ಚಿರೋಟಿ / Chiroti

Click here to read in English.

ಸಾಮಗ್ರಿ
ಮೈದಾಹಿಟ್ಟು - 2 ಕಪ್
ತುಪ್ಪ - ಸುಮಾರು ಕಾಲು ಕಪ್ ನಷ್ಟು
ಸಕ್ಕರೆಪುಡಿ
ಅಕ್ಕಿಹಿಟ್ಟು - 2 ಟೀ ಸ್ಪೂನ್
ನೀರು - ಸ್ವಲ್ಪ  
ಕರಿಯಲು ಎಣ್ಣೆ

ವಿಧಾನ
ಮೈದಾಹಿಟ್ಟಿಗೆ 3 - 4 ಚಮಚ ತುಪ್ಪ, ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. 
ಅಕ್ಕಿಹಿಟ್ಟಿಗೆ ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ತಿಕ್ಕಿ ಬೆಣ್ಣೆಯಂತೆ ಮಾಡಿ. 
ಕಲಸಿದ ಮೈದಾಹಿಟ್ಟಿನಿಂದ ಉಂಡೆಗಳನ್ನು ಮಾಡಿಕೊಂಡು ಚಪಾತಿಯಂತೆ ಲಟ್ಟಿಸಿಕೊಳ್ಳಿ. 
ಲಟ್ಟಿಸಿದ ಚಪಾತಿಯಮೇಲೆ ಅಕ್ಕಿಹಿಟ್ಟು, ತುಪ್ಪದ ಮಿಶ್ರಣವನ್ನು ತೆಳ್ಳಗೆ ಸವರಿ, ಅದರಮೇಲೆ ಇನ್ನೊಂದು ಚಪಾತಿಯನ್ನಿಡಿ. ಅದರಮೇಲೆ ಪುನಃ ಮಿಶ್ರಣ ಸವರಿ, ಇನ್ನೊಂದು ಚಪಾತಿಯನ್ನಿಡಿ. ಇದೆ ರೀತಿ 3 - 4 ಚಪಾತಿಗಳನ್ನು ಒಂದರಮೇಲೊಂದು ಇಟ್ಟು, ಅಕ್ಕಿಹಿಟ್ಟಿನ ಮಿಶ್ರಣ ಸವರಿ, ಎಲ್ಲವನ್ನೂ ಸೇರಿಸಿ ಸುರುಳಿಯಾಗಿ ಮಡಿಚಿ. 
ಸುರುಳಿಯನ್ನು ಒಂದೇ ಅಳತೆಯ ಚಿಕ್ಕ ಭಾಗಗಳಾಗಿ ಕತ್ತರಿಸಿಕೊಳ್ಳಿ. ಕತ್ತರಿಸಿಕೊಂಡ ಹಿಟ್ಟಿನ ಭಾಗಗಳನ್ನು ಹಾಗೇ ತಟ್ಟಿ, ಪೂರಿಯಂತೆ ಲಟ್ಟಿಸಿ, ಹದವಾದ ಉರಿಯಲ್ಲಿ ಹೊಂಬಣ್ಣಕ್ಕೆ ಕರಿಯಿರಿ. ಇವನ್ನು ಸಕ್ಕರೆ ಪುಡಿಯಲ್ಲಿ ಹೊರಳಿಸಿ ತೆಗೆದು, ಪ್ಲೇಟ್ ನಲ್ಲಿಟ್ಟು ತಿನ್ನಲು ಕೊಡಿ.

ಕಾಮೆಂಟ್‌ಗಳು