Click here for English version.
ನಾವು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ಇನ್ನೂ ಎರಡು ವರ್ಷದ ತುಂಬದ ನನ್ನ ಮಗಳಿಗೆ ಇದು ಎರಡನೇ ದೀಪಾವಳಿ ಹಬ್ಬ. ನಾವು ಹಿಂದೂ ಹಬ್ಬಗಳಾದ ನಾಗರ ಪಂಚಮಿ, ಗಣೇಶ ಚತುರ್ಥಿ, ನವರಾತ್ರಿ, ಇತ್ಯಾದಿಗಳನ್ನು ಆಚರಿಸಿದರೂ ಅವಳಿಗೆ ಯಾವ ಹಬ್ಬವೂ ದೀಪಾವಳಿಯಷ್ಟು ಸ್ಪೆಷಲ್ ಅನಿಸಿರಲಿಲ್ಲ. ವಿವಿಧ ತಿಂಡಿಗಳು, ಪೂಜೆ, ಸಂಜೆಯ ವೇಳೆ ಮನೆಯಲ್ಲಿ ಮೋಂಬತ್ತಿಗಳನ್ನು ಹಚ್ಚಿದ್ದು, ಇವೆಲ್ಲ ಅವಳಿಗೆ ಬಹಳ ಇಷ್ಟವಾಯಿತು. ಹಬ್ಬದ ಮರುದಿನ ನಾನು ಅವಳನ್ನು 'ಪುಟ್ಟಾ, ಹಬ್ಬ ಹೇಗಿತ್ತು?' ಎಂದು ಕೇಳಿದ್ದಕ್ಕೆ, 'ಅಮ್ಮಾ, ನಾವು ಇಂದೂ ಹಬ್ಬ ಮಾಡೋಣ' ಎಂದಳು ನನ್ನ ಮಗಳು! ಇನ್ನೊಂದು ದಿನ ಹಬ್ಬ ಮಾಡೋಣ ಎಂದು ಹೇಗೋ ಸಮಾಧಾನ ಮಾಡಿದ್ದಾಯಿತು ಅವಳನ್ನು.
ನನ್ನ ಅಮ್ಮನ ಮನೆಯಲ್ಲಿ ಸಾಮಾನ್ಯವಾಗಿ ದೀಪಾವಳಿ ಹಬ್ಬಕ್ಕೆ ಗೋಧಿಯ ಹಲ್ವಾ ತಯಾರಿಸುತ್ತಾರೆ. ಈ ಹಲ್ವಾ ಎಷ್ಟು ರುಚಿಯೋ ಹಾಗೇ ಅದನ್ನು ತಯಾರಿಸುವುದೂ ಬಹಳ ಕಷ್ಟದ ಕೆಲಸವೇ ಸರಿ! ಗೋಧಿ ಕಾಳುಗಳನ್ನು ಎರಡು ದಿನ ಮೊದಲೇ ನೆನೆಸಿಟ್ಟು ನಂತರ ಅದನ್ನು ನೀರು ಸೇರಿಸಿ ರುಬ್ಬಿ ಹಿಟ್ಟು ತಯಾರಿಸಿಕೊಳ್ಳುತ್ತಾರೆ. ಆ ಹಿಟ್ಟನ್ನು ಬಟ್ಟೆಯಲ್ಲಿ ಶೋಧಿಸಿ, ಸಿಗುವ ನುಣ್ಣಗಿನ ಹಿಟ್ಟನ್ನು ಬಾಣಲೆಯಲ್ಲಿ ಹಾಕಿಕೊಂಡು ತಾಸುಗಟ್ಟಲೆ ಒಲೆಯಮೇಲಿಟ್ಟು ಕೈಯಾಡಿಸುತ್ತ..ಅಬ್ಬ! ಹಲ್ವಾ ತಯಾರಾಗುವಷ್ಟರಲ್ಲಿ ತಯಾರಿಸುವವರು ಸುಸ್ತು!
