Click here for English version.
ಇದು ಮಜ್ಜಿಗೆ ಉಪಯೋಗಿಸಿ ಮಾಡುವ ಮಲೆನಾಡ ಕಡೆಯ ಅಡಿಗೆ. ದಿನವೂ ಅನ್ನ, ಸಾರು ಊಟ ಮಾಡಿ ಬೇಜಾರಾದಾಗ ಇದು ನಾಲಿಗೆಗೆ ಹೆಚ್ಚು ಹಿತವೆನಿಸುತ್ತದೆ..
ಇದು ಮಜ್ಜಿಗೆ ಉಪಯೋಗಿಸಿ ಮಾಡುವ ಮಲೆನಾಡ ಕಡೆಯ ಅಡಿಗೆ. ದಿನವೂ ಅನ್ನ, ಸಾರು ಊಟ ಮಾಡಿ ಬೇಜಾರಾದಾಗ ಇದು ನಾಲಿಗೆಗೆ ಹೆಚ್ಚು ಹಿತವೆನಿಸುತ್ತದೆ..
ಬೆಂಡೆಕಾಯಿ 5 - 6 (ಬೆಂಡೆಕಾಯಿಯ ಬದಲು ಸೌತೆಕಾಯಿ, ಆಲೂಗಡ್ಡೆ ಇತ್ಯಾದಿ ತರಕಾರಿಗಳನ್ನೂ ಬಳಸಬಹುದು)
ತೆಂಗಿನ ತುರಿ - 1 ಕಪ್
ಒಣಮೆಣಸು - 1
ಹಸಿಮೆಣಸು - 2
ಕೊತ್ತಂಬರಿ ಬೀಜ - ಒಂದೂವರೆ ಚಮಚ
ಸಾಸಿವೆ - ಅರ್ಧ ಚಮಚ
ಅರಿಶಿನ - ಕಾಲು ಚಮಚ
ಕರಿಬೇವಿನ ಎಲೆಗಳು - ಸ್ವಲ್ಪ
ನಿಂಬೆಹಣ್ಣು - ಅರ್ಧ
ರುಚಿಗೆ ತಕ್ಕಷ್ಟು ಉಪ್ಪು
ಮಜ್ಜಿಗೆ - ಸ್ವಲ್ಪ
ಒಗ್ಗರಣೆಗೆ: ಎಣ್ಣೆ - 1 / 2 ಚಮಚ, ಉದ್ದಿನ ಬೇಳೆ - 1 / 2 ಚಮಚ, ಚಿಟಿಕೆ ಇಂಗು, ಸಾಸಿವೆ - 1 / 4 ಚಮಚ
ವಿಧಾನ:
ಬೆಂಡೆಕಾಯಿಯನ್ನು ತೊಳೆದು, ಸ್ವಲ್ಪ ದೊಡ್ಡ ಹೋಳುಗಳಾಗಿ ಹೆಚ್ಚಿಕೊಳ್ಳಿ. ಒಂದು ಪಾತ್ರೆಯಲ್ಲಿ 2 ಕಪ್ ನೀರನ್ನು ಕುದಿಯಲಿಡಿ. ನೀರು ಹದವಾಗಿ ಬಿಸಿಯಾದಾಗ ಅದಕ್ಕೆ ಉಪ್ಪು, ನಿಂಬೆರಸ ಸೇರಿಸಿ, ಹೆಚ್ಚಿಕೊಂಡ ತರಕಾರಿಯನ್ನು ಸೇರಿಸಿ, ಬೇಯಿಸಿ. ತೆಂಗಿನತುರಿ ಮತ್ತು ಇತರ ಸಾಮಗ್ರಿಗಳನ್ನು ನುಣ್ಣಗೆ ರುಬ್ಬಿಕೊಂಡು, ಬೆಂದ ತರಕಾರಿಗೆ ಸೇರಿಸಿ, ಕರಿಬೇವಿನ ಎಸಳುಗಳನ್ನು ಹಾಕಿ 2 - 3 ನಿಮಿಷ ಕುದಿಸಿ, ಇಳಿಸಿ ಒಗ್ಗರಣೆ ಕೊಡಿ. ಬಿಸಿ ಸ್ವಲ್ಪ ತಣಿದನಂತರ ಇದಕ್ಕೆ ಮಜ್ಜಿಗೆ ಸೇರಿಸಿ, ಅನ್ನದೊಡನೆ ಊಟ ಮಾಡಿ.
Hey Vaani, nice recipe try maadi nodtini... nimma kade tambuli madtira alva a recipe na post madtira....
ಪ್ರತ್ಯುತ್ತರಅಳಿಸಿThanks Padmini,,will post the Tambuli recipe soon.
ಪ್ರತ್ಯುತ್ತರಅಳಿಸಿYella recipes tumba chenaagiddu.. kelvandu nange gottirle.. try maadi nodthi :)
ಪ್ರತ್ಯುತ್ತರಅಳಿಸಿThank you Rashmi..try maadu recipes na..
ಪ್ರತ್ಯುತ್ತರಅಳಿಸಿVery tasty
ಪ್ರತ್ಯುತ್ತರಅಳಿಸಿ