ಆಲೂ ಗ್ರೇವಿ / Aloo Gravy

Click here for English Version.

ಇದು ಸುವರ್ಣ ಚಾನೆಲ್ ನಲ್ಲಿ ಸಿಹಿ ಕಹಿ ಚಂದ್ರುರವರು ತೋರಿಸಿಕೊಟ್ಟ ಅಡಿಗೆಯಲ್ಲಿ ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಿ ನಾನು ತಯಾರಿಸಿದ ಸಬ್ಜಿ. ಚಪಾತಿ, ರೊಟ್ಟಿ, ನಾನ್ ಇತ್ಯಾದಿಗಳೊಡನೆ ಒಳ್ಳೆಯ ಕಾಂಬಿನೇಷನ್.
                                 
ಬೇಕಾಗುವ  ಸಾಮಗ್ರಿ:
ಆಲೂಗಡ್ಡೆ - 1 (ದೊಡ್ಡದು)
ಗೋಡಂಬಿ (ನೆನೆಸಿದ್ದು) 8 - 10 
ಏಲಕ್ಕಿ - 1 
ಶುಂಠಿ - 1 ಇಂಚು
ಬೆಳ್ಳುಳ್ಳಿ - 1 ತೊಳೆ
ಜೀರಿಗೆ - 1 ಚಮಚ
ಸೋಂಪು - 1 / 2 ಚಮಚ
ಬ್ಯಾಡಗಿ ಮೆಣಸು - 3
ಗರಂ ಮಸಾಲಾ ಪುಡಿ - 1 / 2 ಚಮಚ  
ಕಸೂರಿ ಮೇಥಿ - 1 / 2 ಟೀ ಚಮಚ 
ಜೇನುತುಪ್ಪ - 3 / 4 ಟೀ ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು - 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು 
ಒಗ್ಗರಣೆಗೆ: ಎಣ್ಣೆ - 2 ಚಮಚ, ಜೀರಿಗೆ - 1 / 4 ಚಮಚ 
ಕರಿಯಲು ಎಣ್ಣೆ - ಸ್ವಲ್ಪ

ಮಾಡುವ ವಿಧಾನ:
ನೆನೆಸಿದ ಗೋಡಂಬಿ, ಏಲಕ್ಕಿ, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಸೋಂಪು, ಬ್ಯಾಡಗಿ ಮೆಣಸು - ಇಷ್ಟನ್ನೂ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. 
ಆಲೂಗಡ್ಡೆಯನ್ನು ಮಧ್ಯಮಗಾತ್ರದ ಹೋಳುಗಳಾಗಿ ಹೆಚ್ಚಿಕೊಳ್ಳಿ. ಇವನ್ನು ಚೆನ್ನಾಗಿ ಬೇಯಲು ಅನುಕೂಲವಾಗುವಂತೆ ಫೋರ್ಕ್ ನಿಂದ ಎಲ್ಲ ಕಡೆಗಳಲ್ಲೂ ಚುಚ್ಚಿಡಿ. ನಂತರ ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಆಲೂಗಡ್ಡೆ ಹೋಳುಗಳನ್ನು ಹಾಕಿ ಕರಿಯಿರಿ. ಬೆಂದನಂತರ ತೆಗೆದು, ಒಂದು ಬೌಲ್ ನಲ್ಲಿ ಹಾಕಿಟ್ಟುಕೊಳ್ಳಿ. 
ಬಾಣಲೆಯಲ್ಲಿ 2 ಚಮಚದಷ್ಟು ಎಣ್ಣೆ ಬಿಸಿಮಾಡಿ ಜೀರಿಗೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಇದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ, ಸ್ವಲ್ಪ ನೀರನ್ನೂ ಹಾಕಿ ಹಸಿ ವಾಸನೆ ಹೋಗುವವರೆಗೆ ಕುದಿಸಿ. ನಂತರ ಇದಕ್ಕೆ ಕರಿದ ಆಲೂಗಡ್ಡೆ ಹೋಳುಗಳು, ಗರಂ ಮಸಾಲಾ ಪುಡಿ, ಕಸೂರಿ ಮೇಥಿ, ಜೇನುತುಪ್ಪ, ಉಪ್ಪು, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಹಾಕಿ ನಾಲ್ಕೈದು ನಿಮಿಷ ಕುದಿಸಿ ಇಳಿಸಿ.

ಕಾಮೆಂಟ್‌ಗಳು