Click here for English version.
ಬೂದುಗುಂಬಳಕಾಯಿ ಭಾರತೀಯ ಅಡಿಗೆ ಮನೆಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ತರಕಾರಿಗಳಲ್ಲಿ ಒಂದು. ಹಿಂದಿನ ಕಾಲದಲ್ಲಿ ಸಸ್ಯಾಹಾರಿಗಳಿಗೆ ಬೂದುಗುಂಬಳಕಾಯಿ ನಿಷಿದ್ಧ ಎಂಬ ನಂಬಿಕೆಯಿತ್ತು. ಹೀಗಾಗಿ ಸಂಪ್ರದಾಯಸ್ಥರ ಮನೆಗಳಲ್ಲಿ ಇಂದಿಗೂ ಬೂದುಗುಂಬಳಕಾಯಿಯನ್ನು ಹಿಂದಿನ ಬಾಗಿಲಿನಿಂದ ಮನೆಯೊಳಗೆ ಒಯ್ಯುವ ಪದ್ಧತಿಯಿದೆ! ಇಂಥ ನಂಬಿಕೆ ಏಕಿತ್ತೋ ಗೊತ್ತಿಲ್ಲ. ಆದರೆ ಈ ತರಕಾರಿಯಲ್ಲಿರುವ ಜೀವಸತ್ವಗಳನ್ನು ನೋಡಿದರೆ ಯಾರೂ ತಿನ್ನದೇ ಇರುವಂತಿಲ್ಲ. ಪ್ರೊಟೀನ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್, ಕಬ್ಬಿಣಾಂಶಗಳ ಆಗರವಾಗಿರುವ ಬೂದುಗುಂಬಳ ಊಟಕ್ಕೂ ತುಂಬ ರುಚಿ.
ಸಾಂಬಾರ್, ಮಜ್ಜಿಗೆ ಹುಳಿ ಇತ್ಯಾದಿ ಮೇಲೋಗರಗಳಿಗೆ ಕುಂಬಳಕಾಯಿ ಬಳಸಿದರೆ ರುಚಿ ಹೆಚ್ಚು. ಕುಂಬಳಕಾಯಿ ಬಳಸಿ ತಯಾರಿಸುವ ಮಜ್ಜಿಗೆ ಹುಳಿಯ ರೆಸಿಪಿ ಇಲ್ಲಿದೆ. ಈ ಮಜ್ಜಿಗೆ ಹುಳಿಗೆ ಕುಂಬಳಕಾಯಿಯ ಬದಲು ಸೀಮೆಬದನೆ, ಬದನೆಕಾಯಿ ಅಥವಾ ಸೌತೆಕಾಯಿಯನ್ನೂ ಬಳಸಬಹುದು.
ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ
ಬೇಕಾಗುವ ಸಾಮಗ್ರಿಗಳು:
ಬೂದುಗುಂಬಳಕಾಯಿ - 1/2 kg
ತೆಂಗಿನತುರಿ - 1 1/4 ಕಪ್
ಕಡಲೆಬೇಳೆ - 1 ಚಮಚ (1/2 ಘಂಟೆ ನೆನೆಸಿಡಿ)
ಹಸಿಮೆಣಸು - 2 (ಖಾರಕ್ಕೆ ತಕ್ಕಂತೆ)
ಹೆಚ್ಚಿದ ಕೊತ್ತಂಬರಿಸೊಪ್ಪು - 3 ಚಮಚ

ಜೀರಿಗೆ - 3/4 ಚಮಚ
ಅರಿಶಿನ - 1/4 ಚಮಚ
ಶುಂಠಿ - 1/2 ಇಂಚು
ಮಜ್ಜಿಗೆ - 1 ರಿಂದ 1 1/2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ: ಎಣ್ಣೆ - 2 ಚಮಚ, ಸಾಸಿವೆ - 1 ಚಮಚ, ಕರಿಬೇವು - 1 ಎಸಳು
ಮಾಡುವ ವಿಧಾನ:
ಬೂದುಗುಂಬಳಕಾಯಿಯ ಸಿಪ್ಪೆ ಮತ್ತು ತಿರುಳನ್ನು ತೆಗೆದು, ಮಧ್ಯಮಗಾತ್ರದ ಹೋಳುಗಳಾಗಿ ಹೆಚ್ಚಿಕೊಳ್ಳಿ. ಹೋಳಿಗೆ ಬೇಯಲು ಬೇಕಾದಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮೆತ್ತಗಾಗುವವರೆಗೆ ಬೇಯಿಸಿ.
