Click here for English version.
ಕಳೆದ ತಿಂಗಳು ನಮ್ಮದೊಂದು ಫ್ಯಾಮಿಲಿ ಮೀಟ್ ಇತ್ತು. ಅವರೆಲ್ಲ ನನ್ನ ಕಸಿನ್ ಮನೆಗೆ ಬರುವವರಿದ್ದರಿಂದ ನಾನು ಅವರೆಲ್ಲರಿಗಾಗಿ ಏನಾದರೂ ಸ್ವೀಟ್ ತಯಾರಿಸೋಣವೆಂದು ಯೋಚಿಸಿದೆ. ನನ್ನ ಆಂಧ್ರ ಫ್ರೆಂಡ್ ಒಬ್ಬಳು ಅವರ ಕಡೆ ತಯಾರಿಸುವ 'ಕಾಜ' ಎಂಬ ಸ್ವೀಟ್ ತುಂಬ ಚೆನ್ನಾಗಿರುವುದೆಂದು ಯಾವಾಗಲೂ ಹೇಳುತ್ತಿದ್ದಳು. ಈ ಹೊಸ ಸ್ವೀಟ್ ಎಲ್ಲರಿಗೂ ಇಷ್ಟವಾಗಬಹುದೆಂದು ಯೋಚಿಸಿ, ಕೊನೆಗೆ ಅದನ್ನೇ ತಯಾರಿಸಿದ್ದಾಯಿತು!
ಈ 'ಕಾಜ' ಸ್ವೀಟ್ ನಲ್ಲೂ ಎರಡ್ಮೂರು ಬಗೆಗಳಿವೆ. ನಾನು ತಯಾರಿಸಿದ್ದು ಕಾಕಿನಾಡ ಕಾಜ. ಇದು ರುಚಿಯಲ್ಲಿ ಸ್ವಲ್ಪಮಟ್ಟಿಗೆ ನಾವು ಕರ್ನಾಟಕದಲ್ಲಿ ತಯಾರಿಸುವ 'ಸಾಟೆ'ಯನ್ನು ಹೋಲುತ್ತದೆ. 'ಕಾಜ'ವನ್ನು ಸ್ವೀಟ್ ನಂತೆಯೂ ಬಳಸಬಹುದು ಇಲ್ಲವೇ ಟೀ ಯೊಡನೆ ಸ್ನ್ಯಾಕ್ಸ್ ನಂತೆಯೂ ಬಳಸಬಹುದು. ತಯಾರಿಸಿದ ಒಂದು ವಾರದವರೆಗೂ ಇದು ಫ್ರೆಶ್ ಆಗಿರುತ್ತದೆ.
ತಯಾರಿಸಲು ಬೇಕಾಗುವ ಸಮಯ: 1 ರಿಂದ 1 1/2 ಘಂಟೆ
ಹಿಟ್ಟು ನೆನೆಯಲು ಬೇಕಾಗುವ ಸಮಯ: 1 ಘಂಟೆ
ಈ ಅಳತೆಯಿಂದ ಸುಮಾರು 45 ಕಾಜಗಳನ್ನು ತಯಾರಿಸಬಹುದು
ಬೇಕಾಗುವ ಸಾಮಗ್ರಿಗಳು:
ಮೈದಾಹಿಟ್ಟು - 400 ಗ್ರಾಂ
ತುಪ್ಪ - 3ರಿಂದ 4 ಟೇಬಲ್ ಚಮಚ
ಚಿಟಿಕೆ ಉಪ್ಪು
ನೀರು (ಹಿಟ್ಟನ್ನು ಕಲಸಲು) - ಅಂದಾಜು 150 ml
ಸಕ್ಕರೆ - 400 ಗ್ರಾಂ
ಏಲಕ್ಕಿಪುಡಿ - 1/4 ಚಮಚ
ಕರಿಯಲು ಎಣ್ಣೆ
ಕರಿಯಲು ಎಣ್ಣೆ
ಮಾಡುವ ವಿಧಾನ:
ಮೈದಾಹಿಟ್ಟಿಗೆ ತುಪ್ಪ ಹಾಕಿ ಚೆನ್ನಾಗಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಚಿಟಿಕೆ ಉಪ್ಪು, ಅಗತ್ಯವಿರುವಷ್ಟು ನೀರು ಸೇರಿಸಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಹಿಟ್ಟನ್ನು ತಯಾರಿಸಿಕೊಳ್ಳಿ.
