ಮತ್ತು ಈರುಳ್ಳಿ ಬಳಸಿಯೂ ಈ ರೊಟ್ಟಿ ತಯಾರಿಸಬಹುದು.


ತಯಾರಿಸಲು ಬೇಕಾಗುವ ಸಮಯ: 1 1/4 ಘಂಟೆ
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಅಕ್ಕಿಹಿಟ್ಟು - 2 ಲೋಟ
ಮಧ್ಯಮಗಾತ್ರದ ಸೌತೆಕಾಯಿ - 2
ಆಲೂಗಡ್ಡೆ - 1 
ಕ್ಯಾರೆಟ್ - 1 
ಮಧ್ಯಮಗಾತ್ರದ ಈರುಳ್ಳಿ - 2
ಹಸಿಮೆಣಸು - 4 ರಿಂದ 5 
ಹೆಚ್ಚಿದ ಕರಿಬೇವು - ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ ಅಥವಾ ಬೆಣ್ಣೆ - ಸ್ವಲ್ಪ

ತಯಾರಿಸುವ ವಿಧಾನ:
ಮೊದಲು ತರಕಾರಿಗಳನ್ನು ತುರಿದುಕೊಳ್ಳಿ. ಹಸಿಮೆಣಸು, ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.
ತುರಿದ ತರಕಾರಿ, ಹೆಚ್ಚಿದ  ಹಸಿಮೆಣಸು, ಈರುಳ್ಳಿ ಮತ್ತು ಕರಿಬೇವನ್ನು ಉಪ್ಪು ಸೇರಿಸಿ ಕಲಸಿಕೊಳ್ಳಿ. ಇದಕ್ಕೆ ಅಕ್ಕಿಹಿಟ್ಟು ಸೇರಿಸಿ ಕಲಸಿಕೊಳ್ಳಿ. ಹಿಟ್ಟು ಸ್ವಲ್ಪ ತೆಳ್ಳಗೆ ಇರಲಿ. ಬೇಕಿದ್ದರೆ 1 ಸೌಟು ಮೊಸರು ಸೇರಿಸಿ ಹಿಟ್ಟನ್ನು ತೆಳ್ಳಗೆ ಮಾಡಿಕೊಳ್ಳಿ.
ನೀರಿನಂಶ ತುಂಬಾ ಕಡಿಮೆ ಎನ್ನಿಸಿದರೆ ಇನ್ನೂ ಸ್ವಲ್ಪ ಸೌತೆ ತುರಿ ಸೇರಿಸಿ ಕಲಸಿ.
15 - 20 ನಿಮಿಷದ ನಂತರ ಕಾದ ಕಾವಲಿಯಮೇಲೆ ರೊಟ್ಟಿಗಳನ್ನು ತಟ್ಟಿ, ಎಣ್ಣೆ ಅಥವಾ ಬೆಣ್ಣೆ ಸೇರಿಸಿ ಬೇಯಿಸಿ.
ಮಧ್ಯಮ ಉರಿಯಲ್ಲಿ ಸ್ವಲ್ಪ ಹೆಚ್ಚು ಸಮಯ ಬೇಯಿಸಿದರೆ ಈ ರೊಟ್ಟಿ ತಿನ್ನಲು ಹೆಚ್ಚು ರುಚಿ.
ರೊಟ್ಟಿ ಬಿಸಿ ಇರುವಾಗಲೇ ಬೆಣ್ಣೆ ಅಥವಾ ಬೆಲ್ಲ ಹಾಕಿಕೊಂಡು ತಿನ್ನಿ.

ಟಿಪ್ಸ್:
  • ರೊಟ್ಟಿ ತಟ್ಟಲು ಬಾಳೆ ಎಲೆ ಬಳಸಿದರೆ ಉತ್ತಮ. ಬಾಳೆ ಎಲೆ ಈ ರೊಟ್ಟಿಗೆ ವಿಶೇಷ ಪರಿಮಳ ಕೊಡುವುದಲ್ಲದೆ, ರೊಟ್ಟಿಗಳನ್ನು ತೆಳ್ಳಗೆ ಮಾಡಬಹುದು.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Hi, Thanks for dropping in. I will be happy to hear your feedback :)