ಕಳಲೆ ಬಜ್ಜಿ / Bamboo shoot Bajji (Fritters)

Click here for English version.

ಕಳಲೆಯಿಂದ ತಯಾರಿಸುವ ವೆರೈಟಿಗಳಲ್ಲಿ ಈ ಬಜ್ಜಿಯೂ ಒಂದು. ಇದೂ ಕೂಡ ಅಕ್ಕನಿಂದ ಕಲಿತ ಅಡಿಗೆ! ಸ್ನ್ಯಾಕ್ಸ್ ಟೈಮ್ ಗೆ ಕಳಲೆಯ ಬಜ್ಜಿ ತುಂಬಾ ಚೆನ್ನಾಗಿರುತ್ತದೆ. ಉಪ್ಪಿನಲ್ಲಿ ಹಾಕಿಟ್ಟ ಕಳಲೆಯಿಂದಲೂ ಈ ಬಜ್ಜಿಯನ್ನು ತಯಾರಿಸಬಹುದು.


ತಯಾರಿಸಲು ಬೇಕಾಗುವ ಸಮಯ: 35 - 40 ನಿಮಿಷಗಳು
ಸರ್ವಿಂಗ್ಸ್: 2
 
ಬೇಕಾಗುವ ಸಾಮಗ್ರಿಗಳು:
ಕಳಲೆ - 3/4 ಬೌಲ್ (ನೀರನ್ನು ಹಿಂಡಿ ತೆಗೆದದ್ದು)
ಕಡಲೆಹಿಟ್ಟು - 3/4 ಕಪ್ 
ಅಕ್ಕಿಹಿಟ್ಟು 2 - 3 ಚಮಚ 
ಮೆಣಸಿನ ಪುಡಿ - 2 ಚಮಚ
ಉಪ್ಪು 
ಕರಿಯಲು ಎಣ್ಣೆ

ಮಾಡುವ ವಿಧಾನ:
ಕಳಲೆಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಹೆಚ್ಚಿದ ಕಳಲೆಯನ್ನು ಬಾಣಲೆಯಲ್ಲಿ 7 - 8 ನಿಮಿಷ ಹುರಿದುಕೊಳ್ಳಿ.
ಹುರಿದ ಕಳಲೆ, ಕಡಲೆಹಿಟ್ಟು, ಅಕ್ಕಿಹಿಟ್ಟು, ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರು ಸೇರಿಸಿ ಸ್ವಲ್ಪ ಗಟ್ಟಿಯಾಗಿ ಹಿಟ್ಟನ್ನು ತಯಾರಿಸಿಕೊಳ್ಳಿ.
ಹಿಟ್ಟನ್ನು ಕಾದ ಎಣ್ಣೆಯಲ್ಲಿ ಚಿಕ್ಕ ಉಂಡೆಗಳಂತೆ ಬಿಟ್ಟು ಕರಿಯಿರಿ.
ಬಜ್ಜಿ ಬಿಸಿ ಇರುವಾಗಲೇ ಟೀ ಯೊಡನೆ ಸವಿಯಿರಿ.


ಟಿಪ್ಸ್:
  • ಬಜ್ಜಿ ಮೆತ್ತಗೆನಿಸಿದರೆ ಇನ್ನೂ ಸ್ವಲ್ಪ ಅಕ್ಕಿಹಿಟ್ಟು ಸೇರಿಸಿ. ಬಜ್ಜಿ ಗರಿಗರಿಯಾಗಿ ಬರುತ್ತದೆ.

ಕಾಮೆಂಟ್‌ಗಳು