ಬೇಸಿಗೆ ಕಾಲದಲ್ಲಿ ಮಿಲ್ಕ್ ಶೇಕ್, ಜ್ಯೂಸ್, ಸ್ಮೂಥಿ, ಪಾನಕ, ಲಸ್ಸಿ ಇತ್ಯಾದಿ ತಂಪು ಪಾನೀಯಗಳು ಕುಡಿಯಲು ಹಿತವಾಗಿರುತ್ತವೆ. ನಾನು ಸಾಮಾನ್ಯವಾಗಿ ಆಯಾ ಸೀಜನ್ ನಲ್ಲಿ ಸಿಗುವ ಫ್ರೆಶ್ ಹಣ್ಣುಗಳನ್ನು ಬಳಸಿ ಜ್ಯೂಸ್, ಸ್ಮೂಥಿ ಇತ್ಯಾದಿಗಳನ್ನು ಮನೆಯಲ್ಲಿ ತಯಾರಿಸುತ್ತಿರುತ್ತೇನೆ. ಈಗ ಮಾವಿನಹಣ್ಣಿನ ಸೀಜನ್ ನಡೆಯುತ್ತಿರುವುದರಿಂದ ತಾಜಾ ಮಾವಿನಹಣ್ಣಿನ ಮಿಲ್ಕ್ ಷೇಕ್, ಜ್ಯೂಸ್, ಇತ್ಯಾದಿಗಳನ್ನು ತಯಾರಿಸುವುದು ಸಾಮಾನ್ಯವಾಗಿದೆ.
ಮಾವಿನ ಪ್ರಿಯರಿಗೆ ಮಾವಿನ ಹಣ್ಣಿನಿಂದ ಏನನ್ನೇ ತಯಾರಿಸಿದರೂ ಅದು ರುಚಿಯಾಗೇ ಇರುತ್ತದೆ. ನನ್ನ ಮಗಳಂತೂ ಮಾವಿನ ಮಿಲ್ಕ್ ಶೇಕ್ ತಯಾರಿಸುವುದನ್ನೇ ಕಾಯುತ್ತಿರುತ್ತಾಳೆ. ಸುಲಭದಲ್ಲಿ ತಯಾರಿಸಬಹುದಾದ ಈ ಮಿಲ್ಕ್ ಶೇಕ್ ಬಹಳ ರುಚಿ ಕೂಡ!
ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು
ಜ್ಯೂಸ್ ತಣ್ಣಗಾಗಲು ಬೇಕಾಗುವ ಸಮಯ: 1 ಘಂಟೆ
ಜ್ಯೂಸ್ ತಣ್ಣಗಾಗಲು ಬೇಕಾಗುವ ಸಮಯ: 1 ಘಂಟೆ
ಸರ್ವಿಂಗ್ಸ್: 3
ಡಿಫಿಕಲ್ಟಿ ಲೆವೆಲ್: ಸುಲಭ
ಬೇಕಾಗುವ ಸಾಮಗ್ರಿಗಳು:
- 2 ಮೀಡಿಯಮ್ ಸೈಜಿನ ಮಾವಿನಹಣ್ಣು
- ಸಕ್ಕರೆ - 5 ಟೇಬಲ್ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
- ಹಾಲು - 300 ml (ಟಿಪ್ಸ್ ನೋಡಿ)
- ನೀರು - 100 ml
- ಉಪ್ಪು - ಒಂದು ದೊಡ್ಡ ಚಿಟಿಕೆ
ತಯಾರಿಸುವ ವಿಧಾನ:
- ಮಾವಿನಹಣ್ಣಿನ ಸಿಪ್ಪೆ ತೆಗೆದು ಮೀಡಿಯಂ ಸೈಜಿನ ಚೂರುಗಳಾಗಿ ಹೆಚ್ಚಿಕೊಳ್ಳಿ.
- ಹೆಚ್ಚಿದ ಮಾವಿನ ಹೋಳುಗಳನ್ನು ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು ಚಿಟಿಕೆ ಉಪ್ಪು ಸೇರಿಸಿ ಮಿಕ್ಸಿ ಅಥವಾ ಬ್ಲೆಂಡರ್ ನಲ್ಲಿ ನುಣ್ಣಗೆ ತಿರುವಿ. ರುಬ್ಬುವಾಗ ಬೇಕಿದ್ದರೆ ಸ್ವಲ್ಪ ಹಾಲು ಸೇರಿಸಿಕೊಳ್ಳಿ.
- ಮಿಶ್ರಣ ನುಣ್ಣಗಾದ ನಂತರ ಅದಕ್ಕೆ ಹಾಲು, ಸ್ವಲ್ಪ ನೀರು ಸೇರಿಸಿ ಎಲ್ಲವೂ ಚೆನ್ನಾಗಿ ಮಿಕ್ಸ್ ಆಗುವಂತೆ ಮಿಕ್ಸಿಯಲ್ಲಿ ಒಂದು ನಿಮಿಷ ತಿರುವಿ.
- ಮಿಲ್ಕ್ ಶೇಕ್ ನ ರುಚಿ ನೋಡಿ, ಏನಾದರೂ ಬೇಕಿದ್ದರೆ ಸೇರಿಸಿ.
- ತಯಾರಾದ ಮಿಲ್ಕ್ ಶೇಕ್ ನ್ನು ಫ್ರಿಜ್ ನಲ್ಲಿಟ್ಟು ತಣ್ಣಗಾದ ನಂತರ ಕುಡಿಯಿರಿ.
ಟಿಪ್ಸ್:
- ಹಾಲು ಸ್ವಲ್ಪ ಕಡಿಮೆ ಬಳಸುವುದಾದರೆ ಇಲ್ಲಿ ಹೇಳಿದ್ದಕಿಂತ ಹೆಚ್ಚು ನೀರು ಬಳಸಿ.
- ಮಿಲ್ಕ್ ಶೇಕ್ ನ್ನು ತಕ್ಷಣವೇ ಸರ್ವ್ ಮಾಡಬೇಕೆಂದಾದರೆ ಫ್ರಿಜ್ ನಲ್ಲಿಟ್ಟು ತಣ್ಣಗೆ ಮಾಡಿದ ಹಾಲನ್ನು ಬಳಸಿ ತಯಾರಿಸಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)