ಗಣಿಕೆ ಸೊಪ್ಪು, ಕಾಗೆ ಸೊಪ್ಪು, ಕಾಪಿಟ್ಲೆ ಇತ್ಯಾದಿ ವಿವಿಧ ಹೆಸರಿನಿಂದ ಕರೆಯಲ್ಪಡುವ ಈ ಸೊಪ್ಪಿನ ಬಗ್ಗೆ ನೀವು ಕೇಳಿರಬಹುದು. ಕಳೆ ಗಿಡಗಳಂತೆಯೇ ಎಲ್ಲಿ ಬೇಕೆಂದರಲ್ಲಿ ಬೆಳೆಯುವ ಈ ಸೊಪ್ಪು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಹೊಟ್ಟೆಯ ತೊಂದರೆಗಳು, ನೆಗಡಿ, ಕಫ ಇವಕ್ಕೆಲ್ಲ ಗಣಿಕೆ / ಕಾಗೆ ಸೊಪ್ಪಿನ ಬಳಕೆ ಪರಿಣಾಮಕಾರಿ. ಪುಟ್ಟ ಮಕ್ಕಳಂತೂ ಈ ಗಿಡದ ಪುಟ್ಟ ಹಣ್ಣುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ!
ನಾನು ಔಷಧಕ್ಕೆಂದು ಪಾಟ್ ನಲ್ಲಿ ಗಣಿಕೆ ಸೊಪ್ಪಿನ ಗಿಡಗಳನ್ನು ಬೆಳೆಸಿದ್ದೇನೆ. ಈ ಗಿಡದಲ್ಲಿ ಬಿಡುವ ಕಪ್ಪಾದ ಪುಟ್ಟ ಪುಟ್ಟ ಹಣ್ಣುಗಳೆಂದರೆ ನನ್ನ ಮಗಳಿಗೆ ಇಷ್ಟ. ಅವಳಿಗೆ ನೆಗಡಿಯಾದರೆ ನಾನು ಎರಡು ಸ್ಪೂನ್ ನಷ್ಟು ಗಣಿಕೆ ಸೊಪ್ಪಿನ ರಸಕ್ಕೆ ಸಕ್ಕರೆ / ಬೆಲ್ಲ ಸೇರಿಸಿ ದಿನಕ್ಕೊಮ್ಮೆ ಕುಡಿಸುತ್ತೇನೆ. ಇದರಿಂದ ನೆಗಡಿ, ಕಫ ಎರಡೂ ಬೇಗ ಕಡಿಮೆಯಾಗುತ್ತದೆ.
ಕೆಲ ದಿನಗಳ ಹಿಂದೆ ನನ್ನ ಅಮ್ಮನಿಗೆ ಫೋನಾಯಿಸಿದ್ದಾಗ ಅವರು ಗಣಿಕೆ ಸೊಪ್ಪಿನ ಚಟ್ನಿ ಮಾಡಬಹುದೆಂದು ಹೇಳಿದ್ದರು. ಅವರು ಹೇಳಿದಂತೆ ತಯಾರಿಸಿದ ಚಟ್ನಿ ನಮಗೆ ಬಹಳ ಇಷ್ಟವಾಯಿತು. ಬಹಳ ಸುಲಭದಲ್ಲಿ ತಯಾರಿಸಬಹುದಾದ ಈ ಚಟ್ನಿ ಊಟಕ್ಕೆ ರುಚಿ, ಹಾಗೆಯೇ ಆರೋಗ್ಯಕ್ಕೂ ಒಳ್ಳೆಯದು.
ಗಣಿಕೆ ಸೊಪ್ಪಿನ ಚಟ್ನಿ ತಯಾರಿಸುವ ವಿಧಾನ ಇಂತಿದೆ..
ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು
ಸರ್ವಿಂಗ್ಸ್: 6 - 7 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಸುಲಭ
ಬೇಕಾಗುವ ಸಾಮಗ್ರಿಗಳು:
ಕೆಲ ದಿನಗಳ ಹಿಂದೆ ನನ್ನ ಅಮ್ಮನಿಗೆ ಫೋನಾಯಿಸಿದ್ದಾಗ ಅವರು ಗಣಿಕೆ ಸೊಪ್ಪಿನ ಚಟ್ನಿ ಮಾಡಬಹುದೆಂದು ಹೇಳಿದ್ದರು. ಅವರು ಹೇಳಿದಂತೆ ತಯಾರಿಸಿದ ಚಟ್ನಿ ನಮಗೆ ಬಹಳ ಇಷ್ಟವಾಯಿತು. ಬಹಳ ಸುಲಭದಲ್ಲಿ ತಯಾರಿಸಬಹುದಾದ ಈ ಚಟ್ನಿ ಊಟಕ್ಕೆ ರುಚಿ, ಹಾಗೆಯೇ ಆರೋಗ್ಯಕ್ಕೂ ಒಳ್ಳೆಯದು.
