Click here for English version.
ವೀಕೆಂಡ್ ಗೆ ಮೂರು ದಿನ ರಜಾ ಇತ್ತು ಕಳೆದ ವಾರ. ಅದಕ್ಕೇ ಒಂದು ದಿನ ಎಲ್ಲಾದರೂ ಟ್ರಿಪ್ ಗೆ ಹೋಗೋಣವೆಂದು ಪ್ಲಾನ್ ಮಾಡಿದ್ದೆವು. ಇತ್ತೀಚಿಗೆ ಎಲ್ಲೂ ಹೋಗಿರದ ಕಾರಣ ನಮಗೂ ಚೇಂಜ್ ಬೇಕಿತ್ತು. ಟ್ರಿಪ್ ಎಂದಮೇಲೆ ಏನಾದರೂ ಕುರುಕಲು ತಿಂಡಿಗಳೂ ಜೊತೆಗೆ ಇರಬೇಕಲ್ಲ? ಕೇವ್ಸ್ ನ ದೂರ ಪ್ರಯಾಣದ ಹಾದಿಗೆ ಮನೆಯಲ್ಲೇ ತಯಾರಿಸಿದ ಪಾಪ್ ಕಾರ್ನ್ ಜೊತೆಯಾಯಿತು..

ಪಾಪ್ ಕಾರ್ನ್ ನ್ನು ಮನೆಯಲ್ಲೇ ಬಹಳ ಸುಲಭವಾಗಿ ಕಡಿಮೆ ಸಮಯದಲ್ಲಿ ತಯಾರಿಸಬಹುದು. ಯಾರಾದರೂ ಮನೆಗೆ ಬಂದಾಗ, ಅಥವಾ ಅರ್ಜೆಂಟ್ ಆಗಿ ಏನಾದರೂ ಕುರುಕಲು ತಿಂಡಿ ಬೇಕೆನಿಸಿದಾಗ ಥಟ್ ಎಂದು ಪಾಪ್ ಕಾರ್ನ್ ರೆಡಿ ಮಾಡಬಹುದು! ಇಲ್ಲಿದೆ ನೋಡಿ ಪಾಪ್ ಕಾರ್ನ್ ತಯಾರಿಸುವ ವಿಧಾನ..
ಬೇಕಾಗುವ ಸಮಯ: 20 ನಿಮಿಷ
ಸರ್ವಿಂಗ್: 3 - 4 ಜನರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
ಜೋಳದ ಬೀಜ (Popping Corn) -1/ 2 ಕಪ್
ಆಲಿವ್ ಆಯಿಲ್ - ಸ್ವಲ್ಪ
ಉಪ್ಪು
ಪೆಪ್ಪರ್ ಪೌಡರ್
ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿ.
ಎಣ್ಣೆ ಕಾದು, ಹೊಗೆ ಬರುವಂತಾದಾಗ ಅದಕ್ಕೆ 4 - 5 ಚಮಚ ಜೋಳವನ್ನು ಹಾಕಿ, ಒಂದು ಪ್ಲೇಟ್ ಮುಚ್ಚಿ.
ಮುಚ್ಚಳ ಮುಚ್ಚಿ ಒಂದು ನಿಮಿಷದೊಳಗೇ ಪಾಪ್ ಕಾರ್ನ್ ಸಿಡಿಯುವ ಸದ್ದು ಕೇಳತೊಡಗುತ್ತದೆ.
ಒಂದೆರಡು ಬಾರಿ ಮರದ ಸೌಟಿನಿಂದ ಪಾಪ್ ಕಾರ್ನ್ ನ್ನು ಮಿಕ್ಸ್ ಮಾಡಿ.
ತಯಾರಾದ ಪಾಪ್ ಕಾರ್ನ್ ಗೆ ಸ್ವಲ್ಪ ಉಪ್ಪು, ಬೇಕಿದ್ದರೆ ಸ್ವಲ್ಪ ಪೆಪ್ಪರ್ ಪೌಡರ್ ಸೇರಿಸಿ ಮಿಕ್ಸ್ ಮಾಡಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)