Click here for English version.
ತೆಳ್ಳೇವು ತಯಾರಿಸುವ ಪ್ರಾತ್ಯಕ್ಷಿಕೆಗಾಗಿ ಈ ಕೆಳಗಿನ ವಿಡಿಯೋ ಕ್ಲಿಪ್ ನೋಡಿ..
ನೀವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಗೆ ಹೋದರೆ ಅಲ್ಲಿ ಹೆಚ್ಚಿನ ಮನೆಗಳಲ್ಲಿ ಬೆಳಗಿನ ತಿಂಡಿಗೆ ಒಂದು ಬಗೆಯ ಪೇಪರ್ ನಷ್ಟು ತೆಳ್ಳಗಿನ ದೋಸೆಯನ್ನು ಹೆಚ್ಚಿನ ಮನೆಗಳಲ್ಲಿ ಕಾಣಬಹುದು. ಅದೇ ತೆಳ್ಳೇವು! ಹವ್ಯಕರ ಸ್ಪೆಷಲ್ ಅಡಿಗೆಗಳಲ್ಲಿ ಇದೂ ಒಂದು. ತೆಳ್ಳೇವು ತಯಾರಿಸುವುದೂ ಒಂದು ಕಲೆ. ದೋಸೆ ಕಾವಲಿಗೆ ಹಿಟ್ಟನ್ನು ಹಾಕಿದ ತಕ್ಷಣ ಅದನ್ನು ತೆಳ್ಳಗೆ ಹರವಬೇಕು. ಹಿಟ್ಟನ್ನು ಬೇಗಬೇಗ ಹರಡದಿದ್ದರೆ ಹಿಟ್ಟು ಅಲ್ಲೇ ಬೆಂದುಬಿಡುತ್ತದೆ. ಹಿಟ್ಟನ್ನು ತೆಳ್ಳಗೆ ಹರಡಲು ಒಂದು ವೇಸ್ಟ್ ಕ್ರೆಡಿಟ್ ಕಾರ್ಡ್ ಅಥವಾ ಪ್ಲಾಸ್ಟಿಕ್ ಪ್ಲೇಯಿಂಗ್ ಕಾರ್ಡ್ ಇದ್ದರೆ ಅನುಕೂಲ. ಹಳ್ಳಿಯ ಕಡೆ ಬಾಳೆ ಎಳೆಯನ್ನು ಮಡಿಕೆ ಮಾಡಿ ದಪ್ಪಗೆ ಮಾಡಿಕೊಂಡು ಅದರಿಂದ ಹಿಟ್ಟನ್ನು ಹರವುತ್ತಾರೆ.
ಕಳೆದ ವಾರ ಅಪರೂಪಕ್ಕೆ ತೆಳ್ಳೇವು ಮಾಡಿದ್ದೆ. ಇದನ್ನೂ ಬ್ಲಾಗ್ ನಲ್ಲಿ ಹಾಕುತ್ತೇನೆ ಎಂದು ಹೇಳುತ್ತಿದ್ದ ಹಾಗೇ ನಮ್ಮವರಿಗೆ ಯೋಚನೆ ಬಂತು; ತೆಳ್ಳೇವು ಮಾಡುವ ವಿಧಾನವನ್ನು ವಿಡಿಯೋ ಮಾಡಿ ಹಾಕಿದರೆ ಚೆನ್ನಾಗಿರುವುದೆಂದು. ಅವರೇ ತಯಾರಿಸಿಕೊಟ್ಟದ್ದು ಇದರ ವಿಡಿಯೋ ಪ್ರೆಸೆಂಟೇಶನ್ ;) ಇದು ನಾನು ಹಾಕುತ್ತಿರುವ ಮೊದಲ ವಿಡಿಯೋ ಪ್ರೆಸೆಂಟೇಶನ್.. ನಿಮಗೆಲ್ಲ ಇಷ್ಟವಾಗಬಹುದೆಂದುಕೊಂಡಿದ್ದೇನೆ :)
ತಯಾರಿಸಲು ಬೇಕಾಗುವ ಸಮಯ: 20 ನಿಮಿಷ
ಸಾಮಗ್ರಿಗಳನ್ನು ನೆನೆಸಲು ಬೇಕಾಗುವ ಸಮಯ: 4 - 5 ಘಂಟೆ
ಸಾಮಗ್ರಿಗಳನ್ನು ನೆನೆಸಲು ಬೇಕಾಗುವ ಸಮಯ: 4 - 5 ಘಂಟೆ
ಹಿಟ್ಟು ಹುದುಗುಬರಲು ಬೇಕಾಗುವ ಸಮಯ: 7 - 8 ಘಂಟೆ
ಸರ್ವಿಂಗ್ಸ್: ಇಬ್ಬರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
ಅಕ್ಕಿ - 1 1/2 ಕಪ್
ಉದ್ದಿನಬೇಳೆ - 1/4 ಕಪ್
ಒಂದು ಮೀಡಿಯಂ ಸೈಜ್ ಸೌತೆಕಾಯಿ
ಮೆಂತ್ಯ - 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಸಕ್ಕರೆ / ಬೆಲ್ಲ - 1 / 2 ಚಮಚ
ಸ್ವಲ್ಪ ಎಣ್ಣೆ
ಮಾಡುವ ವಿಧಾನ:
ಅಕ್ಕಿ, ಉದ್ದಿನಬೇಳೆ ಮತ್ತು ಮೆಂತ್ಯವನ್ನು 4 - 5 ಘಂಟೆ ನೀರಿನಲ್ಲಿ ನೆನೆಸಿಕೊಳ್ಳಿ.
ಸೌತೆಕಾಯಿಯ ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ.
