ಸ್ವೀಟ್ ಕಾರ್ನ್ ಸೂಪ್ / Sweet Corn Veg. Soup

Click here for English version.

ಫ್ರೆಶ್ ಸ್ವೀಟ್ ಕಾರ್ನ್ ಇಲ್ಲವೇ ಫ್ರೋಜನ್ ಸ್ವೀಟ್ ಕಾರ್ನ್ ನಿಂದ ಈ ಸೂಪ್ ತಯಾರಿಸಬಹುದು. ಊಟದ ಜೊತೆಗೆ ಒಳ್ಳೆಯ ಸ್ಟಾರ್ಟರ್. 


ಸರ್ವಿಂಗ್ಸ್: 3 ಜನರಿಗೆ ಆಗುತ್ತದೆ
ತಯಾರಿಸಲು ಬೇಕಾಗುವ ಸಮಯ: 25 - 30 ನಿಮಿಷಗಳು
 
ಬೇಕಾಗುವ ಸಾಮಗ್ರಿಗಳು:
ಸ್ವೀಟ್ ಕಾರ್ನ್ - 1 ಕಪ್
ಸಣ್ಣಗೆ ಹೆಚ್ಚಿದ ಬೀನ್ಸ್ - 1 / 2 ಕಪ್
ಸಣ್ಣಗೆ ಹೆಚ್ಚಿದ ಕ್ಯಾರೆಟ್ - 1 / 2 ಕಪ್
ಸಕ್ಕರೆ - ಮುಕ್ಕಾಲು ಟೀ ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಕಾಳುಮೆಣಸಿನ ಪುಡಿ - ಸ್ವಲ್ಪ 
ಕಾರ್ನ್ ಫ್ಲೋರ್ - 2 ಟೀ ಸ್ಪೂನ್
ಹಾಲು (ಬೇಕಿದ್ದರೆ) - 1 1/2 ಟೀ ಸ್ಪೂನ್
ಟೊಮೇಟೊ ಸಾಸ್ - 1 ಟೀ ಸ್ಪೂನ್

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು, ಅರ್ಧ ಕಪ್ ಸ್ವೀಟ್ ಕಾರ್ನ್, ಹೆಚ್ಚಿದ ಬೀನ್ಸ್ ಮತ್ತು ಹೆಚ್ಚಿದ ಕ್ಯಾರೆಟ್ ಹಾಕಿ ಉಪ್ಪು, ಸ್ವಲ್ಪ ಸಕ್ಕರೆ ಹಾಕಿ 10 - 12 ನಿಮಿಷ ಬೇಯಿಸಿ. ಉಳಿದರ್ಧ ಸ್ವೀಟ್ ಕಾರ್ನ್ ನ್ನು ಮಿಕ್ಸಿಯಲ್ಲಿ ತರಿಯಾಗಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಬೆಂದ ತರಕಾರಿಯೊಡನೆ ಸೇರಿಸಿ.
ಕಾರ್ನ್ ಫ್ಲೋರ್ ಗೆ ಸ್ವಲ್ಪ ತಣ್ಣನೆಯ ನೀರು ಸೇರಿಸಿ ಗಂಟಿಲ್ಲದಂತೆ ಕದಡಿ, ಕುದಿಯುವ ಮಿಶ್ರಣಕ್ಕೆ ಸೇರಿಸಿ ತಳ ಹಿಡಿಯದಂತೆ ಕೈಯಾಡಿಸುತ್ತಿರಿ. ಬೇಕಿದ್ದರೆ 2 ಟೀ ಸ್ಪೂನ್ ಹಾಲನ್ನೂ ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಿ. ಸ್ವಲ್ಪ ಟೊಮೇಟೊ ಸಾಸ್ ಸೇರಿಸಿ ಕೈಯಾಡಿಸಿ ಉರಿಯಿಂದ ಇಳಿಸಿ. ಖಾರಕ್ಕೆ ತಕ್ಕಂತೆ ಕಾಳುಮೆಣಸಿನ ಪುಡಿ ಸೇರಿಸಿ ಕದಡಿ, ಬಿಸಿಯಿರುವಾಗಲೇ ಸವಿಯಿರಿ. ಬೇಕಿದ್ದರೆ ಕರಿದ ಬ್ರೆಡ್ ಚೂರುಗಳನ್ನು ಸೇರಿಸಿಕೊಳ್ಳಿ. ಈ ಸೂಪ್ ಗೆ  ಉಪ್ಪು, ಖಾರ, ಸಿಹಿ ಯಾವುದೂ ಜಾಸ್ತಿ ಇರಬಾರದು.

ಕಾಮೆಂಟ್‌ಗಳು