ಇಷ್ಟೆಲ್ಲಾ ಕಷ್ಟವಿಲ್ಲದೆ ಮೈದಾ ಹಿಟ್ಟು ಬಳಸಿ ಅಂಥದೇ ರುಚಿಕರ ಹಲ್ವಾ ತಯಾರಿಸಬಹುದೆಂದು ಗೊತ್ತಾಗಿದ್ದು ನನ್ನ ಅಕ್ಕನಿಂದ. ಅಡುಗೆ ಪುಸ್ತಕವೊಂದರಲ್ಲಿ ಸಿಕ್ಕ ಮೈದಾ ಹಲ್ವಾ ರೆಸಿಪಿಯನ್ನು ನನ್ನ ಅಕ್ಕ ಟ್ರೈ ಮಾಡಿದಾಗ ಅದು ಎಷ್ಟು ಚೆನ್ನಾಗಿ ಬಂತೆಂದರೆ ಎಲ್ಲರೂ ಅದು ಗೋಧಿಯಿಂದ ತಯಾರಿಸಿದ್ದು ಎಂದೇ ಭಾವಿಸಿದ್ದರು! ಅಂದಿನಿಂದ ನಮ್ಮ ಮನೆಗಳಲ್ಲಿ ಈ ಹಲ್ವಾ ರೆಸಿಪಿ ಬಹಳ ಜನಪ್ರಿಯವಾಗಿದೆ.
ಈ ವರ್ಷ ದೀಪಾವಳಿ ಹಬ್ಬಕ್ಕೆ ನಾನು ಮೈದಾ ಹಲ್ವಾ ತಯಾರಿಸಿದ್ದೆ. ರುಚಿಯಾದ ಹಲ್ವಾವನ್ನು ಎಲ್ಲರೂ ಇಷ್ಟಪಟ್ಟು ತಿಂದೆವು. ತಯಾರಿಸಲು ಸ್ವಲ್ಪ ಶ್ರಮವೆನಿಸಿದರೂ ಇದರ ರುಚಿ ಮಾತ್ರ ಬೊಂಬಾಟ್!
ತಯಾರಿಸಲು ಬೇಕಾಗುವ ಸಮಯ: 35 - 40 ನಿಮಿಷಗಳು
ಈ ಅಳತೆಯಿಂದ ಸುಮಾರು 33 ಹಲ್ವಾ ಪೀಸ್ ಗಳನ್ನು ತಯಾರಿಸಬಹುದು
ಡಿಫಿಕಲ್ಟಿ ಲೆವೆಲ್: ಕಷ್ಟಕರ
ಬೇಕಾಗುವ ಸಾಮಗ್ರಿಗಳು:
ತಯಾರಿಸುವ ವಿಧಾನ:
ಟಿಪ್ಸ್:

- ಮೈದಾಹಿಟ್ಟು - 1 ದೊಡ್ಡ ಕಪ್
- ಸಕ್ಕರೆ - 1 1/2 ಕಪ್
- ಚಿಟಿಕೆ ಉಪ್ಪು
- ನೀರು - 1 3/4 ಕಪ್
- ತುಪ್ಪ - 1/2 ಕಪ್ ಅಥವಾ ಸ್ವಲ್ಪ ಜಾಸ್ತಿ
- ಗೋಡಂಬಿ ಚೂರುಗಳು - 2 ಟೇಬಲ್ ಸ್ಪೂನ್
- ಒಣದ್ರಾಕ್ಷಿ - 2 ರಿಂದ 3 ಟೇಬಲ್ ಸ್ಪೂನ್
- ಕೇಸರಿ ದಳಗಳು - 1/2 ಟೀ ಸ್ಪೂನ್ (ಅಥವಾ 3/4 ಟೀ ಸ್ಪೂನ್ ಏಲಕ್ಕಿ ಪುಡಿ)
ತಯಾರಿಸುವ ವಿಧಾನ:
- ಕೇಸರಿ ದಳಗಳನ್ನು 2 ಟೇಬಲ್ ಸ್ಪೂನ್ ನಷ್ಟು ಬಿಸಿನೀರಿನಲ್ಲಿ ನೆನೆಸಿಡಿ.
- ಮೈದಾ ಹಿಟ್ಟಿಗೆ 1 1/4 ಕಪ್ ನಷ್ಟು ನೀರು ಸೇರಿಸಿ ಗಂಟಿಲ್ಲದಂತೆ ಕದಡಿ ದೋಸೆ ಹಿಟ್ಟಿನ ಹದಕ್ಕೆ ಹಿಟ್ಟನ್ನು ತಯಾರಿಸಿಕೊಳ್ಳಿ.
