Click here for English version.
ಗಿಣ್ಣು ಎಂದರೆ ಸಾಮಾನ್ಯವಾಗಿ ಹಳ್ಳಿಗಳ ಕಡೆ ಬೆಳೆದವರಿಗೆ ಪರಿಚಿತವಾದ ಸಿಹಿ ತಿನಿಸು. ಆಕಳು ಅಥವಾ ಎಮ್ಮೆ ಕರು ಹಾಕಿದಾಗ ಅದರ ಮೊದಲ ದಿನದ ಹಾಲಿನಿಂದ ಈ ಸಿಹಿ ತಿಂಡಿಯನ್ನು ತಯಾರಿಸುತ್ತಾರೆ. ನಮ್ಮ ಕಡೆ ಇದನ್ನು ಬಟ್ಟಲು ಗಿಣ್ಣು ಎಂದು ಕರೆಯುತ್ತಾರೆ. ಬೇರೆ ಬೇರೆ ಭಾಷೆಗಳಲ್ಲಿ ಇದನ್ನು ಜುನ್ನು, ಪೋಸು, ಖಾರ್ವಾಸ್ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ.
ನಮ್ಮ ಮನೆಯಲ್ಲಿ ನಮಗಿಬ್ಬರಿಗೂ ಗಿಣ್ಣು ಎಂದರೆ ತುಂಬ ಇಷ್ಟ. ಆದರೆ ಊರಿಗೆ ಬರುವುದು ಅಪರೂಪವಾದ ಕಾರಣ ಗಿಣ್ಣು ಸವಿಯುವ ಅವಕಾಶ ಸಿಗುವುದು ಕಡಿಮೆ. ಹೈದರಾಬಾದ್ ನಲ್ಲಿರುವ ನನ್ನ ಅಕ್ಕ ಅಲ್ಲಿ ಅಂಗಡಿಯಲ್ಲಿ ಸಿಗುವ ಗಿಣ್ಣು ಮಿಕ್ಸ್ ಬಳಸಿ ಬೇಕೆನಿಸಿದಾಗಲೆಲ್ಲ ಗಿಣ್ಣು ತಯಾರಿಸುತ್ತಿರುತ್ತಾಳೆ. ಬೆಂಗಳೂರಿನಲ್ಲಿ ನಾನು ಅಂಥ ಮಿಕ್ಸ್ ಗಾಗಿ ಅನೇಕ ಸುಪರ್ ಮಾರ್ಕೆಟ್ ಗಳಲ್ಲಿ ಹುಡುಕಿದರೂ ಇಲ್ಲೆಲ್ಲೂ ಅದು ಸಿಗಲಿಲ್ಲ. ಸಾದಾ ಹಾಲಿನಿಂದ ಗಿಣ್ಣು ತಯಾರಿಸಲು ಎರಡ್ಮೂರು ಬಾರಿ ಪ್ರಯತ್ನಿಸಿದರೂ ಅದು ನಮಗೆ ಅಷ್ಟೇನೂ ಇಷ್ಟವಾಗಲಿಲ್ಲ. ಹೀಗಾಗಿ ಊರಿನಲ್ಲಿ ತಯಾರಿಸುವ ಗಿಣ್ಣು ಸವಿಯಲು ಕಾಯುತ್ತಿರುತ್ತೇವೆ!
ಕಳೆದ ವಾರ ಅಮ್ಮನ ಮನೆಯಲ್ಲಿ ಗಿಣ್ಣು ತಯಾರಿಸಿದಾಗ ನನಗೆ ಅದನ್ನು ಸವಿಯುವ ಅವಕಾಶ ಸಿಕ್ಕಿತು. ಗಿಣ್ಣು ತಯಾರಿಸುವುದು ಬಹಳ ಸುಲಭ; ತಯಾರಿಸಲು ಬೇಕಾಗುವ ಸಮಯವೂ ಬಹಳ ಕಡಿಮೆ. ಗಿಣ್ಣು ಹಾಲು ಸಿಕ್ಕಾಗ ಈ ರೆಸಿಪಿ ಟ್ರೈ ಮಾಡಿ ನೋಡಿ!
ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಡಿಫಿಕಲ್ಟಿ ಲೆವೆಲ್ : ಸುಲಭ
ಈ ಅಳತೆಯಿಂದ 10 ಗಿಣ್ಣು ಪೀಸ್ ಗಳನ್ನು ತಯಾರಿಸಬಹುದು
ಬೇಕಾಗುವ ಸಾಮಗ್ರಿಗಳು:
ಮಾಡುವ ವಿಧಾನ:
ಟಿಪ್ಸ್:
ಕಳೆದ ವಾರ ಅಮ್ಮನ ಮನೆಯಲ್ಲಿ ಗಿಣ್ಣು ತಯಾರಿಸಿದಾಗ ನನಗೆ ಅದನ್ನು ಸವಿಯುವ ಅವಕಾಶ ಸಿಕ್ಕಿತು. ಗಿಣ್ಣು ತಯಾರಿಸುವುದು ಬಹಳ ಸುಲಭ; ತಯಾರಿಸಲು ಬೇಕಾಗುವ ಸಮಯವೂ ಬಹಳ ಕಡಿಮೆ. ಗಿಣ್ಣು ಹಾಲು ಸಿಕ್ಕಾಗ ಈ ರೆಸಿಪಿ ಟ್ರೈ ಮಾಡಿ ನೋಡಿ!
ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಡಿಫಿಕಲ್ಟಿ ಲೆವೆಲ್ : ಸುಲಭ
ಈ ಅಳತೆಯಿಂದ 10 ಗಿಣ್ಣು ಪೀಸ್ ಗಳನ್ನು ತಯಾರಿಸಬಹುದು
ಬೇಕಾಗುವ ಸಾಮಗ್ರಿಗಳು:
- ಕರು ಹಾಕಿದ ಹಸು / ಎಮ್ಮೆಯ ಮೊದಲ ದಿನದ ಹಾಲು - 3 ಕಪ್ (ಟಿಪ್ಸ್ ನೋಡಿ)
- ಸಕ್ಕರೆ - 2 ಕಪ್
- ಕೇಸರಿ ದಳಗಳು - 15
ಮಾಡುವ ವಿಧಾನ:
- ಹಾಲಿಗೆ ಸಕ್ಕರೆ ಸೇರಿಸಿ ಸಕ್ಕರೆ ಪೂರ್ತಿ ಕರಗುವವರೆಗೆ ಚೆನ್ನಾಗಿ ಕದಡಿ.
- ಪ್ರೆಷರ್ ಕುಕ್ಕರ್ ನ ತಳಕ್ಕೆ ಸ್ವಲ್ಪ ನೀರು ಹಾಕಿ ಕಾಯಲಿಡಿ.
- ಹಾಲನ್ನು ಪ್ರೆಷರ್ ಕುಕ್ಕರ್ ಒಳಗೆ ಇಡಬಹುದಾದ ಅಗಲವಾದ ಪಾತ್ರೆಯಲ್ಲಿ 1 ಇಂಚು ದಪ್ಪಗೆ ಬರುವಂತೆ ಹಾಕಿ, ಕೇಸರಿ ದಳಗಳನ್ನು ಸೇರಿಸಿ.
- ಪಾತ್ರೆಯನ್ನು ಕುಕ್ಕರ್ ನಲ್ಲಿಟ್ಟು ಎರಡು ವಿಸಿಲ್ ಆಗುವವರೆಗೆ ಗಿಣ್ಣನ್ನು ಬೇಯಿಸಿ.
- ಕುಕ್ಕರ್ ಸ್ವಲ್ಪ ತಣ್ಣಗಾದ ನಂತರ ಪಾತ್ರೆಯನ್ನು ಹೊರತೆಗೆದು ಗಿಣ್ಣುವನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಸವಿಯಿರಿ!
ಟಿಪ್ಸ್:
- ಕರು ಹಾಕಿದ ತಕ್ಷಣ ಕರೆದ ಎಮ್ಮೆಯ ಹಾಲಾದರೆ ಹಾಲಿಗೆ ಅಷ್ಟೇ ಪ್ರಮಾಣದ ನೀರನ್ನು ಸೇರಿಸಿ ಗಿಣ್ಣು ತಯಾರಿಸಿ. ಇಲ್ಲದಿದ್ದರೆ ಗಿಣ್ಣು ತುಂಬಾ ಗಟ್ಟಿಯಾಗಿಬಿಡುತ್ತದೆ. ಎರಡನೇ ಸಾರಿ ಕರೆದ ಹಾಲಾದರೆ ನೀರು ಸೇರಿಸುವುದು ಬೇಡ. ಆಕಳ ಹಾಲಿನಿಂದ ಗಿಣ್ಣು ತಯಾರಿಸುವಾಗ ನೀರು ಸೇರಿಸಬೇಡಿ.
- ಹಾಲಿನಲ್ಲಿ ಸಕ್ಕರೆ ಪೂರ್ತಿಯಾಗಿ ಕರಗಿದ ನಂತರವೇ ಅದನ್ನು ಬೇಯಲಿಡಿ. ಬೇಯಲಿಟ್ಟ ನಂತರ ಸಕ್ಕರೆ ಕರಗದೆ ಹಾಗೇ ಉಳಿದುಬಿಡುತ್ತದೆ.
- ಕೇಸರಿ ದಳದ ಬದಲು ಏಲಕ್ಕಿ ಪುಡಿ ಅಥವಾ ಜಾಯಿಕಾಯಿ ಸೇರಿಸಿಯೂ ಗಿಣ್ಣು ತಯಾರಿಸಬಹುದು.
- ಸಕ್ಕರೆಯ ಬದಲು ಬೆಲ್ಲ ಬಳಸಿಯೂ ಗಿಣ್ಣು ತಯಾರಿಸುತ್ತಾರೆ.
Ginnu reminded me of my ajji's home in Hassan coffee estates. We used eat those yummy sweets when we were children visiting her during summer holidays :)
ಪ್ರತ್ಯುತ್ತರಅಳಿಸಿಗಿಣ್ಣು ಹಾಲಿನ ಸಿಹಿ ತಿನಿಸನ್ನು ಹೋಲುವ ಬೇರೆ ತಿನಿಸನ್ನು ತಿಳಿಸಿ.
ಅಳಿಸಿಒಂದು ಲಕ್ಷಕ್ಕೂ ಹೆಚ್ಚು ಬಾರಿ ಓದುಗರನ್ನು ಸೆಳೆದ ನಿಮ್ಮ ಬ್ಲಾಗ್ ನ ಪಯಣಕ್ಕೆ ಅಭಿನಂದನೆಗಳು. ರೆಸಿಪಿ ಮುಂದುವರಿಯುತ್ತಿರಲಿ
ಪ್ರತ್ಯುತ್ತರಅಳಿಸಿHats off to your passion for cooking and clicking Vanakka .... not only awesome recipes, beautiful photos too :)
ಪ್ರತ್ಯುತ್ತರಅಳಿಸಿThank you all :)
ಪ್ರತ್ಯುತ್ತರಅಳಿಸಿThank you for all your valuable information.
ಪ್ರತ್ಯುತ್ತರಅಳಿಸಿvery simple and easy to do......Thank u
ಪ್ರತ್ಯುತ್ತರಅಳಿಸಿ