ಅವರೆಕಾಳಿನ ಸಮೋಸ / Avarekaalu (hyacinth beans) Samosa

Click here to read in English..

ಸಾಮಗ್ರಿ:
ಅವರೇಕಾಳು  - 1 /2 ಕೆಜಿ
ಚಕ್ಕೆ, ಲವಂಗ, ಮರಾಠಿ ಮೊಗ್ಗು, ಧನಿಯಾ - 2 ಟೀ ಚಮಚ
ಕೊತ್ತಂಬರಿ ಸೊಪ್ಪು - 1 ಕಟ್ಟು
ಕರಿಮೆಣಸು - ಸ್ವಲ್ಪ
ಹಸಿಶುಂಠಿ - 1 /2 ಇಂಚು 
ಹಸಿಮೆಣಸಿನಕಾಯಿ - 10 
ಮೆಂತ್ಯ ಸೊಪ್ಪು - 2 ಕಟ್ಟು
ಮೈದಾಹಿಟ್ಟು - 1 /2 ಕೆಜಿ
ಬೆಣ್ಣೆ - ಸ್ವಲ್ಪ
ಅಡಿಗೆ ಸೋಡಾ - ಚಿಟಿಕೆ 
ಉಪ್ಪು - ರುಚಿಗೆ ತಕ್ಕಷ್ಟು  
ಕರಿಯಲು ಎಣ್ಣೆ

ವಿಧಾನ
ಅವರೇಬೀಜವನ್ನು ನೀರಿನಲ್ಲಿ ಹಿಸುಕಿ ಬೇಳೆ ಮಾಡಿಕೊಳ್ಳಿ. ಚಕ್ಕೆ, ಲವಂಗ, ಮರಾಠಿ ಮೊಗ್ಗು, ಧನಿಯಾ, ಮೆಣಸಿನಕಾಳು ಎಲ್ಲವನ್ನೂ ಹುರಿದು ಪುಡಿಮಾಡಿಕೊಳ್ಳಿ. ಹಸಿಮೆಣಸಿನಕಾಯಿ, ಹಸಿಶುಂಠಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಮೆಂತೆಸೊಪ್ಪು, ಕೊತ್ತಂಬರಿ ಸೊಪ್ಪು ಸಣ್ಣದಾಗಿ ಹೆಚ್ಚಿಕೊಳ್ಳಿ. ಮೈದಾಹಿಟ್ಟಿಗೆ ಬೆಣ್ಣೆ, ಉಪ್ಪು, ಸೋಡಾ ಬೆರೆಸಿ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಸ್ವಲ್ಪ ಎಣ್ಣೆಯಲ್ಲಿ ಅವರೆಕಾಳನ್ನು ಹಾಕಿ ಸ್ವಲ್ಪ ನೀರು ಚಿಮುಕಿಸಿ ಬೇಯಲು ಇಡಿ. ಅದು ಅರ್ಧ ಬೆಂದಮೇಲೆ ಪುಡಿಮಾಡಿಕೊಂಡ ಮಸಾಲೆ, ರುಬ್ಬಿಕೊಂಡ ಹಸಿಶುಂಠಿ, ಹಸಿಮೆಣಸಿನಕಾಯಿ, ಹೆಚ್ಚಿಟ್ಟುಕೊಂಡ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಪುನಃ ಬೇಯಿಸಿ. 
ಕಲಸಿಟ್ಟ ಮೈದಾಹಿಟ್ಟಿನಿಂದ ಅಂಗೈ ಅಗಲದ ಚಪಾತಿಗಳನ್ನು ಲಟ್ಟಿಸಿಕೊಂಡು ಅದರಲ್ಲಿ 2 ಟೀ ಚಮಚದಷ್ಟು ತಯಾರಿಸಿಟ್ಟ ಮಿಶ್ರಣವನ್ನಿರಿಸಿ ಅಡ್ಡಕ್ಕೆ ಮಡಿಚಿ. ಅದನ್ನು ಪುನಃ ಮಡಿಚಿ ತ್ರಿಕೋನಾಕಾರಕ್ಕೆ ತಂದು, ಕಾದ ಎಣ್ಣೆಯಲ್ಲಿ ಕರಿಯಿರಿ. ಬಿಸಿಯಾಗಿದ್ದಾಗಲೇ ತಿನ್ನಿ. 
ಇನ್ನೊಂದು ವಿಧದಲ್ಲಿಯೂ ಸಮೋಸಕ್ಕೆ ಚಪಾತಿಗಳನ್ನು ಲಟ್ಟಿಸಬಹುದು: ಹಿಟ್ಟಿನಿಂದ ಸ್ವಲ್ಪ ದೊಡ್ಡ ಉಂಡೆ ಮಾಡಿ, ಹದವಾದ ಚಪಾತಿಯಂತೆ ಲಟ್ಟಿಸಿಕೊಂಡು, ಚಪಾತಿಯನ್ನು ಸರಿಯಾಗಿ ಎರಡು ಭಾಗ ಮಾಡಿ. ಎರಡೂ ಭಾಗಗಳನ್ನು ಸುರುಳಿಯಾಗಿ ತ್ರಿಕೋನಾಕಾರಕ್ಕೆ ಮಡಿಚಿ (ಕಳ್ಳೆಕಾಯಿ ಪೊಟ್ಟಣದಂತೆ) ಅದರೊಳಗೆ ಪಲ್ಯವನ್ನಿಟ್ಟು ಹೊರಬರದಂತೆ ಸೀಲ್ ಮಾಡಿ, ಎಣ್ಣೆಯಲ್ಲಿ ಕರಿಯಿರಿ.   

ಕಾಮೆಂಟ್‌ಗಳು