ಗಣಿಕೆ ಸೊಪ್ಪಿನ ಚಟ್ನಿ ತಯಾರಿಸುವ ವಿಧಾನ ಇಂತಿದೆ..
ತಯಾರಿಸಲು ಬೇಕಾಗುವ ಸಮಯ: 10 ನಿಮಿಷಗಳು
ಸರ್ವಿಂಗ್ಸ್: 6 - 7 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಸುಲಭ
ಬೇಕಾಗುವ ಸಾಮಗ್ರಿಗಳು:
- ಗಣಿಕೆ / ಕಾಗೆ ಸೊಪ್ಪು - ಒಂದು ಮುಷ್ಟಿ (ನಾನು 30 - 32 ಎಲೆಗಳನ್ನು ಬಳಸಿದ್ದೇನೆ)
- ತೆಂಗಿನತುರಿ - 1 1/4 ಕಪ್
- ಒಗ್ಗರಣೆಗೆ:
ಹಸಿಮೆಣಸು - 2 (ಖಾರಕ್ಕೆ ತಕ್ಕಂತೆ)
ಜೀರಿಗೆ - 1 1/4 ಟೀ ಸ್ಪೂನ್
ಎಳ್ಳು - 1 1/4 ಟೀ ಸ್ಪೂನ್
ಸಾಸಿವೆ - 1 ಟೀ ಸ್ಪೂನ್
- ಹುಣಸೆಹಣ್ಣು - ನೆಲ್ಲಿಕಾಯಿ ಗಾತ್ರದಷ್ಟು
- ಉಪ್ಪು - ರುಚಿಗೆ ತಕ್ಕಷ್ಟು
- ನೀರು - ಸ್ವಲ್ಪ
ತಯಾರಿಸುವ ವಿಧಾನ:
ಟಿಪ್ಸ್:
- ಒಂದು ದಪ್ಪ ತಳದ ಬಾಣಲೆಯಲ್ಲಿ 1 1/2 ಟೀ ಸ್ಪೂನ್ ನಷ್ಟು ಎಣ್ಣೆ ಬಿಸಿಮಾಡಿ ಎಳ್ಳು, ಜೀರಿಗೆ ಹಾಕಿ ಪರಿಮಳ ಬರುವಂತೆ ಹುರಿದುಕೊಳ್ಳಿ. ಇದಕ್ಕೆ ಗಣಿಕೆ ಸೊಪ್ಪು ಸೇರಿಸಿ ಬಾಡಿಸಿ (ಒಂದೆರಡು ನಿಮಿಷ ಹುರಿದು) ಉರಿ ಆಫ್ ಮಾಡಿ.
- ಹುರಿದ ಮಿಶ್ರಣಕ್ಕೆ ತೆಂಗಿನತುರಿ, ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ.
- ಬಾಣಲೆಯಲ್ಲಿ 1 1/2 ಚಮಚದಷ್ಟು ಎಣ್ಣೆ ಕಾಯಿಸಿ ಸಾಸಿವೆ ಹಾಕಿ ಒಗ್ಗರಣೆ ಮಾಡಿ ರುಬ್ಬಿದ ಮಿಶ್ರಣಕ್ಕೆ ಸೇರಿಸಿ.
- ರುಚಿಕರವಾದ ಚಟ್ನಿಯನ್ನು ಅನ್ನದೊಡನೆ ಸವಿದುನೋಡಿ.
ಟಿಪ್ಸ್:
- ಈ ಚಟ್ನಿಗೆ ಹಸಿಮೆಣಸನ್ನು ಕಡಿಮೆ ಬಳಸುವುದಾದರೆ 2 ಒಣಮೆಣಸು ಹಾಗೂ 1 ಹಸಿಮೆಣಸು ಹಾಕಬಹುದು.
- ಚಟ್ನಿಯನ್ನು ಫ್ರಿಜ್ ನಲ್ಲಿ ಇಡದೆ ಬಳಸಬೇಕಿದ್ದಲ್ಲಿ ಬಿಸಿ ಮಾಡಿಟ್ಟು ಬಳಸಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Hi, Thanks for dropping in. I will be happy to hear your feedback :)