ಅಕ್ಕಿ, ಉದ್ದಿನಬೇಳೆ, ಮೆಂತ್ಯ ಮತ್ತು ಹೆಚ್ಚಿದ ಸೌತೆಕಾಯಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ, ದೋಸೆ ಹಿಟ್ಟನ್ನು ತಯಾರಿಸಿಕೊಳ್ಳಿ.
ಸೌತೆಕಾಯಿಯಲ್ಲಿ ನೀರಿನಂಶ ಇರುವುದರಿಂದ ರುಬ್ಬಲು ನೀರನ್ನು ಸೇರಿಸಬೇಕಿಲ್ಲ. ಹಿಟ್ಟು ತುಂಬ ಗಟ್ಟಿ ಎನ್ನಿಸಿದರೆ ಸ್ವಲ್ಪ ನೀರನ್ನು ಸೇರಿಸಿ.
ತಯಾರಿಸಿದ ಹಿಟ್ಟನ್ನು 7 - 8 ಘಂಟೆಕಾಲ ಬೆಚ್ಚಗಿನ ಸ್ಥಳದಲ್ಲಿ ಇಡಿ.
ದೋಸೆ ಕಾವಲಿಯನ್ನು ಕಾಯಲಿಟ್ಟು, ತೆಳ್ಳೇವು ಹಿಟ್ಟಿಗೆ ಉಪ್ಪು, ಸಕ್ಕರೆ ಸೇರಿಸಿ ಹದಮಾಡಿಕೊಳ್ಳಿ.
ಕಾವಲಿಗೆ ಒಂದೆರಡು ಹನಿಯಷ್ಟು ಎಣ್ಣೆ ಸವರಿಕೊಳ್ಳಿ. ಪ್ರತಿ ತೆಳ್ಳೇವು ಮಾಡುವ ಮೊದಲೂ ಕಾವಲಿಗೆ ಎಣ್ಣೆ ಸವರಿಕೊಳ್ಳಬೇಕು.
ಒಂದು ಸೌಟಿನಷ್ಟು ಹಿಟ್ಟನ್ನು ಕಾದ ಕಾವಲಿಯಮೇಲೆ ಹಾಕಿಕೊಂಡು ಕಾರ್ಡ್ ಸಹಾಯದಿಂದ ತೆಳ್ಳಗೆ ಹರವಿ.
ಬೇಯುತ್ತಿದ್ದಂತೆಯೇ ಅಂಚನ್ನು ನಿಧಾನವಾಗಿ ಬಿಡಿಸಿಕೊಂಡು ತೆಳ್ಳೇವನ್ನು ಕಾವಲಿಯಿಂದ ಎತ್ತಿ.
ಬಿಸಿಬಿಸಿ ತೆಳ್ಳೇವನ್ನು ಚಟ್ನಿ ಅಥವಾ ಬೇರೆ ಯಾವುದೇ ಸೈಡ್ ಡಿಶ್ ನೊಡನೆ ಸರ್ವ್ ಮಾಡಿ.
ತೆಳ್ಳೇವು ತಯಾರಿಸುವ ಪ್ರಾತ್ಯಕ್ಷಿಕೆಗಾಗಿ ಈ ಕೆಳಗಿನ ವಿಡಿಯೋ ಕ್ಲಿಪ್ ನೋಡಿ..
ಟಿಪ್ಸ್:
- ಹಿಟ್ಟನ್ನು ತಯಾರಿಸಲು ಮೊಗೆಕಾಯಿ ಅಥವಾ ಝುಕಿನಿಯನ್ನೂ ಬಳಸಬಹುದು. ಇದ್ಯಾವುದನ್ನೂ ಬಳಸದಿದ್ದರೆ ಕಾಲು ಕಪ್ ನ ಬದಲು ಅರ್ಧ ಕಪ್ ಉದ್ದಿನಬೇಳೆಯನ್ನು ಸೇರಿಸಿ.
- ಮೆತ್ತಗಿನ ತೆಳ್ಳೇವು ಬೇಕೆಂದರೆ ಕಾವಲಿಯಿಂದ ಸ್ವಲ್ಪ ಬೇಗ ತೆಗೆದುಬಿಡಿ. ಗರಿಗರಿ ಬೇಕೆಂದರೆ ಸ್ವಲ್ಪ ಹೆಚ್ಚು ಸಮಯ ಬೇಯಿಸಿ ತೆಗೆಯಿರಿ.
- ಕಾವಲಿಯನ್ನು ತಣ್ಣೀರಿನಲ್ಲಿ 8 - 10 ಘಂಟೆ ಮುಳುಗಿಸಿಟ್ಟು ಬಳಸಿದರೆ ದೋಸೆ / ತೆಳ್ಳೇವು ಚೆನ್ನಾಗಿ ಏಳುತ್ತದೆ.
Vani,
ಪ್ರತ್ಯುತ್ತರಅಳಿಸಿTumba chennagi demonstration kottideera :) ee vaara dose maaduva karyakrama ide, adara jothege nimma tellavu try maadthini.
Thank you so much..khandita try madi, matte hegittu anta heli!!
ಪ್ರತ್ಯುತ್ತರಅಳಿಸಿkannadadalli vedio nodiddhe tumba santoshvaytu.heege munduvarisi.Best of luck
ಪ್ರತ್ಯುತ್ತರಅಳಿಸಿThanks Geeta..
ಪ್ರತ್ಯುತ್ತರಅಳಿಸಿVani, I did try your method of making dose, it was ok. Nimmashtu tellage barlilla, guess I need more practice :) I will try making them again.
ಪ್ರತ್ಯುತ್ತರಅಳಿಸಿ@ KFB: happy to hear your feedback :) Yeah, it needs little practice to prepare thin Tellevu..
ಪ್ರತ್ಯುತ್ತರಅಳಿಸಿ