ಇನ್ ಸ್ಟಂಟ್ ರವಾ ದೋಸೆ / Instant Rava Dosa

Click Here for English Version.

ಅರ್ಜೆಂಟಾಗಿ ದೋಸೆ ಮಾಡಬೇಕೆಂದಾಗ ಇದನ್ನು ಟ್ರೈ ಮಾಡಬಹುದು. ಬಹಳ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ದೋಸೆ ತಿನ್ನಲೂ ಬಹಳ ರುಚಿಕರ. ಇದನ್ನು ನಾನು ವಾಹ್ ಚೆಫ್ ರವರ ವೆಬ್ ಸೈಟ್ ನಿಂದ ಕಲಿತದ್ದು..ವೀಡಿಯೊ ರೆಸಿಪಿಗಾಗಿ ಇಲ್ಲಿ  ಕ್ಲಿಕ್ ಮಾಡಿ. 
 
 

ಸಾಮಗ್ರಿ
1 ಕಪ್ ಸೂಜಿ ರವಾ
1 ಕಪ್ ಅಕ್ಕಿಹಿಟ್ಟು
1 / 2 ಕಪ್ ಮೈದಾಹಿಟ್ಟು
ಉಪ್ಪು
ಮೆಣಸಿನಕಾಳಿನ ಪುಡಿ (ತರಿತರಿಯಾಗಿರಲಿ) 
ಇಂಗು - ಸ್ವಲ್ಪ
ಜಜ್ಜಿಕೊಂಡ ಶುಂಠಿ - 1 / 2 ಟೀ ಸ್ಪೂನ್
ಸಣ್ಣಗೆ ಹೆಚ್ಚಿಕೊಂಡ ಹಸಿಮೆಣಸು - 1 ಟೀ ಸ್ಪೂನ್
ಜೀರಿಗೆ - 1 / 2 ಟೀ ಸ್ಪೂನ್

ವಿಧಾನ 
ಎಲ್ಲ ಸಾಮಗ್ರಿಗಳನ್ನೂ ಮಿಕ್ಸ್ ಮಾಡಿಕೊಂಡು, ನೀರು ಸೇರಿಸಿ ತೆಳ್ಳಗಿನ ಹಿಟ್ಟನ್ನು ತಯಾರಿಸಿಕೊಂಡು, ಕಾದ ಕಾವಲಿಯಮೇಲೆ ನೀರು ದೋಸೆಯಂತೆ ತೆಳ್ಳಗಿನ ದೋಸೆಗಳನ್ನು ಮಾಡಿ. ಹಿಟ್ಟನ್ನು ಹೆಚ್ಚು ಸಮಯ ಹಾಗೇ ಇಟ್ಟರೆ ದೋಸೆ ಮೆತ್ತಗಾಗಿಬಿಡುತ್ತದೆ.
ಇದನ್ನು ಚಟ್ನಿಯೊಡನೆ ಸರ್ವ್ ಮಾಡಿ.

ಕಾಮೆಂಟ್‌ಗಳು