ಹಿಟ್ಟನ್ನು ಒಂದು ಘಂಟೆಕಾಲ ಹಾಗೇ ಮುಚ್ಚಿಟ್ಟು ಸೆಟ್ ಆಗಲು ಬಿಡಿ.
ಸಕ್ಕರೆಗೆ ಸ್ವಲ್ಪ ನೀರು ಸೇರಿಸಿ ಕುದಿಸಿ ಒಂದೆಳೆ ಪಾಕ ಮಾಡಿಕೊಳ್ಳಿ. ಇದಕ್ಕೆ ಏಲಕ್ಕಿಪುಡಿ ಸೇರಿಸಿ ಮುಚ್ಚಿಡಿ.
ತಯಾರಿಸಿದ ಹಿಟ್ಟನ್ನು ಲಟ್ಟಣಿಗೆ ಉಪಯೋಗಿಸಿ ಚಪಾತಿಯಷ್ಟು ತೆಳ್ಳಗೆ, ದೊಡ್ಡದಾಗಿ ಆಯತಾಕಾರಕ್ಕೆ ಲಟ್ಟಿಸಿ. ಲಟ್ಟಿಸುವಾಗ ಒಣ ಹಿಟ್ಟನ್ನು ಧಾರಾಳವಾಗಿ ಬಳಸಿ.
ಲಟ್ಟಿಸಿದ ರೊಟ್ಟಿಯ ಅಂಚುಗಳನ್ನು ಕಟ್ ಮಾಡಿ, ಸರಿಯಾದ ಆಕಾರಕ್ಕೆ ತನ್ನಿ. ನಂತರ ರೊಟ್ಟಿಯನ್ನು (ಚಿತ್ರದಲ್ಲಿ ತೋರಿಸಿದಂತೆ) ಆದಷ್ಟು ಬಿಗಿಯಾಗಿ ಸುರುಳಿ ಮಾಡಿ.
ರೊಟ್ಟಿ ಸುರುಳಿಯನ್ನು ಸುಮಾರು 1 1/2 cm ಅಗಲದ ಚೂರುಗಳಾಗಿ ಕತ್ತರಿಸಿಕೊಳ್ಳಿ.
ಕಟ್ ಮಾಡಿದ ಚೂರುಗಳನ್ನು ಲಟ್ಟಣಿಗೆಯಿಂದ ಸ್ವಲ್ಪ ಫ್ಲಾಟ್ ಮಾಡಿಕೊಳ್ಳಿ.
ಈ ಚೂರುಗಳನ್ನು ಕಡಿಮೆ ಉರಿಯಲ್ಲಿ ಹೊಂಬಣ್ಣಕ್ಕೆ ಕರಿಯಿರಿ. ಇವು ಚೆನ್ನಾಗಿ ಗರಿಯಾಗಲು ಸುಮಾರು 15 ನಿಮಿಷ ತೆಗೆದುಕೊಳ್ಳುತ್ತದೆ.
ಕರಿದ 'ಕಾಜ'ಗಳನ್ನು ಟಿಶ್ಯೂ ಪೇಪರ್ ಮೇಲೆ ಒಂದು ನಿಮಿಷ ಹರವಿ. ನಂತರ ಇವನ್ನು ಸಕ್ಕರೆ ಪಾಕದಲ್ಲಿ 5 ನಿಮಿಷ ನೆನೆಸಿ ತೆಗೆದು ಆರಲು ಬಿಡಿ.
Super.. looks so yumm and easy.. Again a nice recipe..
ಪ್ರತ್ಯುತ್ತರಅಳಿಸಿ-Shree
Thanks a lot Shree :)
ಅಳಿಸಿThanks madam nice sweet :)
ಪ್ರತ್ಯುತ್ತರಅಳಿಸಿthanks mam
ಪ್ರತ್ಯುತ್ತರಅಳಿಸಿfor my daughter's school competition i wl try this
U're welcome Sunitha..will be happy to hear your feedback :)
ಅಳಿಸಿCheers!
Vani