Click here for English version.
ನಮ್ಮ ಮನೆಯಲ್ಲಿ ಬೆಳಗಿನ ತಿಂಡಿಗೆ ದೋಸೆ ಮಾಡಿಯೇ ಅಭ್ಯಾಸ. ದೋಸೆಯೇ ಎಂದೇನಿಲ್ಲ, ಚಪಾತಿ ಅಥವಾ ಇಡ್ಲಿ ಆದರೂ ನಡೆಯುತ್ತದೆ. ಆದರೆ ಹೆಚ್ಚಾಗಿ ಮಾಡುವುದು ದೋಸೆಯನ್ನೇ. ಇಲ್ಲಿನ ಅಂಗಡಿಗಳಲ್ಲಿ 'ಝುಕಿನಿ' ಎನ್ನುವ ಒಂದು ಬಗೆಯ ತರಕಾರಿ ಸಿಗುತ್ತದೆ. ನೋಡುವುದಕ್ಕೆ ಸೌತೆಕಾಯಿಯಂತೆ ಕಂಡರೂ ಅದರ ರುಚಿ ಹಾಲುಗುಂಬಳ ಅಥವಾ ಸೋರೆಕಾಯಿಯಂತೆ ಇರುತ್ತದೆ. ಸುಮಾರು ದಿನಗಳ ಹಿಂದೆ ಫಾರ್ಮರ್ಸ್ ಮಾರ್ಕೆಟ್ ಗೆ ಹೋದಾಗ ತಂದಿದ್ದ 'ಝುಕಿನಿ' ಫ್ರಿಜ್ ನಲ್ಲೇ ಹಾಳಾಗತೊಡಗಿತ್ತು. ಅದನ್ನು ಬೇಗ ಬೇಗ ಖಾಲಿ ಮಾಡಬೇಕೆಂದು ದೋಸೆಗೆ ಸೌತೆಕಾಯಿಯ ಬದಲು ಝುಕಿನಿಯನ್ನೇ ಸೇರಿಸಿ ನೋಡಿದೆ.. ದೋಸೆ ಚೆನ್ನಾಗಿ ಬಂತು. ಅಂತೂ ಎರಡ್ಮೂರು ದಿನ ದೋಸೆ ಮಾಡಿ, ಝುಕಿನಿಯನ್ನು ಮುಗಿಸಿದ್ದಾಯಿತು! ಅದನ್ನು ಬಳಸಿ ತಯಾರಿಸಿದ ಖಾರಾ ದೋಸೆಯ ವಿಧಾನ ಇಲ್ಲಿದೆ.. ಇದನ್ನು ನಾನು ಅಮ್ಮನಿಂದ ಕಲಿತದ್ದು. ಈ ದೋಸೆಗೆ ಝುಕಿನಿಯ ಬದಲು ಸೌತೆಕಾಯಿ ಅಥವಾ ಮೊಗೆಕಾಯಿ (Yellow cucumber)ಯನ್ನು ಬಳಸಬಹುದು.
ತಯಾರಿಸಲು ಬೇಕಾಗುವ ಸಮಯ: ಅರ್ಧ ಘಂಟೆ
ಅಕ್ಕಿ ನೆನೆಸಲು ಬೇಕಾಗುವ ಸಮಯ - 3 ಘಂಟೆ
ಹಿಟ್ಟು ಹುದುಗು ಬರಲು ಬೇಕಾಗುವ ಸಮಯ: 7 - 8 ಘಂಟೆ
ಸರ್ವಿಂಗ್ಸ್: ಇಬ್ಬರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
ಅಕ್ಕಿ - 1 1/2 ಕಪ್
ಮೆಂತ್ಯ - 1 / 2 ಚಮಚ
ಒಣಮೆಣಸು 3 - 4
ಕೊತ್ತಂಬರಿ ಬೀಜ - 1 1/2 ಚಮಚ
ಜೀರಿಗೆ - 1 / 2 ಚಮಚ
ಅರಿಶಿನ - 1 / 4 ಚಮಚ
ಓಮ (ಅಜವಾನ) - 1 / 4 ಚಮಚ
ಸಾಸಿವೆ - 1 / 2 ಚಮಚ
ಎಳ್ಳು - 1 / 2 ಚಮಚ
ಚಿಟಿಕೆ ಇಂಗು
ಕರಿಬೇವು 5 - 6 ಎಸಳು
ಝುಕಿನಿ - 1 (ಅಥವಾ 1 ಸಣ್ಣ ಸೌತೆಕಾಯಿ)
1 ಮಧ್ಯಮ ಗಾತ್ರದ ಈರುಳ್ಳಿ
ರುಚಿಗೆ ತಕ್ಕಷ್ಟು ಉಪ್ಪು
ಸಕ್ಕರೆ ಅಥವಾ ಬೆಲ್ಲ - 1 / 2 ಚಮಚ
ಎಣ್ಣೆ ಅಥವಾ ಬೆಣ್ಣೆ - ಸ್ವಲ್ಪ
ಮಾಡುವ ವಿಧಾನ:
ಅಕ್ಕಿ ಮತ್ತು ಮೆಂತ್ಯವನ್ನು ನೀರಿನಲ್ಲಿ ಸುಮಾರು 3 ಘಂಟೆ ನೆನೆಸಿಕೊಳ್ಳಿ.