ತೆಂಗಿನತುರಿ, ಶುಂಠಿ, ಹಸಿಮೆಣಸು, ಕೊತ್ತಂಬರಿಸೊಪ್ಪು, ಜೀರಿಗೆ, ಅರಿಶಿನ ಹಾಗೂ ನೆನೆಸಿದ ಕಡಲೇಬೇಳೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ.
ಬೇಯಿಸಿದ ಕುಂಬಳಕಾಯಿ ಹೋಳಿಗೆ ರುಬ್ಬಿದ ಮಿಶ್ರಣ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 3 - 4 ನಿಮಿಷ ಕುದಿಸಿ, ಉರಿಯನ್ನು ಆಫ್ ಮಾಡಿ.
ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಕರಿಬೇವಿನ ಒಗ್ಗರಣೆ ಮಾಡಿ ಮಜ್ಜಿಗೆ ಹುಳಿಗೆ ಸೇರಿಸಿ.
ಮಜ್ಜಿಗೆ ಹುಳಿ ಸ್ವಲ್ಪ ಬಿಸಿಯಿರುವಾಗಲೇ ಅದಕ್ಕೆ ಮಜ್ಜಿಗೆ ಸೇರಿಸಿ ಮಿಕ್ಸ್ ಮಾಡಿಕೊಂಡು ಅನ್ನದೊಡನೆ ಸರ್ವ್ ಮಾಡಿ.
ಟಿಪ್ಸ್:

- ಸಂಜೆಗೆ ಅಥವಾ ಮರುದಿನಕ್ಕೆ ಇಟ್ಟು ಬಳಸುವುದಾದರೆ ಬೇಕಾದಷ್ಟೇ ಮಿಶ್ರಣಕ್ಕೆ ಮಜ್ಜಿಗೆ ಸೇರಿಸಿಕೊಂಡು ಬಳಸಿ. ಉಳಿದ ಮಜ್ಜಿಗೆ ಹುಳಿಯನ್ನು ಬೇಕಾದಾಗ ಬಿಸಿಮಾಡಿಕೊಂಡು ಮಜ್ಜಿಗೆ ಸೇರಿಸಿಕೊಳ್ಳಬಹುದು.
- ಕುಂಬಳಕಾಯಿಯ ಬದಲು ಸೀಮೆಬದನೆ, ಬದನೆಕಾಯಿ ಅಥವಾ ಸೌತೆಕಾಯಿಯನ್ನೂ ಬಳಸಬಹುದು.
- ನೆನೆಸಿದ ಕಡಲೆಯನ್ನು ರುಬ್ಬುವಾಗ ಸೇರಿಸುವುದರಿಂದ ಮಜ್ಜಿಗೆಹುಳಿ ದಪ್ಪಗಾಗುತ್ತದೆ. ಕಡ್ಲೆಬೇಳೆಯ ಬದಲು ಪುಟಾಣಿ ಬೇಳೆಯನ್ನೂ ಬಳಸಬಹುದು.
ಕೂಸೆ, ಕಾಪಿ ಮಾಡಿ geervaanee@gmail.com ಗೆ ಕಳಸು ಮುಂದಿನ ಸಂಚಿಕೆ ಹವ್ಯಕದಲ್ಲಿ ಹಾಕ್ವ.
ಪ್ರತ್ಯುತ್ತರಅಳಿಸಿಧನ್ಯವಾದಗಳು, ನಿಮ್ಮ ಈ ಮೇಲ್ ಗೆ ರೆಸಿಪಿ ಕಳಿಸ್ತಿ :)
ಅಳಿಸಿಈ recipe ಹಾಕಿದ್ದಕ್ಕೆ ಧನ್ಯವಾದಗಳು
ಪ್ರತ್ಯುತ್ತರಅಳಿಸಿThanks for your comments
ಅಳಿಸಿ