Click here for English version.
ನಮ್ಮ ಮನೆಯಲ್ಲಿ ಪ್ರತಿ ವಾರ ತರಕಾರಿಗೆ ಹೋದಾಗ ತರುವ ಐಟಂ ಗಳಲ್ಲಿ ಸ್ವೀಟ್ ಕಾರ್ನ್ ಕೂಡ ಒಂದು. ಸಾಯಂಕಾಲದ ಸ್ನ್ಯಾಕ್ಸ್ ಅಥವಾ ಕೋಸಂಬರಿ ಇಲ್ಲವೇ ಸೂಪ್ - ಹೀಗೆ ಯಾವುದಾದರೊಂದು ವಿಧದಲ್ಲಿ ಇದು ಬಳಕೆಯಾಗುತ್ತಿರುತ್ತದೆ. ಮೊಳಕೆ ಕಾಳುಗಳು ಇದ್ದಾಗ ಅದರ ಜೊತೆ ಸ್ವೀಟ್ ಕಾರ್ನ್, ದಾಳಿಂಬೆ ಬೀಜ ಹಾಗೂ ನಮ್ಮಿಷ್ಟದ ತರಕಾರಿಗಳನ್ನು ಬಳಸಿ ಕೋಸಂಬರಿ ಅಥವಾ ಸಲಾಡ್ ಮಾಡಿದರೆ ತಿನ್ನಲು ಬಹಳ ಚೆನ್ನಾಗಿರುತ್ತದೆ. ಹಣ್ಣು, ತರಕಾರಿಗಳನ್ನು ತಿನ್ನಲು ಬೇಸರಿಸುವ ಮಕ್ಕಳಿಗೆ ಇಂಥ ಸಲಾಡ್ ಗಳನ್ನು ನೀಡಿದರೆ ಆರೋಗ್ಯಕ್ಕೂ ಒಳ್ಳೆಯದು!
ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು
ಸರ್ವಿಂಗ್ಸ್: 2 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಸುಲಭ
ಬೇಕಾಗುವ ಸಾಮಗ್ರಿಗಳು:
- ಮೊಳಕೆಯೊಡೆದ ಹೆಸರುಕಾಳು - 4 ಟೇಬಲ್ ಸ್ಪೂನ್
- ಮೊಳಕೆಯೊಡೆದ ನೆಲಗಡಲೆ (ಶೇಂಗಾ) - 4 ಟೇಬಲ್ ಸ್ಪೂನ್
- ಸ್ವೀಟ್ ಕಾರ್ನ್ - 4 ಟೇಬಲ್ ಸ್ಪೂನ್
- ದಾಳಿಂಬೆ ಬೀಜ - 4 ಟೇಬಲ್ ಸ್ಪೂನ್
- ತುರಿದ ಕ್ಯಾರೆಟ್ - 4 ಟೇಬಲ್ ಸ್ಪೂನ್
- ರುಚಿಗೆ ಉಪ್ಪು
ಮಾಡುವ ವಿಧಾನ:
- ಒಂದು ಮಿಕ್ಸಿಂಗ್ ಬೌಲ್ ನಲ್ಲಿ ಹೆಸರುಕಾಳು, ನೆಲಗಡಲೆ, ಸ್ವೀಟ್ ಕಾರ್ನ್, ದಾಳಿಂಬೆ, ಕ್ಯಾರೆಟ್ ತುರಿ - ಎಲ್ಲವನ್ನೂ ಸೇರಿಸಿ.
- ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
- ಖಾರಕ್ಕೆ ಬೇಕಿದ್ದರೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನೂ ಸೇರಿಸಬಹುದು.
- ತಯಾರಾದ ಸಲಾಡ್ ನ್ನು ಸರ್ವಿಂಗ್ ಬೌಲ್ ಗೆ ಹಾಕಿಕೊಂಡು ಸವಿಯಿರಿ!
ಟಿಪ್ಸ್:
- ಈ ಸಲಾಡ್ ನ್ನು ನಿಮ್ಮಿಷ್ಟದ ಯಾವುದೇ ತರಕಾರಿ ಹಾಗೂ ಮೊಳಕೆ ಕಾಳುಗಳನ್ನು ಸೇರಿಸಿ ತಯಾರಿಸಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)