- ಗೋಡಂಬಿ ಚೂರುಗಳು ಮತ್ತು ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ.
- ಒಂದು ದಪ್ಪ ತಳದ ಬಾಣಲೆಯಲ್ಲಿ ಸಕ್ಕರೆ ಹಾಕಿ ಅದಕ್ಕೆ ಅರ್ಧ ಕಪ್ ನಷ್ಟು ನೀರು ಸೇರಿಸಿ ಕುದಿಯಲಿಡಿ.
- ಸಕ್ಕರೆ ಎರಡೆಳೆ ಪಾಕ ಬಂದಾಗ ಇದಕ್ಕೆ ಮೈದಾ ಹಿಟ್ಟಿನ ಮಿಶ್ರಣ ಸೇರಿಸಿ, ಎರಡು ನಿಮಿಷ ಬಿಡದೆ ಕೈಯಾಡಿಸಿ.
- ನಂತರ ಇದಕ್ಕೆ ಕೇಸರಿ ದಳಗಳು (ನೀರು ಸಹಿತ), ಉಪ್ಪು ಹಾಗೂ ತುಪ್ಪ ಸೇರಿಸಿ ಸಣ್ಣ ಉರಿಯಲ್ಲಿ ಬಿಡದೆ ಕೈಯಾಡಿಸುತ್ತಿರಿ.
- ಹಲ್ವಾ ಮಿಶ್ರಣ ನಿಧಾನವಾಗಿ ದಪ್ಪಗಾದಂತೆ ಮಿಶ್ರಣ ಕೈಯಾಡಿಸುವುದು ಸ್ವಲ್ಪ ಕಷ್ಟವೆನಿಸುತ್ತದೆ. ಮಿಶ್ರಣ ಪಾತ್ರೆಯ ತಳ ಬಿಡತೊಡಗಿದಾಗ ಒಂದು ಸ್ಪೂನ್ ನಷ್ಟು ಹಲ್ವಾ ಮಿಶ್ರಣವನ್ನು ಹೊರಗೆ ತೆಗೆದು ತಣಿಸಿ, ಉಂಡೆ ಕಟ್ಟುವ ಹದಕ್ಕೆ ಬಂದಿದೆಯೋ ನೋಡಿ.
- ಉರಿಯಿಂದ ಮಿಶ್ರಣವನ್ನು ಇಳಿಸುವ ಮೊದಲು ಗೋಡಂಬಿ, ದ್ರಾಕ್ಷಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
- ಹಲ್ವಾ ಮಿಶ್ರಣವನ್ನು ತುಪ್ಪ ಸವರಿದ ಪ್ಲೇಟ್ ನಲ್ಲಿ ಸಮತಟ್ಟಾಗಿ ಹರವಿ. ಹಲ್ವಾ ಪೂರ್ತಿ ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.
ಟಿಪ್ಸ್:
- ತುಪ್ಪವನ್ನು ಇಷ್ಟಪಡುವವರು ಇಲ್ಲಿ ಹೇಳಿದ ಅಳತೆಗಿಂತ ಸ್ವಲ್ಪ ಹೆಚ್ಚು ಬಳಸಬಹುದು. ಧಾರಾಳವಾಗಿ ತುಪ್ಪ ಬಳಸಿದರೆ ಹಲ್ವಾ ಇನ್ನೂ ರುಚಿಯಾಗಿರುತ್ತದೆ.
- ಹಲ್ವಾವನ್ನು ಫ್ರಿಜ್ ನಲ್ಲಿಟ್ಟು ಬಳಸಿದರೆ ರುಚಿ ಬದಲಾಗುತ್ತದೆ. ಸಾಧ್ಯವಾದಷ್ಟು ಫ್ರಿಜ್ ನಲ್ಲಿಡದೆ ಹಾಗೇ ಬಳಸಿದರೆ ಉತ್ತಮ.
Tried this yesterday, came out very well. And my son is liking it!
ಪ್ರತ್ಯುತ್ತರಅಳಿಸಿThanks for easy recipe for godhi halwa!