ಝುಕಿನಿ ಅಥವಾ ಸೌತೆಕಾಯಿಯನ್ನು ಸಿಪ್ಪೆ ತೆಗೆದು, ಹೆಚ್ಚಿಕೊಳ್ಳಿ ಇಲ್ಲವೇ ತುರಿದುಕೊಳ್ಳಿ.
ಅಕ್ಕಿ, ಮೆಂತ್ಯ, ಸೌತೆಕಾಯಿ, ಒಣಮೆಣಸು, ಕೊತ್ತಂಬರಿ, ಜೀರಿಗೆ, ಅರಿಶಿನ, ಓಮ, ಸಾಸಿವೆ, ಎಳ್ಳು, ಇಂಗು, ಕರಿಬೇವು ಇಷ್ಟನ್ನೂ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ಝುಕಿನಿ ಅಥವಾ ಸೌತೆಕಾಯಿಯ ನೀರಿನಂಶವೇ ಇದಕ್ಕೆ ಸಾಕಾಗುತ್ತದೆ. ಹಿಟ್ಟು ತುಂಬಾ ದಪ್ಪಗಿದ್ದರೆ ಸ್ವಲ್ಪ ನೀರನ್ನು ಸೇರಿಸಿ ದೋಸೆ ಹಿಟ್ಟನ್ನು ತಯಾರಿಸಿ.
ದೋಸೆ ಹಿಟ್ಟನ್ನು ಏಳೆಂಟು ಘಂಟೆ ಅಥವಾ ರಾತ್ರಿಯಿಡೀ ಬೆಚ್ಚಗಿನ ಸ್ಥಳದಲ್ಲಿ ಇಡಿ.
ದೋಸೆ ತಯಾರಿಸಲು 15 ನಿಮಿಷ ಮೊದಲು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ಸ್ವಲ್ಪ ಉಪ್ಪು ಸೇರಿಸಿ ಕಲಸಿಡಿ. ಇದರಿಂದ ಈರುಳ್ಳಿ ಮೆತ್ತಗಾಗಿ, ದೋಸೆಯೊಡನೆ ಚೆನ್ನಾಗಿ ಸೇರಿಕೊಳ್ಳುತ್ತದೆ.
ದೋಸೆ ಕಾವಲಿಯನ್ನು ಕಾಯಲಿಟ್ಟು, ದೋಸೆ ಹಿಟ್ಟಿಗೆ ಉಪ್ಪು, ಸಕ್ಕರೆ, ಹೆಚ್ಚಿದ ಈರುಳ್ಳಿ ಸೇರಿಸಿ ಕಲಸಿ. ಬೇಕಿದ್ದರೆ 8 - 10 ಕರಿಬೇವಿನ ಎಸಳುಗಳನ್ನೂ ಹೆಚ್ಚಿ ಹಾಕಿ.
ಕಾದ ಕಾವಲಿಯಮೇಲೆ ಒಂದು ದೊಡ್ಡ ಸೌಟಿನಷ್ಟು ಹಿಟ್ಟನ್ನು ಹಾಕಿ, ಹಿಟ್ಟನ್ನು ಸ್ವಲ್ಪ ಹರವಿ. ದೋಸೆ ಸ್ವಲ್ಪ ದಪ್ಪಗೇ ಇರಲಿ.
ದೋಸೆಗೆ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕಿ ಎರಡೂ ಕಡೆ ಬೇಯಿಸಿ ತೆಗೆಯಿರಿ.
ಬಿಸಿಬಿಸಿ ದೋಸೆಯನ್ನು ಬೆಣ್ಣೆಯೊಡನೆ ಸರ್ವ್ ಮಾಡಿ.
ಟಿಪ್ಸ್:

- ದೋಸೆಗೆ ಹಿಟ್ಟನ್ನು ರುಬ್ಬುವಾಗ ಎರಡು ಚಮಚದಷ್ಟು ತೆಂಗಿನತುರಿಯನ್ನು ಸೇರಿಸಿ ರುಬ್ಬಿದರೆ ದೋಸೆ ಮೆತ್ತಗೆ, ಚೆನ್ನಾಗಿ ಬರುತ್ತದೆ.
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿHi: Tried spicy dosa; came out very good. Thanks for sharing the recipe - Amitha
ಪ್ರತ್ಯುತ್ತರಅಳಿಸಿThank you Amitha.. happy to hear your feedback :)
ಪ್ರತ್ಯುತ್ತರಅಳಿಸಿ